Viral Video: ಬೈಕ್ ನಲ್ಲಿ ಪತಿಯನ್ನು ಕೂರಿಸಿಕೊಂಡು ಜಾಲಿ ರೈಡ್ ಹೊರಟ ಅಜ್ಜಿ! ನಾಚಿ ನೀರಾದ ತಾತ…

ಮಹಿಳೆಯೊಬ್ಬರು ತನ್ನ ಗಂಡನನ್ನು ಸ್ಕೂಟಿಯಲ್ಲಿ ಹಿಂದೆ ಕೂರಿಸಿಕೊಂಡು ಜಾಲಿ ರೈಡ್ ಹೊರಟಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Written by - Bhavishya Shetty | Last Updated : Sep 16, 2022, 01:10 PM IST
    • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ
    • ಅದರಲ್ಲಿ ವೃದ್ಧ ದಂಪತಿ ಬೈಕ್ ರೈಡ್ ಮಾಡುತ್ತಿರುವುದು ಕಂಡುಬಂದಿದೆ
    • ಪತಿಯನ್ನು ಕೂರಿಸಿಕೊಂಡು ಪತ್ನಿ ಜಾಲಿರೈಡ್ ಹೊರಟಿದ್ದಾರೆ
Viral Video: ಬೈಕ್ ನಲ್ಲಿ ಪತಿಯನ್ನು ಕೂರಿಸಿಕೊಂಡು ಜಾಲಿ ರೈಡ್  ಹೊರಟ ಅಜ್ಜಿ! ನಾಚಿ ನೀರಾದ ತಾತ… title=
Viral Video

ಇಂಟರ್ನೆಟ್‌ನಲ್ಲಿ ಸರ್ಚಿಂಗ್ ಮಾಡುವಾಗ ನೀವು ಅನೇಕ ವೀಡಿಯೊಗಳನ್ನು ನೋಡಿರಬೇಕು, ಆದರೆ ಈ ವೀಡಿಯೊ ನಿಮ್ಮ ಹೃದಯವನ್ನು ಸ್ಪರ್ಶಿಸುತ್ತದೆ. ಆಗಾಗ ಬೀದಿಗಳಲ್ಲಿ ಗಂಡಸರು ತಮ್ಮ ಹೆಂಡತಿಯನ್ನು ಹಿಂದೆ ಕೂರಿಸಿಕೊಂಡು ಹೋಗುವುದನ್ನು ನೀವು ನೋಡಿರಬಹುದು. ಆದರೆ ಈ ವಿಡಿಯೋ ನೋಡಿದ ನಂತರ ಮಹಿಳೆಯರು ತುಂಬಾ ಖುಷಿಯಾಗಬಹುದು, ಜತೆಗೆ ಪ್ರೇರಿತರಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಅದರಲ್ಲಿ ವೃದ್ಧ ದಂಪತಿ ಬೈಕ್ ರೈಡ್ ಮಾಡುತ್ತಿರುವುದು ಖುಷಿ ತಂದಿದೆ.

ಇದನ್ನೂ ಓದಿ:video : ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗ ಮಾಡಿಬಿಟ್ಟನಾ ಈ ಕೆಲಸ

ಹೌದು, ಮಹಿಳೆಯೊಬ್ಬರು ತನ್ನ ಗಂಡನನ್ನು ಸ್ಕೂಟಿಯಲ್ಲಿ ಹಿಂದೆ ಕೂರಿಸಿಕೊಂಡು ಜಾಲಿ ರೈಡ್ ಹೊರಟಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಗಂಡಸರು ಬೈಕ್ ರೈಡ್ ಮಾಡಿದರೆ ಹೆಂಗಸರು ಹಿಂಬದಿಯಲ್ಲಿ ಕುಳಿತುಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಈ ವಿಡಿಯೋದಲ್ಲಿ ಹೆಂಗಸರಂತೆ ಈ ವ್ಯಕ್ತಿ ಕೂಡ ಕುಳಿತುಕೊಂಡಿದ್ದು, ನೋಡುಗರಿಗೆ ಸಖತ್ ಮಜಾ ನೀಡುತ್ತಿದೆ.  

ಸುಶ್ಮಿತಾ ಡೋರಾ ಎಂಬ ಬಳಕೆದಾರರು ಸೆಪ್ಟೆಂಬರ್ 3 ರಂದು Instagram ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ವಯಸ್ಸಾದ ಮಹಿಳೆ ಸೀರೆಯನ್ನು ಧರಿಸಿ ಬೈಕ್‌ನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಅದೆ ಬೈಕ್ ನ ಹಿಂಭಾಗದಲ್ಲಿ ಬಿಳಿ ಬಟ್ಟೆಯನ್ನು ಧರಿಸಿದ ವೃದ್ಧರೊಬ್ಬರು ಕುಳಿತಿದ್ದಾರೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅಂದಿನಿಂದ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನ ಚಪ್ಪಾಳೆ ತಟ್ಟುತ್ತಿದ್ದಾರೆ.

ಇದನ್ನೂ ಓದಿ: Monkey Video : ಶಾಲೆಗೆ ಬಂದ ಮಂಗಣ್ಣ.! ವಿದ್ಯಾರ್ಥಿ ಪಕ್ಕ ಕುಳಿತು ಮಾಡಿದ ಕಿತಾಪತಿ ನೋಡಿ

ವೀಡಿಯೋ ವೈರಲ್ ಆದ ನಂತರ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಬಳಕೆದಾರ “ಯಾವಾಗಲೂ ಪುರುಷನು ಬೈಕು ಓಡಿಸುತ್ತಾನೆ ಮತ್ತು ಮಹಿಳೆ ಹಿಂದೆ ಕುಳಿತಿರುತ್ತಾಳೆ, ಆದರೆ ಇಲ್ಲಿ ವ್ಯತಿರಿಕ್ತವಾಗಿದೆ. ಈ ವಯಸ್ಸಿನಲ್ಲಿ ಬೈಕ್ ಓಡಿಸುವುದು ನೋಡಿದ್ದೀರಾ?” ಎಂದು ಬರೆದುಕೊಂಡಿದ್ದಾನೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ವೀಡಿಯೊವನ್ನು ಸುಮಾರು 3.6 ಮಿಲಿಯನ್ ವೀಕ್ಷಕರು ನೋಡಿದ್ದಾರೆ. ಪೋಸ್ಟ್ ಇದುವರೆಗೆ 3.6 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News