Viral Video: ಜಪಾನ್ ಭೂಕಂಪದ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.. ಕಾರಣ? ವಿಡಿಯೋ ನೋಡಿ ಗೊತ್ತಾಗುತ್ತೆ!

Viral Video: ಬುಧವಾರದ ಹೊತ್ತಿಗೆ, ಜಪಾನ್ ಭೂಕಂಪದಲ್ಲಿ ಸಾವನ್ನಪ್ಪಿದವಾರ ಸಂಖ್ಯೆ 62ಕ್ಕೆ ತಲುಪಿದೆ, ಆದರೆ ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಇನ್ನೂ ಕೂಡ ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ. (Viral News In Kannada)  

Written by - Nitin Tabib | Last Updated : Jan 6, 2024, 05:09 PM IST
  • ಭೂಮಿ ಕಂಪಿಸುವ ಈ ವಿಡಿಯೋವನ್ನು ಕೇವಲ ಎರಡೇ ದಿನಗಳಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ,
  • 2 ಲಕ್ಷ 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
  • ವೀಡಿಯೊಗೆ ಪ್ರತಿಕ್ರಿಯಿಸಿದ ಇನ್ಸ್ಟಾಗ್ರಾಮ್ ಬಳಕೆದಾರರು ತೀವ್ರ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
Viral Video: ಜಪಾನ್ ಭೂಕಂಪದ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.. ಕಾರಣ? ವಿಡಿಯೋ ನೋಡಿ ಗೊತ್ತಾಗುತ್ತೆ! title=

Japan: ಹೊಸ ವರ್ಷದ ಮೊದಲ ದಿನವಾದ ಜನವರಿ 1 ರ ಮುಂಜಾನೆ, ಜಪಾನ್ 7.6 ತೀವ್ರತೆಯ ಭೂಕಂಪಕ್ಕೆ ತತ್ತರಿಸಿದೆ. ಇಶಿಕಾವಾ ಪ್ರಾಂತ್ಯದಲ್ಲಿ ಭೂಕಂಪನ ಕಡಿಮೆಯಾಗಿದೆ, ಆದರೆ, ಅದು ದೇಶಾದ್ಯಂತ ಪ್ರತಿದ್ವ್ಹನಿಸಿದೆ. ಬುಧವಾರದ ಹೊತ್ತಿಗೆ, ಭೂಕಂಪದಲ್ಲಿ ಕನಿಷ್ಠ 62 ಜನರು ಸಾವನ್ನಪ್ಪಿದ್ದಾರೆ, ಆದರೆ ರಕ್ಷಣಾ ಕಾರ್ಯಕರ್ತರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. (Viral News In Kannada)

ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಭೂಮಿಯ ನಡುಗುವಿಕೆ
ಜಪಾನ್ ಕರಾವಳಿಯಲ್ಲಿ
ಭೂಕಂಪದ ಕೇಂದ್ರಬಿಂದುದಿಂದಾಗಿ, ಭಾರಿ ಹಾನಿಯ ಜೊತೆಗೆ, ಅನೇಕ ಸ್ಥಳಗಳಲ್ಲಿ ನೆಲದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. javyfeu ಹೆಸರಿನ ಖಾತೆಯಿಂದ ಭೂಕಂಪದ ಸಮಯದಲ್ಲಿ ಸೆರೆಹಿಡಿಯಲಾದ ದೃಶ್ಯದ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ  ಹಂಚಿಕೊಳ್ಳಲಾಗಿದೆ, ಅದನ್ನು ನೋಡಿ ನೀವು ಕೂಡ ದಂಗಾಗುವಿರಿ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ಭೂಕಂಪದ ಸಮಯದಲ್ಲಿ ನೆಲದ ಮೇಲ್ಮೈಯಲ್ಲಿ ಅಲೆಅಲೆಯಾದ ಚಲನೆಯನ್ನು ತೋರಿಸುತ್ತಿದೆ. ವೀಡಿಯೋ ನೋಡಿದರೆ ಭೂಮಿಯೊಳಗೆ ಸಮುದ್ರದ ತರಹದ ಅಲೆಗಳು ಏಳುತ್ತಿರುವಂತೆ ಮತ್ತು ಭೂಮಿಯ ಮೇಲ್ಮೈ ನಡುಗುತ್ತಿರುವಂತೆ ಭಾಸವಾಗುತ್ತಿದೆ.

ಇದನ್ನೂ ಓದಿ-Trending Video: 'ಗಜರಾಜನಿಗೆ ಇರುವ ಈ ಪ್ರಜ್ಞೆ ಮನುಷ್ಯರಿಗೆ ಏಕೆ ಇಲ್ಲ', ಅಷ್ಟಕ್ಕೂ ಆನೆ ಮಾಡಿದ್ದಾದರು ಏನು?

ಭೂಮಿ ಕಂಪಿಸುವ ಈ ವಿಡಿಯೋವನ್ನು ಕೇವಲ ಎರಡೇ ದಿನಗಳಲ್ಲಿ ಒಂದು ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ, 2 ಲಕ್ಷ 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ವೀಡಿಯೊಗೆ ಪ್ರತಿಕ್ರಿಯಿಸಿದ ಇನ್ಸ್ಟಾಗ್ರಾಮ್ ಬಳಕೆದಾರರು ತೀವ್ರ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, ನಾನು ಆ ಕೆಂಪು ದೀಪ ಅಥವಾ ಅವಳು ಕುಳಿತಿರುವ ಯಾವುದೇ ಸ್ಥಳಕ್ಕೆ ಹೋಗುತ್ತಿದ್ದೆ ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮತ್ತೊರ್ವ ಬಳಕೆದಾರರು 'ಭೂಮಿಯು ಉಸಿರಾಡುತ್ತದೆ' ಎಂದಿದ್ದಾರೆ.  ಈ ವಿದ್ಯಮಾನದ ಹಿಂದಿನ ನಿಖರ ವಿಜ್ಞಾನ ಪತ್ತೆಹಚ್ಚಲು ಪ್ರಯತ್ನಿಸಿದ ಮತ್ತೊರ್ವ ಬಳಕೆದಾರರು,  'ಒಡೆಯಲು ಯತ್ನಿಸುತ್ತಿರುವ ಒಂದು ಶಿಲಾಪಾಕ ಗುಳ್ಳೆ' ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ-Viral Video: ನ್ಯೂಜಿಲ್ಯಾಂಡ್ ನಲ್ಲಿನ ಈ ಮಹಿಳಾ ಸಂಸದೆಯ ಕಡಕ್ ಭಾಷಣ ವೈರಲ್ ಆಗುತ್ತಿದೆ... ವಿಡಿಯೋ ನೋಡಿ!

ವೈರಲ್ ವಿಡಿಯೋ ಇಲ್ಲಿದೆ ನೋಡಿ

 
 
 
 

 
 
 
 
 
 
 
 
 
 
 

A post shared by Javier Hugo Feu (@javyfeu)

ವಿಡಿಯೋ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News