Viral Video: ಜೆಸಿಬಿ ಮೇಲೆ ಕುಳಿತು ಮದುವೆ ಮಂಟಪಕ್ಕೆ ವರನ ಎಂಟ್ರಿ, 'ಇದ್ಯಾವ ಪದ್ಧತಿ ಬ್ರೋ' ಎಂದ ನೆಟ್ಟಿಗರು

Viral Video: ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ, ವರನು ಕುದುರೆಯ ಮೇಲೆ ಮದುವೆಯ ದಿಬ್ಬಣವನ್ನು ತರುತ್ತಾನೆ. ಮದುವೆಗಳಲ್ಲಿ, ವರನು ಕುದುರೆಯ ಮೇಲೆ ಪ್ರವೇಶಿಸುವುದನ್ನು ನೀವು ಅನೇಕ ಬಾರಿ ನೋಡಿರಬೇಕು. ಆದರೆ ವರನೊಬ್ಬ ಜೆಸಿಬಿಯಲ್ಲಿ ಎಂಟ್ರಿ ತೆಗೆದುಕೊಳ್ಳುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲದಿದ್ದರೆ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. (Viral News In Kannada)  

Written by - Nitin Tabib | Last Updated : Jan 25, 2024, 06:59 PM IST
  • ವಿಡಿಯೋದಲ್ಲಿ ವರ ಜೆಸಿಬಿಯಲ್ಲಿ ಕುಳಿತಿರುವುದನ್ನು ನೋಡಬಹುದು. ವರನು ಜೆಸಿಬಿ ಲೋಡರ್ ಮೇಲೆ ನಿಂತಿರುವುದು ಕಂಡುಬರುತ್ತಿದೆ ,
  • ಕೆಳಗೆ ಇದ್ದ ಸಂಬಂಧಿಕರು ಆತನ ಈ ಎಂಟ್ರಿ ನೋಡುತ್ತಿದ್ದಾರೆ.
  • ವರನ ಈ ವಿಚಿತ್ರ ಪ್ರವೇಶವನ್ನು ಕೆಲವರು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡುತ್ತಿದ್ದರೆ, ಕೆಲವರು ನಗುತ್ತಿದ್ದಾರೆ.
Viral Video: ಜೆಸಿಬಿ ಮೇಲೆ ಕುಳಿತು ಮದುವೆ ಮಂಟಪಕ್ಕೆ ವರನ ಎಂಟ್ರಿ, 'ಇದ್ಯಾವ ಪದ್ಧತಿ ಬ್ರೋ' ಎಂದ ನೆಟ್ಟಿಗರು title=

ನವದೆಹಲಿ: ಖರ್ಮಾಸ್ ನಂತರ ಮತ್ತೊಮ್ಮೆ ಮದುವೆ ಸೀಸನ್ ಆರಂಭಗೊಂಡಿದೆ. ಒಂದರ ಮೇಲೊಂದರಂತೆ ಮದುವೆಗಳು ನಡೆಯುತ್ತಿವೆ. ಇದರ ಪರಿಣಾಮ ನಿಜ ಜೀವನದಲ್ಲಿ ಮಾತ್ರವಲ್ಲ ರೀಲ್ ಲೈಫ್ ನಲ್ಲೂ ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಂದಕ್ಕಿಂತ ಹೆಚ್ಚು ವಿಡಿಯೋಗಳು ಕಾಣಲು ಸಿಗುತ್ತಿವೆ. ಅವುಗಳನ್ನು ಜನರು ನೋಡುವುದು ಮಾತ್ರವಲ್ಲದೆ ತಮ್ಮ ಸ್ನೇಹಿತರಿಗೆ ಟ್ಯಾಗ್ ಮಾಡುತ್ತಿದ್ದಾರೆ. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ಜನರು ತಮಾಷೆ ಭರಿತ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ (Viral News In Kannada)

ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ, ವರನು ಕುದುರೆಯ ಮೇಲೆ ಮದುವೆಯ ದಿಬ್ಬಣವನ್ನು  ತರುತ್ತಾನೆ. ಮದುವೆಗಳಲ್ಲಿ, ವರನು ಕುದುರೆಯ ಮೇಲೆ ಪ್ರವೇಶಿಸುವುದನ್ನು ಹಲವು ಬಾರಿ ನೋಡಿರಬಹುದು. ಆದರೆ ವರನೊಬ್ಬ ಜೆಸಿಬಿಯಲ್ಲಿ ಎಂಟ್ರಿ ತೆಗೆದುಕೊಳ್ಳುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ ಭಾರಿ  ವೈರಲ್ ಆಗುತ್ತಿದೆ. ಇದನ್ನು ನೋಡಿ ಕೆಲವರು ಆಶ್ಚರ್ಯಪಟ್ಟರೆ, ಕೆಲವರಿಗೆ ತಮ್ಮ ನಗು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ-Viral Video: ಬೈಕ್ ಮೇಲೆ ಮೈ ಕೊರೆಯೋ ಚಳಿಯಿಂದ ಪಾರಾಗಲು ಮಹಿಳೆ ಮಾಡಿದ ಈ ಉಪಾಯ...! ವಿಡಿಯೋ ನೋಡಿ

ವಿಡಿಯೋದಲ್ಲಿ ವರ ಜೆಸಿಬಿಯಲ್ಲಿ ಕುಳಿತಿರುವುದನ್ನು ನೋಡಬಹುದು. ವರನು ಜೆಸಿಬಿ ಲೋಡರ್ ಮೇಲೆ ನಿಂತಿರುವುದು ಕಂಡುಬರುತ್ತಿದೆ , ಕೆಳಗೆ ಇದ್ದ ಸಂಬಂಧಿಕರು ಆತನ ಈ ಎಂಟ್ರಿ ನೋಡುತ್ತಿದ್ದಾರೆ. ವರನ ಈ ವಿಚಿತ್ರ ಪ್ರವೇಶವನ್ನು ಕೆಲವರು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡುತ್ತಿದ್ದರೆ, ಕೆಲವರು ನಗುತ್ತಿದ್ದಾರೆ.

ಇದನ್ನೂ ಓದಿ-Viral Video: ಬೈಕ್ ಹಿಂದೆ ಕುಳಿತು ಪತ್ನಿ ಮಾಡುವ ಕೆಲಸ ನೋಡಿ, 'ಭಗವಂತ ಇಂಥಾ ಪತ್ನಿ ಎಲ್ಲರಿಗೂ ಕೊಡು' ಎಂದ ಜನ!

ಈ ಕ್ಲಿಪ್ ಅನ್ನು @ck_official_555 ಹೆಸರಿನ ಖಾತೆಯಿಂದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ನೋಡಿದ್ದಾರೆ ಮತ್ತು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರ, 'ಭಯ್ಯಾನ ರಾಯಲ್ ಎಂಟ್ರಿ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಮದುವೆಯ ದಿನ ಈ ರೀತಿ ಯಾರು ಎಂಟ್ರಿ ಕೊಡುತ್ತಾರೆ ಬ್ರೋ?' ಎಂದು ಪ್ರಶ್ನಿಸಿದ್ದಾರೆ. ಮೂರನೇ ಬಳಕೆದಾರರು, 'ಇದು ಬ್ಯಾಂಗ್ ಎಂಟ್ರಿ' ಎಂದಿದ್ದಾರೆ. ಇನ್ನೂ ಹಲವರೂ ಕೂಡ ಕಾಮೆಂಟ್ ಮಾಡುತ್ತಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News