ನವದೆಹಲಿ: ಬೇಸಿಗೆಯ ಬಿಸಿ ವಾತಾವರಣದಲ್ಲಿ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಕಾಮನ್. ತಂಪು ತಂಪು ಕೂಲ್ ಕೂಲ್ ಅಂತಾ ಕೂಲ್‌ಡ್ರಿಂಗ್ಸ್ ಸೇವಿಸಿ ಬೇಸಿಗೆಯಲ್ಲಿ ತಂಪಾಗಿರಬೇಕು ಅನ್ನೋರಿಗೆ ಈ ಒಂದು ವಿಡಿಯೋ ಆಘಾತ ನೀಡಿದೆ. ವಿಶ್ವದ ಅತ್ಯಂತ ಜನಪ್ರಿಯ ತಂಪು ಪಾನೀಯಗಳಲ್ಲಿ ಒಂದಾಗಿರುವ ಕೋಕಾ-ಕೋಲಾದ ನಕಲಿ ಕೂಲ್‌ಡ್ರಿಂಗ್ಸ್ ತಯಾರಿಕೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ನೋಡಿದ್ರೆ ಇನ್ನೆಂದು ನೀವು ಕೂಲ್‌ಡ್ರಿಂಗ್ಸ್ ಸಹವಾಸಕ್ಕೆ ಹೋಗುವುದಿಲ್ಲ. ಅತ್ಯಂತ ಕೊಳಕು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಕೋಕಾ-ಕೋಲಾದ ಲೇಬಲ್ ಇರುವ ಬಾಟಲಿಯೊಳಗೆ ನಕಲಿ ಕೋಲಾ ಅಂದರೆ ಕೊಳಕು ಮಿಶ್ರಿತ ನೀರನ್ನು ತುಂಬಿಸುತ್ತಿರುವ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಹಲ್‌ಚಲ್ ಸೃಷ್ಟಿಸುತ್ತಿದೆ.
ಇದನ್ನೂ ಓದಿ: ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..!
Scaryyyy…
Everything in this world is fabricated or adulterated these days …
— Vineeth K (@DealsDhamaka) March 29, 2024
ಈ ನಕಲಿ ಕೋಲಾವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರಂತೆ. ಕಡಿಮೆ ಬೆಲೆಯಾಗಿದ್ದರಿಂದ ಜನರು ಸಹ ಇವುಗಳನ್ನು ಖರೀದಿಸಿ ಕುಡಿಯುತ್ತಾರೆ. ಆದರೆ ಈ ನಕಲಿ ಕೋಲಾವನ್ನು ಕುಡಿಯುವುದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ಪ್ರತಿಯೊಬ್ಬರೂ ಸಹ ತಂಪು ಪಾನೀಯಗಳ ಮೊರೆ ಹೋಗುತ್ತಾರೆ. ಹೀಗಾಗಿಯೇ ನಕಲಿ ಕೋಲಾವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಯಾವುದೇ ರೀತಿ ಸ್ವಚ್ಛವಿಲ್ಲದ ಪ್ರದೇಶದಲ್ಲಿ ತಯಾರು ಆಗುವ ಈ ನಕಲಿ ಕೋಲಾ ಕುಡಿದರೆ ನಾವು ಹಲವಾರು ರೋಗಗಳಿಗೆ ತುತ್ತಾಗುವುದ ಗ್ಯಾರಂಟಿ.
@DealsDhamaka ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಬೇಸಿಗೆಯಲ್ಲಿ ಕೂಲ್‌ಡ್ರಿಂಗ್ಸ್ ಸೇವಿಸುವಾಗ ಹುಷಾರು ಅಂತಾ ಅನೇಕರು ಕಾಮೆಂಟ್ ಮಾಡಿದ್ದಾರೆ. ನಾನು ಕೂಲ್‌ಡ್ರಿಂಗ್ಸ್ ಸಹವಾಸಕ್ಕೆ ಹೋಗಲ್ಲವೆಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: ಚಲಿಸುವ ರೈಲಿನಲ್ಲಿ ಕಳ್ಳತನ ಮಾಡಿ ಜಿಗಿದು ಪಾರಾದ ಕಳ್ಳ..! ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.