Viral Video: ಡ್ಯಾನ್ಸ್‌ ಸ್ಪರ್ಧೆ ವೇಳೆ ಪರಸ್ಪರ ಹೊಡೆದಾಡಿಕೊಂಡ ಡ್ಯಾನ್ಸರ್‌ಗಳು!

ಎರಡು ತಂಡಗಳ ನಡುವೆ ಅಂಡರ್‌ ಬ್ಯಾಟಲ್‌ ಗ್ರೌಂಡ್‌ ಡ್ಯಾನ್ಸ್‌ ನಡೆಯುತ್ತಿತ್ತು. ಈ ವೇಳೆ ಸ್ಪರ್ಧಿಗಳು ನೃತ್ಯ ಮಾಡಲು ಮುಂದಾಗುತ್ತಾರೆ. ಈ ವೇಳೆ ಒಬ್ಬ ಡ್ಯಾನ್ಸರ್‌ ಮತ್ತೊಬ್ಬನೊಂದಿಗೆ ಕಿರಿಕ್‌ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಡ್ಯಾನ್ಸ್‌ ಮಾಡುತ್ತಲೇ ಆತನ ಮೇಲೆ ಹಾರುತ್ತಾನೆ. ಸಿಟ್ಟಿನಿಂದ ಆತನ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಸ್ಥಳದಲ್ಲಿ ಒಂದುಕ್ಷಣ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.

Written by - Puttaraj K Alur | Last Updated : Feb 3, 2024, 05:15 PM IST
  • ಬ್ಯಾಟಲ್‌ ಗ್ರೌಂಡ್‌ ಡ್ಯಾನ್ಸ್‌ ವೇಳೆ ಪರಸ್ಪರ ಹೊಡೆದಾಡಿಕೊಂಡ ಡ್ಯಾನ್ಸರ್‌ಗಳು
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
  • ಡ್ಯಾನ್ಸರ್‌ಗಳ ಹೊಡೆದಾಟದ ವಿಡಿಯೋ ಕಂಡು ಬೆರಗಾದ ನೆಟಿಜನ್ಸ್‌ಗಳು
Viral Video: ಡ್ಯಾನ್ಸ್‌ ಸ್ಪರ್ಧೆ ವೇಳೆ ಪರಸ್ಪರ ಹೊಡೆದಾಡಿಕೊಂಡ ಡ್ಯಾನ್ಸರ್‌ಗಳು! title=
ಹೊಡೆದಾಡಿಕೊಂಡ ಡ್ಯಾನ್ಸರ್‌ಗಳು!

ನವದೆಹಲಿ: ನೀವು ಅಂಡರ್‌ ಬ್ಯಾಟಲ್‌ ಗ್ರೌಂಡ್‌ ಡ್ಯಾನ್ಸ್‌ ಸ್ಪರ್ಧೆ ಬಗ್ಗೆ ಕೇಳಿರಬಹುದು. ಎರಡು ಟೀಂಗಳ ನಡುವೆ ಮುಖಾಮುಖಿ ನಡೆಯುವ ಈ ಸ್ಪರ್ಧೆ ನೋಡಲು ರೋಮಾಂಚನಕಾರಿಯಾಗಿರುತ್ತದೆ. ಡ್ಯಾನ್ಸ್‌ ಮಾಡುತ್ತಲೇ ಸ್ಪರ್ಧಿಗಳು ಒಬ್ಬರನೊಬ್ಬರು ಹೀಯಾಳಿಸಿಕೊಂಡು, ಕಾಲೆಳೆದುಕೊಳ್ಳುತ್ತಾರೆ. ಇದೊಂದು ಅದ್ಭುತ ಅನುಭವ ನೀಡುವ ಡ್ಯಾನ್ಸ್‌ ಬ್ಯಾಟಲ್‌ ಆಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಇದೇ ಅಂಡರ್‌ ಬ್ಯಾಟಲ್‌ ಗ್ರೌಂಡ್‌ ಡ್ಯಾನ್ಸ್‌ನ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ.

ವಿಡಿಯೋದಲ್ಲಿ ಡ್ಯಾನ್ಸ್‌ ಮಾಡುತ್ತಲೇ ಸ್ಪರ್ಧಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಇದ್ದಕ್ಕಿದ್ದಂತೆಯೇ ಸ್ಥಳದಲ್ಲಿನ ವಾತಾವರಣವೇ ಹದಗೆಟ್ಟು ಹೋಗುತ್ತದೆ. ಇದಕ್ಕೆ ಕಾರಣವಾಗಿದ್ದು ಡ್ಯಾನ್ಸರ್‌ಗಳ ಕಿತ್ತಾಟ. ಈ ವಿಡಿಯೋವನ್ನು kaleshkomedy ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಕೇವಲ ಹಿಂದೂಗಳು ಮಾತ್ರ ಈ 6 ದೇವಾಲಯಗಳಿವೆ ಭೇಟಿ ನೀಡಬಹುದು..! ಇತರರಿಗೆ ಪ್ರವೇಶ ನಿಷೇಧ

ಅಂದಹಾಗೆ ಎರಡು ತಂಡಗಳ ನಡುವೆ ಅಂಡರ್‌ ಬ್ಯಾಟಲ್‌ ಗ್ರೌಂಡ್‌ ಡ್ಯಾನ್ಸ್‌ ನಡೆಯುತ್ತಿತ್ತು. ಈ ವೇಳೆ ಸ್ಪರ್ಧಿಗಳು ನೃತ್ಯ ಮಾಡಲು ಮುಂದಾಗುತ್ತಾರೆ. ಈ ವೇಳೆ ಒಬ್ಬ ಡ್ಯಾನ್ಸರ್‌ ಮತ್ತೊಬ್ಬನೊಂದಿಗೆ ಕಿರಿಕ್‌ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಡ್ಯಾನ್ಸ್‌ ಮಾಡುತ್ತಲೇ ಆತನ ಮೇಲೆ ಹಾರುತ್ತಾನೆ. ಸಿಟ್ಟಿನಿಂದ ಆತನ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಸ್ಥಳದಲ್ಲಿ ಒಂದುಕ್ಷಣ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.

ಡ್ಯಾನ್ಸರ್‌ಗಳು ಹೊಡೆದಾಟವನ್ನು ತಪ್ಪಿಸಲು ಕೆಲವರು ಮುಂದಾಗುತ್ತಾರೆ. ಈ ವೇಳೆ ಹೊಡೆಸಿಕೊಂಡ ವ್ಯಕ್ತಿ ಸಿಟ್ಟಿನಿಂದ ತನ್ನ ಮೇಲೆ ಹಲ್ಲೆ ನಡೆಸಿದ ಡ್ಯಾನ್ಸರ್‌ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾವಿರಾರು ಜನರು ಶೇರ್‌ ಮಾಡಿದ್ದು, ನೂರಾರು ಜನರು ವಿವಿಧ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ಎಣ್ಣೆ ಏಟಲ್ಲಿ ನಡೆಯಲಾಗದೆ, ತುರ್ತು ಪರಿಸ್ಥಿತಿ ಅಂತ 108ಗೆ ಕರೆ ಮಾಡಿದ ಕುಡುಕ..! ಮುಂದೆನಾಯ್ತು..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News