Viral Video: ಎರೆಡೆರಡು ಹಾವನ್ನು ಬರಿಗೈಯಲ್ಲಿ ಹಿಡಿದ ಮಹಿಳೆ, ವಿಡಿಯೋ ವೈರಲ್

Snake Viral Video: ಸಾಮಾಜಿಕ ಜಾಲತಾಣದಲ್ಲಿ ಹಲವು ರೀತಿಯ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವಿನ ವಿಡಿಯೋಗಳು ಜನರ ಹೆಚ್ಚಿನ ಆಕರ್ಷಕ ವಿಡಿಯೋಗಳು ಎಂತಲೇ ಹೇಳಬಹುದು. ಸದ್ಯ, ಈ ವಿಡಿಯೋದಲ್ಲಿ ಮಹಿಳೆಯೊಬ್ಬರ ಸಾಹಸವನ್ನು ಕಾಣಬಹುದು. 

Written by - Yashaswini V | Last Updated : Aug 7, 2023, 09:42 AM IST
  • ಕೆಲವೇ ಸೆಕೆಂಡ್ ಗಳ ಈ ವಿಡಿಯೋದಲ್ಲಿ ಮೊದಲಿಗೆ ಮಹಿಳೆಯೊಬ್ಬಳು ಪಕ್ಕದ ಖಾಲಿ ಜಾಗವನ್ನು ನೋಡುತ್ತಾ ನಿಧಾನವಾಗಿ ಕೆಳಗೆ ಇಳಿಯುತ್ತಾಳೆ.
  • ಬಳಿಕ ಇದ್ದಕ್ಕಿದ್ದಂತೆ ಕಂಬಿ ದಾಟಿ ಮೋರಿ ಪಕ್ಕಕ್ಕೆ ನೆಗೆಯುವ ಮಹಿಳೆ ಎರಡೂ ಕೈಗಳಿಂದ ಎರಡು ಹಾವುಗಳನ್ನು ಹಿಡಿಯುತ್ತಾಳೆ.
Viral Video:  ಎರೆಡೆರಡು ಹಾವನ್ನು ಬರಿಗೈಯಲ್ಲಿ ಹಿಡಿದ ಮಹಿಳೆ, ವಿಡಿಯೋ ವೈರಲ್  title=

Woman Catches Two Snakes In Bare Hands Video Viral: ಅತ್ಯಂತ ವಿಷಕಾರಿ ಪ್ರಾಣಿ ಎಂದ ಕೂಡಲೇ ತಕ್ಷಣ ನೆನಪಾಗುವುದು ಹಾವು. ಸಾಮಾನ್ಯವಾಗಿ ಹಾವಿನ ಹಲ್ಲುಗಳಲ್ಲಿ ವಿಷವಿರುತ್ತದೆ. ಕೆಲವು ಹಾವುಗಳ ಉಸಿರಿನಲ್ಲೂ ವಿಷವಿರುತ್ತಂತೆ. ಅದೇನೇ ಇರಲಿ ಹಾವು ಎಂದರೆ ಯಾರಿಗೆ ಆದರೂ ಹೆದರಿಕೆ ಇದ್ದೇ ಇರುತ್ತದೆ. ಆದರಿಲ್ಲಿ ಮಹಿಳೆಯೊಬ್ಬರು ಒಟ್ಟೊಟ್ಟಿಗೆ ಎರೆಡೆರಡು ಹಾವುಗಳನ್ನು ಹಿಡಿಯುವ ದೃಶ್ಯ ಸದ್ಯ ಇಂಟರ್ನೆಟ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. 

ಕೆಲವೇ ಸೆಕೆಂಡ್ ಗಳ ಈ ವಿಡಿಯೋದಲ್ಲಿ ಮೊದಲಿಗೆ ಮಹಿಳೆಯೊಬ್ಬಳು ಪಕ್ಕದ ಖಾಲಿ ಜಾಗವನ್ನು ನೋಡುತ್ತಾ ನಿಧಾನವಾಗಿ ಕೆಳಗೆ ಇಳಿಯುತ್ತಾಳೆ. ಬಳಿಕ ಇದ್ದಕ್ಕಿದ್ದಂತೆ ಕಂಬಿ ದಾಟಿ ಮೋರಿ ಪಕ್ಕಕ್ಕೆ ನೆಗೆಯುವ ಮಹಿಳೆ ಎರಡೂ ಕೈಗಳಿಂದ ಎರಡು ಹಾವುಗಳನ್ನು ಹಿಡಿಯುತ್ತಾಳೆ. ಅದರಲ್ಲಿ ಒಂದು ಹಾವು ನುಳುಚಿ ತಪ್ಪಿಸಿಕೊಳ್ಳಲು ಯತ್ನಿಸುತ್ತದೆ. ಹಾವುಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ ಆದರೂ, ಆಕೆ ತನ್ನ ಪ್ರಯತ್ನವನ್ನು ಮುಂದುವರೆಸಿ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. 

ಇದನ್ನೂ ಓದಿ- Viral Video: ಸಿಳ್ಳೆ ಹೊಡೆದು ಸಿಟ್ಟು ಹೊರ ಹಾಕುವನು ಈ ಉಗ್ರ ನಾಗರ.!

ಇದೇ ವರ್ಷ ಏಪ್ರಿಲ್ 18ರಂದು ಇನ್ಸ್ಟಾಗ್ರಾಂ ಖಾತೆಯಲ್ಲಿ  @dekhbhai ಎಂಬ ಇನ್ಸ್ಟಾ ಅಕೌಂಟ್ ನಿಂದ ಆಕೆ ಅವುಗಳಿಗೆ ಹೆದರುವುದಿಲ್ಲ, ನಿರ್ಭೀತ ಮಹಿಳೆ (She is not afraid of them 😳 Fearless woman) ಎಂಬ ಶೀರ್ಷಿಕೆಯೊಂದಿಗೆ ಈ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬರಿಗೈಯಲ್ಲಿ ಹಾವು ಹಿಡಿಯುವ ಮಹಿಳೆ ಹಾವು ಹಿಡಿಯುವ ಸಂದರ್ಭದಲ್ಲಿ ಬೇರೆ ಯಾವುದೇ ರೀತಿಯ ಸುರಕ್ಷತಾ ಕ್ರಮವನ್ನೂ ಕೂಡ ತೆಗೆದುಕೊಂಡಿಲ್ಲ. 

ಇದನ್ನೂ ಓದಿ- ರೀಲ್ ಅಲ್ಲ… ರಿಯಲ್! ನಿಂತಿದ್ದ ಟ್ರಕ್’ಗೆ ಕಾರು ಡಿಕ್ಕಿ..! ಇಲ್ಲಿದೆ ರೋಮಾಂಚನಕಾರಿ ಆಕ್ಷನ್ ವಿಡಿಯೋ

ಬರಿಗೈಯಲ್ಲಿ ಹಾವು ಹಿಡಿಯುವ ಮಹಿಳೆಯ ವಿಡಿಯೋವನ್ನು ನೋಡಿದ ಕೆಲವರು ಆಕೆಯ ಧೈರ್ಯವನ್ನು ಕೊಂಡಾಡುತ್ತಿದ್ದಾರೆ. ಇನ್ನೂ ಕೆಲವರು ಆಕೆಯ ಕೆಲಸವನ್ನು ಟೀಕಿಸುತ್ತಿದ್ದಾರೆ. ಕೆಲ ಇನ್ಸ್ಟಾ ಬಳಕೆದಾರರು ಆಕೆ ಹಾಗೆ ಮಾಡಬಾರದಿತ್ತು, ಹಾವುಗಳನ್ನು ಅವುಗಳ ಪಾಡಿಗೆ ಬಿಡಬೇಕಿತ್ತು ಎಂದು ಸಲಹೆ ನೀಡಿದರೆ, ಇನ್ನೂ ಕೆಲವರು ಆಕೆ ಹಾವುಗಳನ್ನು ಹಿಡಿದು ಹಿಂಸಿಸುದ್ದಾಳೆ ಎಂದು ಟೀಕಿಸಿದ್ದಾರೆ. 

ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ನೀವೇ ನೋಡಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News