Viral Video: ಅತಿವೇಗದಲ್ಲಿ ಸ್ಕೂಟಿಗೆ ಬೈಕ್ ಡಿಕ್ಕಿ, ಭಯಾನಕ ವಿಡಿಯೋ ವೈರಲ್

ಅತಿವೇಗದಲ್ಲಿ ಬಂದ ಬೈಕ್ ರಭಸವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದವರು ಗಾಯಾಳುಗಳ ರಕ್ಷಣೆಗೆ ಧಾವಿಸಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು.

Written by - Puttaraj K Alur | Last Updated : Jun 8, 2022, 01:13 PM IST
  • ಅತಿವೇಗದಲ್ಲಿ ಬಂದು ಸ್ಕೂಟಿಗೆ ಡಕ್ಕಿ ಹೊಡೆಸಿದ ಬೈಕ್ ಸವಾರ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆದ ವಿಡಿಯೋ
  • ಅಪ್ರಾಪ್ತನ ವಿರುದ್ಧ ಎಫ್‌ಐಆರ್ ದಾಖಲಿಸಿ ಪೊಲೀಸರಿಂದ ತನಿಖೆ
Viral Video: ಅತಿವೇಗದಲ್ಲಿ ಸ್ಕೂಟಿಗೆ ಬೈಕ್ ಡಿಕ್ಕಿ, ಭಯಾನಕ ವಿಡಿಯೋ ವೈರಲ್  title=

ಪಾಟ್ನಾ: ಪ್ರತಿದಿನ ಒಂದಲ್ಲ ಒಂದು ಅಪಘಾತಗಳು ಆಗುತ್ತಲೇ ಇರುತ್ತವೆ. ಅತಿವೇಗದ ಚಾಲನೆ ಅಪಾಯಕಾರಿ ಎಂದು ಗೊತ್ತಿದ್ದರೂ ಅನೇಕರು ಬೇರೆಯವರ ಜೀವಕ್ಕೂ ಕುತ್ತು ತರುತ್ತಾರೆ. ಇದಕ್ಕೆ ನಿದರ್ಶನವೆಂಬಂತೆ ಅಪಘಾತದ ಭಯಾನಕ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಅತಿವೇಗದಲ್ಲಿ ಸ್ಕೂಟಿಗೆ ಬೈಕ್ ಡಿಕ್ಕಿ

ಅಂದಹಾಗೆ ಈ ಘಟನೆ ನಡೆದಿರುವುದು ಬಿಹಾರನ ಪಾಟ್ನಾದ ಗಂಗಾ ಪಾತ್‌ವೇ ಬಳಿ. ಅತಿವೇಗದಲ್ಲಿ ಬೈಕ್ ಓಡಿಸಿಕೊಂಡು ಬರುವ ಸವಾರನೊಬ್ಬ ಎದುರಿಗೆ ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಬೈಕ್ ಸವಾರ ಮಾಡಿದ ತಪ್ಪಿಗೆ ಸ್ಕೂಟಿ ಸವಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ.  

ಇದನ್ನೂ ಓದಿViral Video: ಗನ್‌ ತೋರಿಸಿ ದರೋಡೆ ಮಾಡಿದ ಬಾಲಕ, ಭಯಾನಕ ದೃಶ್ಯ ವೈರಲ್‌

ಅತಿವೇಗದಲ್ಲಿ ಬಂದ ಬೈಕ್ ರಭಸವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿದ್ದವರು ಗಾಯಾಳುಗಳ ರಕ್ಷಣೆಗೆ ಧಾವಿಸಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದು. ಸ್ಕೂಟಿಗೆ ಬೈಕ್ ಡಿಕ್ಕಿ ಹೊಡೆದಿರುವ ದೃಶ‍್ಯ ನೋಡಿದ ಅನೇಕರಿಗೆ ಮೈಜುಂ ಎನ್ನುವ ಅನುಭವವಾಗಿದೆ. ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೈಕ್ ಸವಾರ ಅಪ್ರಾಪ್ತನಾಗಿದ್ದು, ಆತನನ್ನು ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ವಾಹನಗಳನ್ನು ಜಪ್ತಿ ಮಾಡಿರುವ ಪೊಲೀಸರು ತನಿಖೆ ನಡೆಯುತ್ತಿದ್ದಾರೆ.

ಪ್ರತಿದಿನವೂ ಗಂಗಾ ಪಾತ್‌ವೇನಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಸಂಚಾರ ದಟ್ಟನೆ ಇರುವುದರಿಂದ ನಿಧಾನವಾಗಿ ಚಲಿಸಿ ಎಂದು ಸರ್ಕಾರ ಬೋರ್ಡ್ ಹಾಕಿದ್ದರೂ ಇಲ್ಲಿ ಸವಾರರು ಅತಿವೇಗದಲ್ಲಿ ಬೈಕ್ ಚಲಾಯಿಸುತ್ತಾರೆ. ಸವಾರರು ನಿರ್ಲಕ್ಷ್ಯದಿಂದಾಗಿ ಬೇರೆಯವರ ಪ್ರಾಣಕ್ಕೆ ಕುತ್ತುಂಟಾಗಿರುವ ಅನೇಕ ಘಟನೆಗಳು ಇಲ್ಲಿಂದ ವರದಿಯಾಗಿವೆ.

ಇದನ್ನೂ ಓದಿ: ಡಿಸ್ನಿಲ್ಯಾಂಡ್‌ನಲ್ಲಿ ಪ್ರೇಯಸಿಗೆ ಪ್ರಪೋಸ್‌: ಅಡ್ಡಬಂದ ಉದ್ಯೋಗಿ ಮಾಡಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News