ನವದೆಹಲಿ: ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಸದಸ್ಯನ ಮನೆಗೆ ಅಪರಿಚಿತರು ಪೆಟ್ರೋಲ್ ಬಾಂಬ್ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಡೀ ಘಟನೆಯು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಶನಿವಾರ ಸಂಜೆ 7.38ರ ಸುಮಾರಿಗೆ ಈ ಘಟನೆ ನಡೆದಿದೆ. ಆದರೆ, ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ, ಈ ಘಟನೆಯ ನಂತರ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.
ಪೆಟ್ರೋಲ್ ಬಾಂಬ್ ಎಸೆದು ಬೈಕ್‍ನಲ್ಲಿ ಎಸ್ಕೇಪ್!
ವರದಿಯ ಪ್ರಕಾರ ಮಧುರೈನ ಪುರುಷ ಅನುಪಾಂಡಿ ಹೌಸಿಂಗ್ ಬೋರ್ಡ್ ಪ್ರದೇಶದಲ್ಲಿ ಎಂ.ಎಸ್.ಕೃಷ್ಣನ್ ವಾಸಿಸುತ್ತಿದ್ದಾರೆ. ಇವರು ಆರ್‌ಎಸ್‌ಎಸ್ ಸದಸ್ಯರಾಗಿದ್ದಾರೆ. ಶನಿವಾರ ಸಂಜೆ 7:38ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಕೃಷ್ಣನ್ ಮನೆಯೊಳಗೆ 3 ಪೆಟ್ರೋಲ್ ಬಾಂಬ್‌ಗಳನ್ನು ಒಂದೊಂದಾಗಿ ಎಸೆದು ಪರಾರಿಯಾಗಿದ್ದಾರೆ. ಸಿಸಿಟಿವಿ ಫೂಟೇಜ್‌ನಲ್ಲಿ ಒಬ್ಬ ಹುಡುಗ ಕೃಷ್ಣನ್ ಅವರ ಮನೆಯತ್ತ ಓಡಿ ಬಂದು ಗೇಟ್ ಬಳಿ ನಿಂತುಕೊಂಡು 3 ಪೆಟ್ರೋಲ್ ಬಾಂಬ್‌ಗಳನ್ನು ಒಂದೊಂದಾಗಿ ಒಳಗೆ ಎಸೆಯುತ್ತಿರುವುದನ್ನು ನೀವು ಕಾಣಬಹುದು. ಬಾಂಬ್‍ಗಳನ್ನು ಎಸೆದ ತಕ್ಷಣವೇ ಆ ಯುವಕ ಬೈಕ್‍ನಲ್ಲಿ ಬಂದ ಆತನ ಜೊತೆಗಾರನ ಜೊತೆ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ: Car Export: ವಿದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿವೆ ಭಾರತದಲ್ಲಿ ತಯಾರಾದ ಈ 10 ಕಾರುಗಳು
ದೂರು ಸ್ವೀಕರಿಸಿದ ಪೊಲೀಸರಿಂದ ತನಿಖೆ
3 petrol bombs thrown at house of RSS member in Tamil Nadu
Read @ANI Story | https://t.co/IlIIawI569#TamilNadu #RSS #BJP #Madurai pic.twitter.com/OGcD2gQOrR
— ANI Digital (@ani_digital) September 24, 2022
ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ಮಧುರೈ ದಕ್ಷಿಣದ ಸಹಾಯಕ ಆಯುಕ್ತರು ತಿಳಿಸಿದ್ದಾರೆ. ಆರ್‌ಎಸ್‌ಎಸ್ ಸದಸ್ಯ ಕೃಷ್ಣನ್ ಮತ್ತು ಬಿಜೆಪಿಯ ಮಧುರೈ ಜಿಲ್ಲಾಧ್ಯಕ್ಷ ಸುಸೀಂದ್ರನ್ ಕೀರತುರೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಘಟನೆ ವೇಳೆ ಮನೆಯೊಳಗೆ ಸಾಕಷ್ಟು ಮಂದಿ ಇದ್ದರು!
ಶನಿವಾರ ಸಂಜೆ ತಮ್ಮ ಮನೆಯಲ್ಲಿ ಪೂಜಾ ಕಾರ್ಯಕ್ರಮವಿತ್ತು ಎಂದು ಕೃಷ್ಣನ್ ತಿಳಿಸಿದ್ದಾರೆ. ಮನೆಯೊಳಗೆ ಪೂಜೆ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 65 ಜನರು ಭಾಗವಹಿಸಿದ್ದರು. ಸಂಜೆ ಇದ್ದಕ್ಕಿದ್ದಂತೆ ಸ್ಫೋಟದ ಶಬ್ದ ನಮಗೆ ಆತಂಕವಾಯಿತು. ತಕ್ಷಣವೇ ಹೊರಗಡೆ ಓಡಿ ಬಂದು ನೋಡಿದಾಗ ನನಗೆ ಭಾರೀ ಆತಂಕವಾಯಿತು. ಅಪರಿಚಿತರು ಪೆಟ್ರೋಲ್ ಬಾಂಬ್ ಎಸೆದು ಎಸ್ಕೇಪ್ ಆಗಿದ್ದಾರೆ. ಇದರಿಂದ ನನ್ನ ಕಾರು ಸಂಪೂರ್ಣ ಸುಟ್ಟುಹೋಗಿದೆ. ತಪ್ಪಿತಸ್ಥರನ್ನು ಹುಡುಕಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಪೆಟ್ರೋಲ್ ಬಾಂಬ್ ಎಸೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: Viral Photo: ಸಿಎಂ ಕುರ್ಚಿ ಮೇಲೆ ಕುಳಿತ ಏಕನಾಥ್ ಶಿಂಧೆ ಪುತ್ರ.! ಫೋಟೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.