Viral Video: ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಸಾವು!

Pune shocking incident: ಶೌರ್ಯ ಖಡ್ವೆ ಮೃತ ಬಾಲಕ. ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್‌ ಆಡುತ್ತಿದ್ದ. ಈ ವೇಳೆ ಶೌರ್ಯ ಬೌಲಿಂಗ್‌ ಮಾಡುತ್ತಿದ್ದ. ಆತನ ಎಸೆತಕ್ಕೆ ಬ್ಯಾಟ್ಸ್‌ಮನ್‌ ಬಲವಾಗಿ ಬ್ಯಾಟ್‌ ಬೀಸಿದ್ದಾನೆ. ಬಾಲ್‌ ನೇರವಾಗಿ ಬಂದು ಶೌರ್ಯನ ಮರ್ಮಾಂಗಕ್ಕೆ ಬಡಿದಿದೆ.

Written by - Puttaraj K Alur | Last Updated : May 6, 2024, 07:47 PM IST
  • ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ತಾಗಿದ ಚೆಂಡು
  • ಸ್ಥಳದಲ್ಲೇ ಕುಸಿದು ಬಿದ್ದು 11 ವರ್ಷದ ಬಾಲಕ ಸಾವು
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌
Viral Video: ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಸಾವು! title=
11 ವರ್ಷದ ಬಾಲಕ ಸಾವು!

Pune Viral Video: ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ತಾಗಿದ ಪರಿಣಾಮ 11 ವರ್ಷದ ಬಾಲಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.  

ಶೌರ್ಯ ಖಡ್ವೆ ಮೃತ ಬಾಲಕ. ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್‌ ಆಡುತ್ತಿದ್ದ. ಈ ವೇಳೆ ಶೌರ್ಯ ಬೌಲಿಂಗ್‌ ಮಾಡುತ್ತಿದ್ದ. ಆತನ ಎಸೆತಕ್ಕೆ ಬ್ಯಾಟ್ಸ್‌ಮನ್‌ ಬಲವಾಗಿ ಬ್ಯಾಟ್‌ ಬೀಸಿದ್ದಾನೆ. ಬಾಲ್‌ ನೇರವಾಗಿ ಬಂದು ಶೌರ್ಯನ ಮರ್ಮಾಂಗಕ್ಕೆ ಬಡಿದಿದೆ.

ಇದನ್ನೂ ಓದಿಮತ್ತೆ ಬಾಹ್ಯಾಕಾಶ ಯಾತ್ರೆಗೆ ಸಜ್ಜಾದ ಭಾರತ ಮೂಲದ ಸುನಿತಾ ವಿಲಿಯಮ್ಸ್

ಪರಿಣಾಮ ಶೌರ್ಯ ಮೈದಾನದಲ್ಲಿಯೇ ಕುಸಿದುಬಿದಿದ್ದಾನೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ. ಈ ಆಘಾತಕಾರಿ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ಕ್ಯಾಮೆರಾದ ದೃಶ್ಯವನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಕ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶೌರ್ಯ ಉತ್ತಮ ಕ್ರಿಕೆಟರ್ ಆಗುವ ಕನಸು ಕಂಡಿದ್ದನಂತೆ. ಆದರೆ ಆತ ದುರಂತವಾಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ವದಂತಿಗಳು ಸುಳ್ಳು : NTA ಸ್ಪಷ್ಟನೆ

ಇನ್ನು ಈ ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪುಟ್ಟ ಬಾಲಕನ ಸಾವನ್ನಪ್ಪಿದ್ದನ್ನು ಕಂಡು ಅನೇಕರು ಮರುಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News