Viral News: ‘ಪ್ರೀತಿ’ಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ! ಯಾಕೆ ಗೊತ್ತಾ..?

ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ.ಮೋಹಿತ್ ಜೈನ್ ತಿಳಿಸಿದ್ದಾರೆ.

Written by - Puttaraj K Alur | Last Updated : Jun 27, 2022, 05:33 PM IST
  • ತನ್ನ ಗೆಳತಿಯೊಂದಿಗೆ ಜೀವನ ನಡೆಸಲು ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ
  • ಲೆಸ್ಬಿಯನ್‍ಗಳ ಸಂಬಂಧಕ್ಕೆ ಕುಟುಂಬಗಳು ವಿರೋಧಿಸಿದ್ದರಿಂದ ಲಿಂಗ ಬದಲಾಯಿಸಲು ನಿರ್ಧಾರ
  • ಮಹಿಳೆ ಪುರುಷನಾಗಿ ಬದಲಾಗಲು ಇನ್ನೂ 1.5 ವರ್ಷ ಬೇಕಾಗುತ್ತವೆ ಎಂದ ವೈದ್ಯರು
Viral News: ‘ಪ್ರೀತಿ’ಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ! ಯಾಕೆ ಗೊತ್ತಾ..?  title=
ಲಿಂಗವನ್ನೇ ಬದಲಾಯಿಸಿಕೊಂಡ ಯುವತಿ!

ಪ್ರಯಾಗ್‌ರಾಜ್‌(ಯುಪಿ): ಸ್ನೇಹಿತೆಯೊಂದಿಗೆ ಜೀವನಪೂರ್ತಿ ಜೊತೆಗಿರಲು ಕುಟುಂಬಗಳು ವಿರೋಧಿಸಿದ್ದಕ್ಕೆ ಮಹಿಳೆಯೊಬ್ಬರು ತಮ್ಮ ಲಿಂಗವನ್ನೇ ಬದಲಾಯಿಸಿಕೊಂಡಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

ಲೆಸ್ಬಿಯನ್ನರಾದ ಇಬ್ಬರು ಮಹಿಳೆಯರು ಪರಸ್ಪರ ಪ್ರೀತಿಸುತ್ತಿದ್ದರು. ಜೀವನಪೂರ್ತಿ ಜೊತೆಜೊತೆಯಾಗಿರಲು ನಿರ್ಧರಿಸಿದ್ದರು. ಆದರೆ, ಇವರಿಬ್ಬರ ಸಂಬಂಧಕ್ಕೆ ಎರಡೂ ಕುಟುಂಬಗಳು ಒಪ್ಪಿಕೊಂಡಿಲ್ಲ. ಇದರಿಂದ ಮನನೊಂದು ಇಬ್ಬರ ಪೈಕಿ ಒಬ್ಬ ಮಹಿಳೆ ತನ್ನ ಲಿಂಗವನ್ನೇ ಬದಲಾಯಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಈ ಮಹಿಳೆ ತನ್ನ ಸಂಗಾತಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದು, ಮುಂಬರುವ ಅಡಚಣೆ ತಪ್ಪಿಸಲು ಮತ್ತು ತಮ್ಮಿಬ್ಬರ ಸಂಬಂಧದಲ್ಲಿ ಇತರರ ಹಸ್ತಕ್ಷೇಪ ನಿಲ್ಲಿಸಲು ತನ್ನ ಲಿಂಗ ಬದಲಾಯಿಸಲು ನಿರ್ಧರಿಸಿದ್ದಾಳೆ ಎಂದು ವರದಿಯಾಗಿದೆ.

ಇದನ್ನೂ ಓದಿ: WATCH: ವಾಹನಗಳ ಮೇಲೆ ಆನೆ ದಾಳಿ, ಆತಂಕಗೊಂಡ ವಾಹನ ಸವಾರರು

ಈ ಇಬ್ಬರು ಮಹಿಳೆಯರು ತಮ್ಮಿಬ್ಬರ ಕುಟುಂಬಸ್ಥರ ಮನವೊಲಿಸಲು ಸಾಧ್ಯವಿರುವ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು. ಆದರೆ, ಎಲ್ಲವೂ ವ್ಯರ್ಥವಾದಾಗ ಬೇರೆ ದಾರಿ ಕಾಣದೆ ಒಬ್ಬರು ತನ್ನ ಲಿಂಗ ಬದಲಾಯಿಸಲು ನಿರ್ಧರಿಸಿದರು ಎನ್ನಲಾಗುತ್ತಿದೆ.

ವೈದ್ಯರಿಂದ ಶಸ್ತ್ರಚಿಕಿತ್ಸೆ

ಪ್ರಯಾಗ್‌ರಾಜ್‌ನಲ್ಲಿರುವ ಸ್ವರೂಪ್ ರಾಣಿ ನೆಹರು ಆಸ್ಪತ್ರೆಯ ವೈದ್ಯರ ತಂಡವು ಮಹಿಳೆಗೆ ಬೇಕಾದ ಶಸ್ತ್ರಚಿಕಿತ್ಸೆ ನಡೆಸಿದೆ. ಮಹಿಳೆಯ ದೇಹದ ಮೇಲ್ಭಾಗ ಮತ್ತು ಎದೆಯ ಪುನರ್ರಚನೆಗೆ ಚಿಕಿತ್ಸೆ ಮಾಡಿ ಲೈಂಗಿಕ ಮರುಜೋಡಣೆ ಶಸ್ತ್ರಚಿಕಿತ್ಸೆ ನಡೆಸಿದೆ. ಈ ಶಸ್ತ್ರಚಿಕಿತ್ಸೆ ಫಲ ಕೊಡಲು ಹಾಗೂ ಮಹಿಳೆಯೂ ಪುರುಷನಾಗಿ ಬದಲಾಗಲೂ ಇನ್ನೂ 1.5 ವರ್ಷ ಬೇಕಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: 19 ಲಕ್ಷ ಖರ್ಚು ಮಾಡಿದ್ರೂ ಇಲಿ ಹಿಡಿಯೋಕೆ ಆಗಿಲ್ಲ: ಭಯದಿಂದ ಬೆಕ್ಕುಗಳನ್ನು ನಿಯೋಜಿಸಿದ ಅಧಿಕಾರಿಗಳು

ಮಹಿಳೆಗೆ ಟೆಸ್ಟೋಸ್ಟೆರಾನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತದೆ. ಟೆಸ್ಟೋಸ್ಟೆರಾನ್ ಚಿಕಿತ್ಸೆಯು ಎದೆಯ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಡಾ.ಮೋಹಿತ್ ಜೈನ್ ತಿಳಿಸಿದ್ದಾರೆ.

ಲಿಂಗ ಬದಲಾವಣೆಯ ಅಡ್ಡ ಪರಿಣಾಮ

ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆ ನಂತರ ಮಹಿಳೆಯು ಗರ್ಭಧರಿಸುವ ಮತ್ತು ಗರ್ಭಿಣಿಯಾಗುವ ಸ್ಥಿತಿಯಲ್ಲಿರುವುದಿಲ್ಲ. ಇಂತಹ ಶಸ್ತ್ರಚಿಕಿತ್ಸೆ ನಡೆಸಿರುವುದು ಇದೇ ಮೊದಲು. ಸುಮಾರು 18 ತಿಂಗಳ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ. ಮಹಿಳೆಯ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಲಾಗಿದೆ ಮತ್ತು ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News