Viral News: ರಜೆ ಇಲ್ಲದೇ ಸತತ 27 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗೆ ಕೋಟಿ ರೂ. ಭಕ್ಷೀಸು..!

ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂ. ಭಕ್ಷೀಸು ಸಿಕ್ಕಿದೆ.

Written by - Puttaraj K Alur | Last Updated : Jun 28, 2022, 04:56 PM IST
  • ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದ ವ್ಯಕ್ತಿ
  • ಬರ್ಗರ್ ಕಿಂಗ್ ಕಂಪನಿ ಉದ್ಯೋಗಿಗೆ ಸಿಕ್ತು ಬರೋಬ್ಬರಿ 1 ಕೋಟಿ ರೂ. ಭಕ್ಷೀಸು
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಕೆವಿನ್ ಫೋರ್ಡ್ ಸ್ಟೋರಿ
Viral News: ರಜೆ ಇಲ್ಲದೇ ಸತತ 27 ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗೆ ಕೋಟಿ ರೂ. ಭಕ್ಷೀಸು..!   title=
ವೈರಲ್ ಆಗಿದೆ ಕೆವಿನ್ ಫೋರ್ಡ್ ಸ್ಟೋರಿ

ನವದೆಹಲಿ: ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂ. ಭಕ್ಷೀಸು ಸಿಕ್ಕಿದೆ. ಹೌದು, ಅಚ್ಚರಿಯಾದರೂ ಇದು ನಿಜ. ಬರ್ಗರ್ ಕಿಂಗ್ ಕಂಪನಿಯಲ್ಲಿ ಕೆವಿನ್ ಫೋರ್ಡ್ ಎಂಬುವರು ಸತತ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಒಂದೇ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ.

ಅಂದಹಾಗೆ ಈ ವ್ಯಕ್ತಿಗೆ ಭಕ್ಷೀಸು ಕೊಟ್ಟಿರುವುದು ಆತ ಕೆಲಸ ಮಾಡುತ್ತಿರುವ ಬರ್ಗರ್ ಕಿಂಗ್ ಕಂಪನಿಯಲ್ಲ, ಬದಲಿಗೆ ಸಾರ್ವಜನಿಕರು. ಒಂದು ದಿನವೂ ರಜೆ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸಿದ ಕೆವಿನ್ ಫೋರ್ಡ್‍ ಬದ್ಧತೆ ಮೆಚ್ಚಿ ಕಂಪನಿ ಅವರನ್ನು ಸತ್ಕರಿಸಿದೆ. ಆದರೆ, ಕೆವಿನ್ ಪುತ್ರಿ ಸೆರಿನಾ ತನ್ನ ತಂದೆಯ ಪರಿಶ್ರಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದಳು. ಅದರಂತೆ ‘ಗೋಫಂಡ್ ಮಿ’ ಎಂಬ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ತನ್ನ ತಂದೆಯ ಬದ್ಧತೆಯ ಕಾರ್ಯದ ಬಗ್ಗೆ ಸಾರ್ವಜನಿಕರೊಂದಿಗೆ ಮಾಹಿತಿ ಹಂಚಿಕೊಂಡಿದ್ದಳು.

ಇದನ್ನೂ ಓದಿ: ಜಗತ್ತಿನ ಅತೀ ಕೊಳಕು ನಾಯಿ: ಹೀಗೆ ಕರೆಯಲು ಕಾರಣ ಏನ್‌ಗೊತ್ತಾ?

ಕೆವಿನ್ ಫೋರ್ಡ್ ಕಾರ್ಯವನ್ನು ನೂರಾರು ಜನರು ಮೆಚ್ಚಿಕೊಂಡಿದ್ದು, ಅವರ ಕೆಲಸಕ್ಕೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಕೆವಿನ್ ಪುತ್ರಿ ಹಂಚಿಕೊಂಡಿದ್ದ ಮಾಹಿತಿಗೆ ಸ್ಪಂದಿಸಿದ ಸಾರ್ವಜನಿಕರು ಬರೋಬ್ಬರಿ 1.50 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು 1,18,23,675 ರೂ. ಉದಾರ ದೇಣಿಗೆ ನೀಡಿದ್ದಾರೆ. ಹಾಲಿವುಡ್‍ನ ಖ್ಯಾತ ಹಾಸ್ಯನಟ ಡೇವಿಡ್ ಸ್ಪೇಡ್ 5 ಸಾವಿರ ಅಮೆರಿಕನ್ ಡಾಲರ್ (ಸುಮಾರು 3,94,122.50 ರೂ.) ದೇಣಿಗೆ ನೀಡಿದ್ದಾರೆ. ಸಾರ್ವಜನಿಕರು ನೀಡಿದ ಈ ದೇಣಿಗೆ ಕಂಡ ಕೆವಿನ್ ಭಾವುಕರಾಗಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ಕೆವಿನ್ ಪುತ್ರಿ ಸೆರಿನಾ, ‘ನನ್ನ ತಂದೆ ಕಳೆದ 27 ವರ್ಷಗಳಿಂದ ಒಂದೇ ಒಂದು ದಿನವೂ ರಜೆ ಹಾಕದೇ ಕೆಲಸ ಮಾಡಿದ್ದಾರೆ. ಅವರ ಈ ಶ್ರಮ ಮತ್ತು ಬದ್ಧತೆಗೆ ಸಾರ್ವಜನಿಕರು ಉದಾರ ದೇಣಿಗೆ ನೀಡಿರುವುದಕ್ಕೆ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಸುಗಳಿಗಾಗಿ ಬಾಲ್ಯ ವಿವಾಹ! ಇಲ್ಲಿ ವಧು ದಕ್ಷಿಣೆ ರೂಪದಲ್ಲಿ ಸಿಗುತ್ತೆ ಹಸುಗಳು 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News