Viral News: 30 ವರ್ಷದ ಯುವಕ 47 ಮಕ್ಕಳ ತಂದೆ, ಮದುವೆ ಆಗಲು ಒಪ್ಪದ ಯುವತಿಯರು!

ಈ ವ್ಯಕ್ತಿ ಜಗತ್ತಿನಾದ್ಯಂತ 47ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದು, ಇನ್ನೂ 10 ಮಕ್ಕಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.

Written by - Puttaraj K Alur | Last Updated : May 1, 2022, 12:48 PM IST
  • ಕಳೆದ 8 ವರ್ಷಗಳಲ್ಲಿ ಸುಮಾರು 50 ಮಕ್ಕಳಿಗೆ ತಂದೆಯಾಗಿರುವ 30 ವರ್ಷದ ಯುವಕ
  • ನನ್ನ ಕೆಟ್ಟ ನಿರ್ಧಾರಗಳಿಂದ ನನ್ನ ಜೀವನ ಸಂಗಾತಿ ಸಿಗುತ್ತಿಲ್ಲವೆಂದು ಅಳಲು ತೋಡಿಕೊಂಡ ಕೈಲ್ ಕಾರ್ಡಿ
  • ವೀರ್ಯ ದಾನ ಮಾಡಿ ಅನೇಕ ಮಕ್ಕಳಿಗೆ ಜೈವಿಕ ತಂದೆಯಾಗಿರುವ ಅಮೆರಿಕದ ವ್ಯಕ್ತಿ
Viral News: 30 ವರ್ಷದ ಯುವಕ 47 ಮಕ್ಕಳ ತಂದೆ, ಮದುವೆ ಆಗಲು ಒಪ್ಪದ ಯುವತಿಯರು! title=
ವೀರ್ಯ ದಾನದಿಂದ ಡೇಟಿಂಗ್ ಜೀವನಕ್ಕೆ ಹೊಡೆತ

ನವದೆಹಲಿ: ಕಳೆದ 8 ವರ್ಷಗಳಲ್ಲಿ ಸುಮಾರು 50 ಮಕ್ಕಳಿಗೆ ತಂದೆಯಾಗಿರುವ 30 ವರ್ಷ ವಯಸ್ಸಿನ ಈ ವ್ಯಕ್ತಿ ತಮ್ಮ ‘ವಿವಾದಾತ್ಮಕ ಆಯ್ಕೆಗಳು’ ಡೇಟಿಂಗ್ ಜೀವನವನ್ನು ಕಷ್ಟಕರವಾಗಿಸಿದೆ ಎಂದು ಹೇಳಿಕೊಂಡಿದ್ದಾರೆ. ಈ ವ್ಯಕ್ತಿ ಜಗತ್ತಿನಾದ್ಯಂತ 47ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದು, ಇನ್ನೂ 10 ಮಕ್ಕಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.

ಹೌದು, ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಅಮೆರಿಕದ ಈ ಯುವಕನಿಗೆ ಇಷ್ಟೊಂದು ಮಕ್ಕಳಿಗೆ ಅಪ್ಪನಾಗಿರುವುದೇ ಮುಳುವಾಗಿದೆ. ಕ್ಯಾಲಿಫೋರ್ನಿಯಾದ ಕೈಲ್ ಕಾರ್ಡಿ ವೀರ್ಯ ದಾನ ಮಾಡಿ ಇಷ್ಟು ಮಕ್ಕಳ ತಂದೆಯಾಗಿದ್ದಾರೆ. ಇದರಿಂದ ಆತನ ನಿಜವಾದ ಪ್ರೀತಿಗೆ ಧಕ್ಕೆ ಆಗಿದೆಯಂತೆ. ವೀರ್ಯ ದಾನದ ನಿರ್ಧಾರದಿಂದ ಇದೀಗ ಆತನಿಗೆ ಸಂಗಾತಿಯನ್ನು ಹುಡುಕುವುದು ಕಷ್ಟಕರವಾಗಿದೆ.

ಇದನ್ನೂ ಓದಿ: Viral Video: ಈ ವಿಡಿಯೋ ನೋಡಿದ್ರೆ ನಿಮ್ಮ ಕಣ್ಣಲ್ಲಿ ಗ್ಯಾರಂಟಿ ನೀರು ಬರುತ್ತೆ!

‘ಆರಂಭದಲ್ಲಿ ನನ್ನ ಜೀವನ ಸುಮಾರಾಗಿ ನಡೆಯುತ್ತಿತ್ತು. ಆದರೆ, ಯಾವುದೇ ಸಂಬಂಧಗಳು ದೀರ್ಘಕಾಲ ಉಳಿಯುತ್ತಿರಲಿಲ್ಲ. ಇದೀಗ ನನ್ನ ಜೊತೆ ಸಂಬಂಧ ಬೆಳೆಸಲು ಮಹಿಳೆಯರು ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಆದರೆ, ಮಕ್ಕಳನ್ನು ಪಡೆಯುವುದಷ್ಟೇ ಅವರ ಗುರಿ ಎಂದು ಅಳಲು ತೋಡಿಕೊಂಡಿದ್ದಾನೆ. 2 ವರ್ಷಗಳ ವೀರ್ಯ ದಾನದ ನಂತರ ನಾನು ಹೆಚ್ಚು ಸುದ್ದಿಯಾಗಿದ್ದೇನೆ. ಏಕೆಂದರೆ ನಾನು ಸಕ್ರಿಯವಾಗಿ ವೀರ್ಯವನ್ನು ಹೆಚ್ಚು ದಾನ ಮಾಡುತ್ತಿದ್ದೆ ಎಂದು ಕೈಲ್ ತಿಳಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Kyle Gordy (@kylegordy123)

‘ನಾನು ದಾನ ಮಾಡಿದ ವೀರ್ಯದಿಂದ ಕೆಲವು ಯಶಸ್ವಿ ಗರ್ಭಧಾರಣೆಗಳಾಗಿವೆ. ಹೀಗಾಗಿ ಮಹಿಳೆಯರಿಂದ ನಾನು Instagramನಲ್ಲಿ ಸಂದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಇದರ ಬಗ್ಗೆ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಈ ಪೈಕಿ ಹೆಚ್ಚಿನವರು ಹಣ ಹೊಂದಿರುವುದರಿಂದ ಮತ್ತು ಯಾವುದೇ ವೀರ್ಯ ಬ್ಯಾಂಕ್‌ಗೆ ಸುಲಭವಾಗಿ ಹೋಗಬಹುದಾಗಿರುವುದರಿಂದ ಹೆಚ್ಚಿನ ಮಹಿಳೆಯರು ವೀರ್ಯ ಪಡೆದುಕೊಳ್ಳಲು ಆಸಕ್ತಿ ವಹಿಸುತ್ತಾರೆಂದು ನಾನು ಭಾವಿಸಿರಲಿಲ್ಲ. ನಾನು ಸಂಗಾತಿ ಬಯಸಿದರೆ ಅವರು ಮಾತ್ರ ನನ್ನನ್ನು ತಮ್ಮ ಮಗುವಿಗೆ ಜೈವಿಕ ತಂದೆಯಾಗಬೇಕೆಂದು ಬಯಸಿದರು’ ಎಂದು ಕೈಲ್ ಹೇಳಿದ್ದಾರೆ.

ಇದನ್ನೂ ಓದಿ: Viral Video: ಬೃಹತ್ ಬಂಡೆಕಲ್ಲು ಅಪ್ಪಳಿಸಿ ಬೈಕ್ ಸವಾರ ಸಾವು, ಭಯಾನಕ ವಿಡಿಯೋ ಮೊಬೈಲ್‍ನಲ್ಲಿ ಸೆರೆ

ತನ್ನ ಕೆಟ್ಟ ನಿರ್ಧಾರದಿಂದಾಗಿ ತನ್ನ ಡೇಟಿಂಗ್ ಜೀವನಕ್ಕೆ ಹೊಡೆತ ಬಿದ್ದಿದೆ. ಯಾರೂ ಕೂಡ ನನ್ನನ್ನು ಮದುವೆಯಾಗಲು ಒಪ್ಪುತ್ತಿಲ್ಲ. ನನ್ನ ಜೀವನದ ಬಗ್ಗೆ ಕುಟುಂಬ ಸದಸ್ಯರಿಗೂ ಬೇಸರವಾಗಿದೆ. ನನಗೆ ಈಗ ಉತ್ತಮ ಜೀವನ ಸಂಗಾತಿ ಬೇಕಾಗಿದೆ. ಆದರೆ ನನ್ನ ಜೊತೆ ಮದುವೆಯಾಗಲು ಯಾವ ಹುಡುಗಿಯು ಮುಂದೆ ಬರುತ್ತಿಲ್ಲ. ಮುಂದೇನು ಅನ್ನೋ ಯೋಚನೆ ನನ್ನನ್ನು ಬಹಳವಾಗಿ ಕಾಡುತ್ತಿದೆ ಅಂತಾ 30ರ ಹರೆಯದ ಕೈಲ್ ಹೇಳಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News