Moon Viral Video: ಇಷ್ಟೊಂದು ಹತ್ತಿರದಿಂದ ಚಂದ್ರನನ್ನು ಎಂದಾದರೂ ನೋಡಿದ್ದೀರಾ? ಮಿಸ್‌ ಮಾಡದೆ ಈ ಅದ್ಭುತ ಕ್ಷಣವನ್ನೊಮ್ಮೆ ನೋಡಿ ಆನಂದಿಸಿ

Moon Approaching Earth Video Viral: ವಿಜ್ಞಾನ ಎಷ್ಟೇ ಮುಂದುವರೆದರೂ ಅವುಗಳನ್ನು ಮೀರಿದ ಶಕ್ತಿಯೊಂದು ಭೂಮಿಯಲ್ಲಿದೆ. ಆ ಶಕ್ತಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೆಸರನ್ನಿಟ್ಟಿರುವುದು ಸುಳ್ಳಲ್ಲ. ನಭೋಮಂಡಲದಲ್ಲಿ ನಡೆಯುವ ಕೌತುಕಗಳು ಕೆಲವೊಂದಷ್ಟು ಕಣ್ಣಿಗೆ ಗೋಚರವಾಗುತ್ತದೆ. ಅಂತಹ ದೃಶ್ಯಗಳನ್ನು ಅನೇಕರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿರುತ್ತಾರೆ.  

Written by - Bhavishya Shetty | Last Updated : Sep 6, 2024, 02:57 PM IST
    • ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಭೂಮಿ
    • ರಹಸ್ಯಗಳು ಕೌತುಕವಾಗಿ ಕಾಣಿಸುತ್ತವೆಯೇ ಹೊರತು ನಿಖರವಾದ ಸತ್ಯಾಂಶ ಏನೆಂಬುದನ್ನು ತಿಳಿಸುವುದಿಲ್ಲ.
    • ನಭೋಮಂಡಲದಲ್ಲಿ ನಡೆಯುವ ಕೌತುಕಗಳು ಕೆಲವೊಂದಷ್ಟು ಕಣ್ಣಿಗೆ ಗೋಚರವಾಗುತ್ತದೆ.
Moon Viral Video: ಇಷ್ಟೊಂದು ಹತ್ತಿರದಿಂದ ಚಂದ್ರನನ್ನು ಎಂದಾದರೂ ನೋಡಿದ್ದೀರಾ? ಮಿಸ್‌ ಮಾಡದೆ ಈ ಅದ್ಭುತ ಕ್ಷಣವನ್ನೊಮ್ಮೆ ನೋಡಿ ಆನಂದಿಸಿ title=
Moon Viral Video

Moon Approaching Earth Video Viral: ಪ್ರಕೃತಿಯ ವೈಚಿತ್ರ್ಯ ಒಂದಾ...? ಎರಡಾ...? ವಿಶೇಷತೆಗಳನ್ನೇ ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಭೂಮಿ ಕೆಲವೊಮ್ಮೆ ತನ್ನ ರಹಸ್ಯಗಳನ್ನು ಬಿಚ್ಚಿಡುತ್ತವೆ. ಆದರೆ ಆ ರಹಸ್ಯಗಳು ಕೌತುಕವಾಗಿ ಕಾಣಿಸುತ್ತವೆಯೇ ಹೊರತು ನಿಖರವಾದ ಸತ್ಯಾಂಶ ಏನೆಂಬುದನ್ನು ತಿಳಿಸುವುದಿಲ್ಲ.

ಇದನ್ನೂ ಓದಿ: ಅನುಷ್ಕಾಗಿಂತಲೂ ಸಖತ್‌ ಬ್ಯೂಟಿ ವಿರಾಟ್‌ ಕೊಹ್ಲಿ 'ತಂಗಿ': ಈಕೆ ಖ್ಯಾತ ನಟಿಯೂ ಹೌದು...ಸಿನಿರಂಗವನ್ನೇ ಆಳುತ್ತಿರುವ ಈ ಅತಿಲೋಕ ಸುಂದರಿ ಯಾರು ಗೊತ್ತಾ?

ವಿಜ್ಞಾನ ಎಷ್ಟೇ ಮುಂದುವರೆದರೂ ಅವುಗಳನ್ನು ಮೀರಿದ ಶಕ್ತಿಯೊಂದು ಭೂಮಿಯಲ್ಲಿದೆ. ಆ ಶಕ್ತಿಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೆಸರನ್ನಿಟ್ಟಿರುವುದು ಸುಳ್ಳಲ್ಲ. ನಭೋಮಂಡಲದಲ್ಲಿ ನಡೆಯುವ ಕೌತುಕಗಳು ಕೆಲವೊಂದಷ್ಟು ಕಣ್ಣಿಗೆ ಗೋಚರವಾಗುತ್ತದೆ. ಅಂತಹ ದೃಶ್ಯಗಳನ್ನು ಅನೇಕರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿರುತ್ತಾರೆ.

ಇದೀಗ ಅಂತಹದ್ದೇ ಒಂದು ದೃಶ್ಯವನ್ನು ನಿಮ್ಮ ಮುಂದಿಡಲಿದ್ದೇವೆ. ಬಾಲ್ಯದಲ್ಲಿ ಅಮ್ಮ ತುತ್ತು ಅನ್ನ ತಿನ್ನಿಸಬೇಕೆಂದರೆ ಚಂದಮಾಮನನ್ನು ತೋರಿಸುತ್ತಿದ್ದಳು. ಇಂತಹ ಸನ್ನಿವೇಶಗಳು ಬಾಲ್ಯವನ್ನು ಸುಂದರವಾಗಿಸುವುದಲ್ಲದೆ, ಚಂದ್ರನೆಂದರೆ ನಮಗೆಲ್ಲರಿಗೂ ಅತೀವ ಪ್ರೀತಿ ಎಂಬಂತೆ ಮಾಡಿದೆ. ಆ ಚಂದ್ರನನ್ನು ಒಂದೊಮ್ಮೆ ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂಬ ಆಸೆಯೂ ಹುಟ್ಟಿಕೊಳ್ಳುತ್ತದೆ.

ಇದನ್ನೂ ಓದಿ:  "ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಬಗ್ಗೆ ಮಾತಾಡ್ತಿದ್ದಾರೆ ಲೈಂಗಿಕ ಸಂಬಂಧದ ಬಗ್ಗೆ ಅಲ್ಲ"

ಇದೀಗ ಆ ಚಂದ್ರನೇ ಭೂಮಿಗೆ ಅತಿ ಸಮೀಪ ಬಂದಿದ್ದಾನೆ. ಅದರ ವಿಡಿಯೋ ವೈರಲ್‌ ಆಗಿದೆ. ರಷ್ಯಾ ಮತ್ತು ಕೆನಡಾ ನಡುವಿನ ಉತ್ತರ ಧ್ರುವದಲ್ಲಿ ಆರ್ಕಟಿಕ್ ಸಾಗರದ ಬಳಿ ಭೂಮಿಯ ಸುತ್ತ ಸುತ್ತುತ್ತಿರುವ ಚಂದ್ರ ಭೂಮಿಗೆ ಅತಿ ಸಮೀಪ ಬಂದಂತೆ ತೋರುತ್ತಾನೆ. ಇನ್ನೇನು ಭೂಮಿಗೆ ಅಪ್ಪಳಿಸಲಿದ್ದಾನೆ ಅನ್ನಿಸುತ್ತದೆ. ಆದರೆ ಅದಾದ ಬಳಿಕ ಚಂದ್ರನು ಸೂರ್ಯನನ್ನು 5 ಸೆಕೆಂಡುಗಳ ಕಾಲ ಅವರಿಸಿ ಕಣ್ಮರೆಯಾಗುತ್ತಾನೆ. ಪ್ರಕೃತಿ ಈ ಅದ್ಭುತ ದೃಶ್ಯ ನೋಡುವಾಗ ಮೈ ಜುಂ ಎನಿಸುತ್ತದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News