ಭೂಮಿ ಉಸಿರಾಡುವ ಅದ್ಭುತ ಕ್ಷಣ ಸೆರೆ.. ಮಿಸ್‌ ಮಾಡದೆ ಒಮ್ಮೆ ವಿಡಿಯೋ ನೋಡಿ

Earth Viral Video : ಭೂಮಿ ಮೇಲ್ಪದರ ನಿರಂತರವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿದೆ. ವಿಡಿಯೋ ನೋಡಿದರೆ ಭೂಮಿಯು ಉಸಿರಾಡುತ್ತಿದೆ ಎಂದು ಅನಿಸುತ್ತದೆ. 

Written by - Chetana Devarmani | Last Updated : Sep 5, 2024, 05:44 PM IST
    • ಭೂಮಿಯು ಕೂಡ ಮನುಷ್ಯರಂತೆ ಉಸಿರಾಡುತ್ತದೆ?
    • ಭೂಮಿಯು ಉಸಿರಾಡುವ ವಿಸ್ಮಯಕಾರಿ ವಿಡಿಯೋ
    • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
ಭೂಮಿ ಉಸಿರಾಡುವ ಅದ್ಭುತ ಕ್ಷಣ ಸೆರೆ.. ಮಿಸ್‌ ಮಾಡದೆ ಒಮ್ಮೆ ವಿಡಿಯೋ ನೋಡಿ   title=

Earth Breathing Viral Video : ಪ್ರಕೃತಿಯ ಅನೇಕ ಅದ್ಭುತ ರೂಪಗಳನ್ನು ಭೂಮಿಯ ಮೇಲೆ ಕಾಣಬಹುದು. ಕೆಲವೊಮ್ಮೆ ಪ್ರಕೃತಿಯಲ್ಲಿನ ವೈಚಿತ್ರಗಳನ್ನು ಕಂಡು ಬೆರಗಾಗುತ್ತದೆ. ಕೆಲವು ಘಟನೆಗಳು ಬಹಳ ಆಶ್ಚರ್ಯಕರವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ವಿಡಿಯೋವೊಂದು ವೈರಲ್‌ ಆಗಿದೆ. ಎಲ್ಲರೂ ನೋಡಿ ಅಚ್ಚರಿ ಪಡುತ್ತಿದ್ದಾರೆ. ವಿಡಿಯೋ ನೋಡಿದ ನಂತರ ಯಾರೂ ತಮ್ಮ ಕಣ್ಣುಗಳನ್ನು ನಂಬುವುದಿಲ್ಲ, ಏಕೆಂದರೆ ಅಂತಹ ದೃಶ್ಯ ಈ ವಿಡಿಯೋದಲ್ಲಿ ಗೋಚರಿಸುತ್ತದೆ. ಈ ಅಪರೂಪದ ವಿಡಿಯೋದಲ್ಲಿ ಭೂಮಿ ಉಸಿರಾಡುವುದನ್ನು ಕಾಣಬಹುದು. 

ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ಕಾಣಸಿಗುತ್ತವೆ. ಈ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿದೆ. ಭೂಮಿಯು ಕೂಡ ಮನುಷ್ಯರಂತೆ ಉಸಿರಾಡುತ್ತದೆ ಎಂಬ ಸಂಗತಿ ಅನೇಕರಿಗೆ ಅಚ್ಚರಿ ಮೂಡಿಸಬಹುದು. ಬಹುಶಃ ನೀವು ಅದನ್ನು ನಂಬುವುದಿಲ್ಲ. ವೈರಲ್ ಆಗಿರುವ ವಿಡಿಯೋ ನೋಡಿ ಅರೆಕ್ಷಣ ಬೆರಗಾಗುವಿರಿ. 

ಇದನ್ನೂ ಓದಿ: ಈ ಬಾವಿಯಿಂದ ಬರುತ್ತಿವೆ ಭಯಾನಕ ವಿಚಿತ್ರ ಶಬ್ದಗಳು..! ಧೈರ್ಯ ಮಾಡಿ ನೋಡಲು ಹೋದವರಿಗೆ ಏನಾಯ್ತು.. ಗೊತ್ತೆ..?  

ವೈರಲ್ ವಿಡಿಯೋದಲ್ಲಿ ಕಾಡು ಕಾಣಿಸುತ್ತಿದೆ. ಅದರಲ್ಲಿ ಮರಗಳು ಗೋಚರಿಸುತ್ತವೆ. ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಲು ಪ್ರಾರಂಭಿಸುತ್ತದೆ. ಈ ವೇಳೆ ಭೂಮಿಯು ಉಸಿರಾಡುತ್ತಿದೆ ಎಂದು ತೋರುತ್ತದೆ. ಭೂಮಿ ಮೇಲ್ಪದರ ನಿರಂತರವಾಗಿ ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸುತ್ತಿದೆ. ವಿಡಿಯೋ ನೋಡಿದರೆ ಭೂಮಿಯು ಉಸಿರಾಡುತ್ತಿದೆ ಎಂದು ಅನಿಸುತ್ತದೆ. 

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಯೂಟೂಬ್‌ ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಸ್ಮಯಕಾರಿ ದೃಶ್ಯ ಕಾಡಿನಲ್ಲಿ ಸೆರೆ ಸಿಕ್ಕಿದೆ ಎಂದು ಹೇಳಲಾಗುತ್ತದೆ. ಭೂಮಿಯು ಉಸಿರಾಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದು ಹಳೆಯ ವೀಡಿಯೊ, ಆದರೆ ಮತ್ತೊಮ್ಮೆ ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಬಲವಾದ ಗಾಳಿಯಿಂದಾಗಿ ಮರಗಳ ಬೇರುಗಳು ಅಲುಗಾಡುತ್ತಿವೆ. ಇದರಿಂದಾಗಿ ಈ ವೀಡಿಯೋ ನೋಡಿದರೆ ಭೂಮಿಯೇ ಉಸಿರಾಡುತ್ತಿದೆ ಎಂಬಂತೆ ಕಾಣುತ್ತದೆ. ಮರಗಳ ಬೇರುಗಳು ಮಣ್ಣಿನಲ್ಲಿ ಸೇರಿರುತ್ತವೆ. ರಭಸವಾದ ಗಾಳಿಗೆ ಮರಗಳು ಧರೆಗುರುಳುವ ಮುನ್ನ ನಡೆಯುವ ಪ್ರಕ್ರಿಯೆ ಇದಾಗಿದೆ. 

ಇದನ್ನೂ ಓದಿ: Viral video: ಬೈಕ್ ನಲ್ಲಿ ತಮ್ಮೊಂದಿಗೆ ಮೊಸಳೆಯನ್ನು ಜಾಲಿ ರೈಡ್ ಕರೆದೊಯ್ದ ಯುವಕರು..ಅಬ್ಬಬ್ಬಾ ಇವರ ಸಾಹಸವನ್ನು ಮೆಚ್ಚಲೆ ಬೇಕು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News