ʼಸ್ಕರ್ಟ್‌ʼ ತೊಟ್ಟು ಮೆಟ್ರೋ ಹತ್ತಿದ ಹುಡುಗರು..! ಗರ್ಲ್ಸ್ ಶಾಕ್‌ ಬಾಯ್ಸ್‌ ರಾಕ್‌..

ಇಬ್ಬರು ಯುವಕರು ಉದ್ದವಾದ ಡೆನಿಮ್ ಸ್ಕರ್ಟ್‌ಗಳನ್ನು ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಈ ವಿಡಿಯೋವನ್ನು ಭವ್ಯ ಕುಮಾರ್ ಮತ್ತು ಸಮೀರ್ ಖಾನ್ ಎಂಬ ಹೆಸರಿನ ಬಳಕೆದಾರರು 2023 ರ ಏಪ್ರಿಲ್ 16 ರಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Written by - Krishna N K | Last Updated : Apr 20, 2023, 05:16 PM IST
  • ಡೆನಿಮ್ ಸ್ಕರ್ಟ್‌ ಧರಿಸಿ ಮೆಟ್ರೋದಲ್ಲಿ ಪ್ರಯಾಣಿಸಿದ ಯುವಕರು.
  • ಯುವಕರ ವೇಷ ಭೂಷಣ ನೋಡಿ ಶಾಕ್‌ ಆದ ಪ್ರಯಾಣಿಕರು.
  • ಬಾಯ್ಸ್‌ ಸ್ಕರ್ಟ್‌ ಧರಿಸಿದ್ದು ನೋಡಿ ನಕ್ಕ ಗರ್ಲ್ಸ್‌.
 ʼಸ್ಕರ್ಟ್‌ʼ ತೊಟ್ಟು ಮೆಟ್ರೋ ಹತ್ತಿದ ಹುಡುಗರು..! ಗರ್ಲ್ಸ್ ಶಾಕ್‌ ಬಾಯ್ಸ್‌ ರಾಕ್‌.. title=

Viral Video : ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗೋಕೆ ಜನರು ಏನೆಲ್ಲಾ ಮಾಡ್ತಾರೆ ಅಂತ ನೀವು ನೋಡಿರ್ತೀರಾ. ಇದೀಗ ಯುವಕರಿಬ್ಬರು ದೆಹಲಿ ಮೆಟ್ರೋದಲ್ಲಿ ಯುವತಿಯರು ತೊಡುವ ʼಡೆನಿಮ್ ಸ್ಕರ್ಟ್ʼ ಧರಿಸಿ ಪ್ರಯಾಣ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಭವ್ಯ ಕುಮಾರ್ ಮತ್ತು ಸಮೀರ್ ಖಾನ್ ಎಂಬ ಹೆಸರಿನ ಬಳಕೆದಾರರು 2023 ರ ಏಪ್ರಿಲ್ 16 ರಂದು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಇಬ್ಬರು ಯುವಕರು ಉದ್ದವಾದ ಡೆನಿಮ್ ಸ್ಕರ್ಟ್‌ಗಳನ್ನು ಧರಿಸಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಅವರ ಉಡುಪು ಅನೇಕ ಜನರ ಗಮನ ಸೆಳೆಯಿತು. ತಮ್ಮ ವೇಷಭೂಷಣ ನೋಡಿ ನಗುವ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ವಿಡಿಯೋದಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Sameer Khan (@sameerthatsit)

ಇದನ್ನೂ ಓದಿ: ಕನಸಲ್ಲೂ ಕಾಡುವ ನಿನ್ನ ಸೌಂದರ್ಯದ ಮುಂದೆ ಎಲ್ಲವೂ ನಶ್ವರ ʼನಿಶ್ವಿಕಾʼ..!

ಈ ವೀಡಿಯೊ 16,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅನೇಕ ಜನರು ವೀಡಿಯೊ ನೋಡಿ ಅವರು ಧರಿಸಿರುವ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಪುರುಷರಿಗಾಗಿ ಈ ಬಟ್ಟೆಗಳನ್ನು ನಿಗದಿ ಮಾಡುವ ಬಗ್ಗೆ ಮಾತನಾಡಿದ್ದರೆ, ಇನ್ನು ಕೆಲವರು ನಗುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ʼಡೆನಿಮ್ ಲುಂಗಿʼ ಸೇರಿದಂತೆ ಹಲವು ನೆಟ್ಟಿಗರು ಯುವಕ ಬಟ್ಟೆಗೆ ಚಿತ್ರ ವಿಚಿತ್ರ ಹೆಸರಿಡುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News