ಅಬ್ಬಾ...! ದಾಹ ತೀರಿಸಿಕೊಳ್ಳಲು ಹೂಜಿಗೆ ಕಲ್ಲು ಹಾಕಿ ನೀರು ಕುಡಿಯೋ ಕಾಗೆ ಕೊನೆಗೆ ಸಿಕ್ಕೆ ಬೀಟ್ತು ... ವಿಡಿಯೋ ನೋಡಿ

Thirsty Crow Returns: ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ವೀಡಿಯೊವೊಂದು ಕಾಣಿಸಿಕೊಂಡಿದ್ದು ಇದೀಗ ಅದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಕಾಗೆಯೊಂದು ಗಾಜಿನ ಬಾಟಲಿಗೆ ಕಲ್ಲು ಹಾಕುತ್ತಿರುವುದು ಕಂಡು ಬರುತ್ತದೆ. ಹೀಗೆ ಮಾಡುವುದರಿಂದ ನೀರು ಮೇಲಕ್ಕೆ ಬರುತ್ತಿದೆ ಮತ್ತು ಅದರಿಂದ ಅದು ತನ್ನ ಬ್ಯಾಯಾರಿಕೆಯನ್ನು ತಣಿಸಿಕೊಳ್ಳುತ್ತಿದೆ.  ಈ ಕ್ಲಿಪ್ ನೋಡಿದಾಗ ಬಾಯಾರಿದ ಕಾಗೆಯ ಬಾಲ್ಯದ ಕಥೆ ನೆನಪಾಗುತ್ತದೆ. (Viral News In Kannada)

Written by - Nitin Tabib | Last Updated : Nov 10, 2023, 07:15 PM IST
  • ನವೆಂಬರ್ 9 ರಂದು ಹಂಚಿಕೊಂಡ ಈ ವೀಡಿಯೊ ಇದುವರೆಗೆ 19 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
  • ಇದರಲ್ಲಿ ಕಾಗೆಯ ಬುದ್ದಿವಂತಿಕೆ ನೋಡಿದರೆ ನೀವೂ ಕೂಡ ಆಶ್ಚರ್ಯ ಪಡುತ್ತೀರಿ.
  • ಈ ಕ್ಲಿಪ್ ನೋಡಿದ ಜನರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಅಬ್ಬಾ...! ದಾಹ ತೀರಿಸಿಕೊಳ್ಳಲು ಹೂಜಿಗೆ ಕಲ್ಲು ಹಾಕಿ ನೀರು ಕುಡಿಯೋ ಕಾಗೆ ಕೊನೆಗೆ ಸಿಕ್ಕೆ ಬೀಟ್ತು ... ವಿಡಿಯೋ ನೋಡಿ title=

ಬೆಂಗಳೂರು: ನಿಮ್ಮ ಶಾಲಾ ಪುಸ್ತಕದಲ್ಲಿ ಅಥವಾ ನಿಮ್ಮ ಅಜ್ಜಿಯಿಂದ ನೀವೂ ಕೂಡ ಆಸಕ್ತಿದಾಯಕ ಕತೆಗಳನ್ನು ಕೇಳಿರಬಹುದು. ಅದರಲ್ಲಿ ಬಾಯಾರಿದ ಕಾಗೆ ಕಥೆ ಖಂಡಿತ ಇದ್ದೇ ಇರುತ್ತದೆ. ಒಂದು ಮುದ್ದಾದ ಕಾಗೆ ಇರುತ್ತದೆ. ಅದಕ್ಕೆ ಬಾಯಾರಿಕೆಯಾಗುತ್ತದೆ. ಅದು ಮೊದಲು ಆಗ ಅದರ ಕಣ್ಣಿಗೆ ಒಂದು ಹೂಜಿ ಕಾಣುತ್ತದೆ. ಅದು ಮೊದಲು ಹೂಜಿಯಲ್ಲಿನ ನೀರು ಕುಡಿಯಲು ಪ್ರಯತ್ನಿಸುತ್ತದೆ. ಆದರೆ ಹೂಜಿಯಲ್ಲಿ ನೀರು ಕಡಿಮೆ ಇರುವ ಕಾರಣ ಅದು ನೀರನ್ನು ಕುಟಿಯಲಾಗದೆ ಹತಾಶೆಗೊಳ್ಳುತ್ತದೆ. ನಂತರ ಆ  ಕಾಗೆ ಅಲ್ಲಿ ಬಿದ್ದಿರುವ ಬೆಣಚುಕಲ್ಲುಗಳನ್ನು ನೋಡುತ್ತದೆ. ಆಮೇಲೆ ಏನು... ಕಾಗೆ ಹೂಜಿಗೆ ಒಂದೊಂದು ಬೆಣಚುಕಲ್ಲು ಹಾಕುತ್ತದೆ ಮತ್ತು ಅದರಿಂದ ಹೂಜಿಯಲ್ಲಿನ ನೀರು ಮೇಲಕ್ಕೆ ಬರುತ್ತದೆ. ಆಗ ಅದು  ಸುಲಭವಾಗಿ ತನ್ನ ಬಾಯಾರಿಕೆ ತಣಿಸಿಕೊಳ್ಳುತ್ತದೆ. ನಿಮ್ಮ ಶಾಲಾ ಪುಸ್ತಕದಲ್ಲಿ ಅಥವಾ ನಿಮ್ಮ ಅಜ್ಜಿಯಿಂದ ನೀವು ಈ ಆಸಕ್ತಿದಾಯಕ ಕಥೆಯನ್ನು ಕೇಳಿರಬೇಕು.(Viral News In Kannada)

ಇದನ್ನೂ ಓದಿ-Rashmika Mandanna Deepfake ವಿಡಿಯೋ ತಯಾರಿಸಿದವರಿಗೆ ಶಿಕ್ಷೆ-ದಂಡ ಪ್ರಕಟಿಸಿದ ಸರ್ಕಾರ, ಇಲ್ಲಿದೆ ಡೀಟೈಲ್ಸ್!

ಆ ಕಾಗೆ ಇಂದು ಸ್ವಲ್ಪ ಸ್ಮಾರ್ಟ್ ಆಗಿ ಮತ್ತೆ ಬಂದಿದೆ
ಈಗ ಅಂತಹುದೇ ಮತ್ತೊಂದು ಕಾಗೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಕೇವಲ ಕಥೆಯಲ್ಲ, ಆದರೆ ಇದು ನಿಜವಾಗಿ ಸಂಭವಿಸಿದ್ದು, ಕಣ್ಣುಗಳಿಗೆ ನಂಬಲಸಾಧ್ಯವಾಗಿದೆ. ಈ ವೈರಲ್ ಕ್ಲಿಪ್‌ನಲ್ಲಿ, ಕಾಗೆ ಗಾಜಿನ ಬಾಟಲಿಯಿಂದ ನೀರು ಕುಡಿಯಲು ಪ್ರಯತ್ನಿಸುತ್ತದೆ. ಹಾಗೆ ಮಾಡಲು ಸಾಧ್ಯವಾಗದಿದ್ದಾಗ, ಅದು ಕಥೆಯ ಅಜ್ಜಿ ಕಥೆಯ ವಿಧಾನವನ್ನು ಅಳವಡಿಸಿಕೊಂಡಿದೆ.

ಇದನ್ನೂ ಓದಿ-ಹಕ್ಕಿಯಂತೆ ಹಾರಿ ಬಂದು ಆನ್ಲೈನ್ ಸರಕು ತಲುಪಿಸುವ ಡೇಲಿವರಿ ಬಾಯ್ ನೋಡಿದ್ದೀರಾ?... ವಿಡಿಯೋ ನೋಡಿ!

ಕೊನೆಗೂ ಆ ಕಾಗೆ ಸಿಕ್ಕೆ ಬಿಟ್ಟಿದೆ
ನವೆಂಬರ್ 9 ರಂದು ಹಂಚಿಕೊಂಡ ಈ ವೀಡಿಯೊ ಇದುವರೆಗೆ  19 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಕಾಗೆಯ ಬುದ್ದಿವಂತಿಕೆ ನೋಡಿದರೆ  ನೀವೂ ಕೂಡ ಆಶ್ಚರ್ಯ ಪಡುತ್ತೀರಿ. ಈ ಕ್ಲಿಪ್ ನೋಡಿದ ಜನರು ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ತುಂಬಾ ಸ್ಮಾರ್ಟ್ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದುಕೊಂಡರೆ, ಮತ್ತೊಬ್ಬರು ನಾವು ಆ ಕಾಗೆಯನ್ನು ಕೊನೆಗೂ ಪತ್ತೆಹಚ್ಚಿದ್ದೇವೆ ಎಂದಿದ್ದಾರೆ. ವಿಡಿಯೋ ನೋಡಿ ನಿಮಗೆ ಹೇಗೆ ಅನ್ನಿಸಿದೆ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ಖಂಡಿತ ತಿಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News