Viral Video: ಕೋತಿಯನ್ನು ನುಂಗಲು ಯತ್ನಿಸುತ್ತಿರುವ ಹೆಬ್ಬಾವು: ಪಕ್ಕದಲ್ಲೇ ಇದ್ದ ಇತರ ಮಂಗಗಳು ಮಾಡಿದ್ದೇನು ನೋಡಿ

Today Viral Video: ವೈಲ್ಡ್ ಅನಿಮಲ್ಸ್‌ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಮಂಗವೊಂದು ಹೆಬ್ಬಾವಿನ ಮುಷ್ಠಿಗೆ ಸಿಕ್ಕಿ ಹಾಕಿಕೊಂಡು ಹೇಗೆ ಸಂಕಷ್ಟ ಅನುಭವಿಸಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ನೋಡಬಹುದು. ಹೆಬ್ಬಾವು ತನ್ನ ಬೇಟೆಯನ್ನು ಹೇಗಾದರೂ ನುಂಗುವ ಸಾಮಾರ್ಥ್ಯ ಹೊಂದಿದೆ.

Written by - Bhavishya Shetty | Last Updated : Nov 6, 2022, 03:32 PM IST
    • ಹೆಬ್ಬಾವನ್ನು ಅತ್ಯಂತ ಅಪಾಯಕಾರಿ ಜೀವಿ ಎಂದು ಪರಿಗಣಿಸಲಾಗಿದೆ
    • ಸಿಂಹಗಳನ್ನೂ ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯ ಹೆಬ್ಬಾವಿಗಿದೆ
    • ಹೆಬ್ಬಾವು ಕೋತಿಯನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು
Viral Video: ಕೋತಿಯನ್ನು ನುಂಗಲು ಯತ್ನಿಸುತ್ತಿರುವ ಹೆಬ್ಬಾವು: ಪಕ್ಕದಲ್ಲೇ ಇದ್ದ ಇತರ ಮಂಗಗಳು ಮಾಡಿದ್ದೇನು ನೋಡಿ title=
Monkey

Python Swallows Monkey: ಹೆಬ್ಬಾವನ್ನು ಅತ್ಯಂತ ಅಪಾಯಕಾರಿ ಜೀವಿ ಎಂದು ಪರಿಗಣಿಸಲಾಗಿದೆ. ಅವುಗಳ ಹಿಡಿತದಲ್ಲಿ ಸಿಕ್ಕಿಹಾಕಿಕೊಂಡರೆ ಬಿಡಿಸಲು ಸಾಧ್ಯವೇ ಇಲ್ಲ. ಸಿಂಹಗಳನ್ನೂ ಹಿಡಿದಿಟ್ಟುಕೊಳ್ಳುವ ಸಾಮಾರ್ಥ್ಯ ಹೆಬ್ಬಾವಿಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಹಲವು ಕೋತಿಗಳು ಮತ್ತು ಹೆಬ್ಬಾವಿಗೆ ಸಂಬಂಧಿಸಿದ್ದು. ಇದರಲ್ಲಿ ಹೆಬ್ಬಾವು ಕೋತಿಯನ್ನು ತನ್ನ ಹಿಡಿತದಲ್ಲಿ ತೆಗೆದುಕೊಂಡಿರುವುದನ್ನು ನೀವು ನೋಡುತ್ತೀರಿ. ಅದೇ ಸಮಯದಲ್ಲಿ ಅನೇಕ ಕೋತಿಗಳು ಬಂದು ಕಾಪಾಡಲು ಯತ್ನಿಸುತ್ತವೆ.

ಇದನ್ನೂ ಓದಿ: Vastu Tips: ಸೂರ್ಯಾಸ್ತದ ನಂತರ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ: ದಾರಿದ್ರ್ಯ ಆವರಿಸೋದು ಖಂಡಿತ

ವೈಲ್ಡ್ ಅನಿಮಲ್ಸ್‌ಗೆ ಸಂಬಂಧಿಸಿದ ಈ ವಿಡಿಯೋದಲ್ಲಿ ಮಂಗವೊಂದು ಹೆಬ್ಬಾವಿನ ಮುಷ್ಠಿಗೆ ಸಿಕ್ಕಿ ಹಾಕಿಕೊಂಡು ಹೇಗೆ ಸಂಕಷ್ಟ ಅನುಭವಿಸಲು ಪ್ರಾರಂಭಿಸುತ್ತದೆ ಎಂಬುದನ್ನು ನೀವು ನೋಡಬಹುದು. ಹೆಬ್ಬಾವು ತನ್ನ ಬೇಟೆಯನ್ನು ಹೇಗಾದರೂ ನುಂಗುವ ಸಾಮಾರ್ಥ್ಯ ಹೊಂದಿದೆ. ಈ ವೀಡಿಯೋದಲ್ಲಿಯೂ ಅದೇ ರೀತಿ ಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಮಂಗ ಇದರ ಮುಷ್ಠಿಯಿಂದ ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.

ಹೆಬ್ಬಾವಿನ ಈ ವಿಡಿಯೋ ನೋಡಿhttps://www.india.com/hindi-news/viral/azgar-ka-video-bandar-ka-video-azgar-aur-bandar-ka-video-animal-video-google-trends-python-trying-to-swallowed-monkey-omg-video-went-viral-see-what-happened-next-5714760/

ಇಡೀ ಕೋತಿಗಳ ಹಿಂಡು ತಮ್ಮ ಸಂಗಾತಿಯನ್ನು ರಕ್ಷಿಸಲು ಸ್ಥಳಕ್ಕೆ ಬರುವುದನ್ನು ಈ ವೀಡಿಯೊದಲ್ಲಿ ನೀವು ನೋಡುತ್ತೀರಿ. ಒಂದು ಕಡೆಯಿಂದ ಹೆಬ್ಬಾವಿನ ಬಾಲ ಸಡಿಲಗೊಳಿಸಲು ಒಂದು ಕೋತಿ ಪ್ರಯತ್ನಿಸಿದರೆ, ಮತ್ತುಳಿದವು ಜೋರಾಗಿ ಅರಚಾಡುತ್ತಿವೆ. ಇದೇ ಸಂದರ್ಭದಲ್ಲಿ ಹೆಬ್ಬಾವು ಅವುಗಳ ಮೇಲೂ ದಾಳಿ ನಡೆಸಲು ಪ್ರಯತ್ನಿಸತ್ತಿದೆ.

ಇದನ್ನೂ ಓದಿ: Chikoo Fruit: ಚಿಕ್ಕೂ ಹಣ್ಣು ತಿನ್ನುವುದರಿಂದ ಗುಣವಾಗುತ್ತೆ ಈ ಕಾಯಿಲೆ!

ವೈಲ್ಡ್‌ಮಾಫಿಶಿಯಲ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದನ್ನು ಅಪ್‌ಲೋಡ್ ಮಾಡಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News