ರೋಗಿಯ ಹೊಟ್ಟೆಯಲ್ಲಿತ್ತು ಸ್ಟೀಲ್ ಗ್ಲಾಸ್: ಇಷ್ಟು ದೊಡ್ಡ ವಸ್ತು ಹೊಟ್ಟೆಗೆ ಹೋಗಿದ್ದೇಗೆ ಗೊತ್ತಾ?

ಉತ್ತರ ಪ್ರದೇಶದ (ಯುಪಿ) ಜೌನ್‌ಪುರದ ಭಟೌಲಿ ಗ್ರಾಮದಲ್ಲಿ ವಾಸಿಸುತ್ತಿರುವ 50 ವರ್ಷದ ಸಮರನಾಥ್ ಎಂಬವರ ಹೊಟ್ಟೆಯಲ್ಲಿ ಸ್ಟೀಲ್‌ ಗ್ಲಾಸ್‌ ಕಂಡುಬಂದಿದೆ. ವೈದ್ಯರು ಆತನ ಹೊಟ್ಟೆಗೆ ಆಪರೇಷನ್ ಮಾಡಿ ಸ್ಟೀಲ್ ಗ್ಲಾಸ್ ತೆಗೆದಿದ್ದಾರೆ. ಮೂರು-ನಾಲ್ಕು ದಿನಗಳಿಂದ ಸಮರನಾಥನ ಹೊಟ್ಟೆಯಲ್ಲಿ ತುಂಬಾ ನೋವು ಇತ್ತು.

Written by - Bhavishya Shetty | Last Updated : Aug 6, 2022, 10:50 AM IST
  • ವ್ಯಕ್ತಿಯ ಹೊಟ್ಟೆಯಲ್ಲಿ ಸ್ಟೀಲ್‌ ಗ್ಲಾಸ್‌ ಪತ್ತೆ
  • ಉತ್ತರ ಪ್ರದೇಶದ ಸಮರನಾಥ್ ಎಂಬವರ ಹೊಟ್ಟೆಯಲ್ಲಿ ಕಾಣಿಸಿಕೊಂಡ ಗ್ಲಾಸ್‌
  • ಆಪರೇಷನ್‌ ಮೂಲಕ ಗ್ಲಾಸ್‌ ಹೊರತೆಗೆದ ವೈದ್ಯರು
ರೋಗಿಯ ಹೊಟ್ಟೆಯಲ್ಲಿತ್ತು ಸ್ಟೀಲ್ ಗ್ಲಾಸ್: ಇಷ್ಟು ದೊಡ್ಡ ವಸ್ತು ಹೊಟ್ಟೆಗೆ ಹೋಗಿದ್ದೇಗೆ ಗೊತ್ತಾ?  title=
Uttar Pradesh

ವೈದ್ಯರು ಹರಸಾಹಸ ಪಟ್ಟು ಸರ್ಜರಿಗಳನ್ನು ಮಾಡಿ, ಮನುಷ್ಯ ಅಚಾನಕ್‌ ಆಗಿ ನುಂಗಿದ್ದ ಟವೆಲ್, ಕತ್ತರಿ, ಗ್ಲೌಸ್ ಹೀಗೆ ಅನೇಕ ವಸ್ತುಗಳನ್ನು ಹೊರತೆಗೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅನೇಕ ವರದಿಗಳು ಈಗಾಗಲೇ ನಾವು ಓದಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯ ಹೊಟ್ಟೆಯಲ್ಲಿ ಸ್ಟೀಲ್‌ ಗ್ಲಾಸ್‌ ಸೇರಿಕೊಂಡಿದ್ದು, ಆಘಾತ ಸೃಷ್ಟಿಸಿದೆ. 

ಇದನ್ನೂ ಓದಿ: ಇಂದಿನಿಂದ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಆರಂಭ: ಪಡಿತರದಿಂದ ಫ್ಯಾಷನ್‌ವರೆಗೆ 80% ರಿಯಾಯಿತಿ

ಉತ್ತರ ಪ್ರದೇಶದ (ಯುಪಿ) ಜೌನ್‌ಪುರದ ಭಟೌಲಿ ಗ್ರಾಮದಲ್ಲಿ ವಾಸಿಸುತ್ತಿರುವ 50 ವರ್ಷದ ಸಮರನಾಥ್ ಎಂಬವರ ಹೊಟ್ಟೆಯಲ್ಲಿ ಸ್ಟೀಲ್‌ ಗ್ಲಾಸ್‌ ಕಂಡುಬಂದಿದೆ. ವೈದ್ಯರು ಆತನ ಹೊಟ್ಟೆಗೆ ಆಪರೇಷನ್ ಮಾಡಿ ಸ್ಟೀಲ್ ಗ್ಲಾಸ್ ತೆಗೆದಿದ್ದಾರೆ. ಮೂರು-ನಾಲ್ಕು ದಿನಗಳಿಂದ ಸಮರನಾಥನ ಹೊಟ್ಟೆಯಲ್ಲಿ ತುಂಬಾ ನೋವು ಇತ್ತು. ಹಲವು ಆಸ್ಪತ್ರೆಗಳಿಗೆ ಹೋದರೂ ಪರಿಹಾರ ಸಿಕ್ಕಿರಲಿಲ್ಲ. ಇದಾದ ಬಳಿಕ ಕೆಲ ಸಂಬಂಧಿಕರು ಹೇಳಿದ ಮಾಹಿತಿ ಆಧರಿಸಿ ವಾಜಿದ್ ಪುರದ ಸಿದ್ಧಾರ್ಥ್ ಆಸ್ಪತ್ರೆಗೆ ಬಂದು ಡಾ.ಲಾಲ್ ಬಹದ್ದೂರ್ ಸಿದ್ಧಾರ್ಥ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ನಂತರ ಎಕ್ಸ್ ರೇ ಮಾಡಿಸಿದಾಗ ಹೊಟ್ಟೆಯಲ್ಲಿ ಗ್ಲಾಸ್‌ ಇರುವುದು ಕಂಡುಬಂದಿದೆ. ಹೀಗಾಗಿ ವೈದ್ಯರು ಆಪರೇಷನ್ ಮಾಡಿ ಹೊಟ್ಟೆಯಿಂದ ಸ್ಟೀಲ್ ಗ್ಲಾಸ್ ತೆಗೆದಿದ್ದಾರೆ. 

ಈ ಕುರಿತು ಮಾಹಿತಿ ನೀಡಿದ ವೈದ್ಯ ಲಾಲ್ ಬಹದ್ದೂರ್ ಸಿದ್ಧಾರ್ಥ್, ಹರ್ನಿಯಾ ಆಪರೇಷನ್‌ಗಾಗಿ ರೋಗಿಯೊಬ್ಬರು ನಮ್ಮ ಬಳಿಗೆ ಬಂದು ನನಗೆ ಹೊಟ್ಟೆ ನೋವು ಇದೆ ಎಂದು ಹೇಳಿದರು. ನನಗೆ ಆಪರೇಷನ್ ಮಾಡಿ ಅಂತ ಕೇಳಿಕೊಂಡರು. ಅದಕ್ಕೂ ಮೊದಲು ಎಕ್ಸ್ ರೇ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಫುಲ್ ಸೈಜ್ ಸ್ಟೀಲ್ ಗ್ಲಾಸ್ ಕಂಡುಬಂತು. ಗ್ಲಾಸ್ ಹೊಟ್ಟೆಗೆ ಹೇಗೆ ಬಂತು ಎಂದು ನಾನು ರೋಗಿಯನ್ನು ಕೇಳಿದೆ. ಅದಕ್ಕೆ ಅವನ ಬಳಿ ಉತ್ತರ ಇರಲಿಲ್ಲ. ಹಲವು ದಿನಗಳಿಂದ ಹೊಟ್ಟೆ ನೋವು ಬರುತ್ತಿದೆ ಎಂದು ಹೇಳಿದ್ದಾನೆ. ನಂತರ ಇಡೀ ವೈದ್ಯರ ತಂಡ ಗಂಟೆಗಳ ಕಠಿಣ ಪರಿಶ್ರಮ ಪಟ್ಟು ಆಪರೇಷನ್‌ ಮಾಡಿ ಗ್ಕಾಸ್‌ನ್ನು ಹೊರತೆಗೆದಿದ್ದಾರೆ. 

ಪೂರ್ಣ ಗಾತ್ರದ ಗ್ಲಾಸ್‌ ಹೊಟ್ಟೆಯೊಳಗೆ ಹೋಗಿದ್ದೇಗೆ? 
ಸ್ಟೀಲ್ ಗ್ಲಾಸ್ ಹೊರಬಂದ ನಂತರ ಈ ಸುದ್ದಿ ಜನರಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪೂರ್ಣ ಪ್ರಮಾಣದ ಸ್ಟೀಲ್ ಗ್ಲಾಸ್ ಹೊಟ್ಟೆಯೊಳಗೆ ಹೇಗೆ ಹೋಯಿತು? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದು, ಮದ್ಯ ಸೇವಿಸಿದ ಬಳಿಕ ವ್ಯಕ್ತಿ ಯಾರದ್ದೋ ಜೊತೆಗೆ ಜಗಳವಾಡಿದ್ದಾನೆ. ಆ ಸಂದರ್ಭದಲ್ಲಿ ಗ್ಲಾಸ್‌ನ್ನು ವ್ಯಕ್ತಿಯ ಖಾಸಗಿ ಭಾಗದ ಮೂಲಕ ಹಾಕಿದ್ದಾರೆ ಎಂದು ಹೇಳಿದ್ದಾರೆ. ಆದರೂ ಈ ವಿಷಯ ಮಾತ್ರ ಜನರು ನಂಬುತ್ತಿಲ್ಲ. 

ಇದನ್ನೂ ಓದಿ: Snake: ಅಬ್ಬಬ್ಬಾ... ದೈತ್ಯ ಹೆಬ್ಬಾವನ್ನು ಹೆಗಲ ಮೇಲೆ ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ

ರೋಗಿ ಹೇಳಿದ್ದು ಹೀಗೆ: 
"ಕೆಲ ದಿನಗಳ ಹಿಂದೆ ಗ್ರಾಮದ ಕೆಲವರೊಂದಿಗೆ ನನಗೆ ಜಗಳವಾಗಿತ್ತು. ಅವರು ನಾನು ಮದ್ಯ ಸೇವಿಸಿದ ಬಳಿಕ ನನ್ನ ಖಾಸಗಿ ಭಾಗಕ್ಕೆ ಗ್ಲಾಸ್ ಹಾಕಿದ್ದರು. ನನಗೆ ಪ್ರಜ್ಞೆ ಬಂದಾಗ ನೋವು ಶುರುವಾಯಿತು. 5 ದಿನಗಳ ಕಾಲ ಹೊಟ್ಟೆಯಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡಿತು. ಊಟ ಮಾಡಲು, ನೀರು ಕುಡಿಯಲು ಸಹ ಸಾಧ್ಯವಾಗಿರಲಿಲ್ಲ. ವೈದ್ಯರ ಬಳಿಗೆ ಹೋದಾಗ ಅವರು ಎಕ್ಸ್ ರೇ ಮಾಡಿಸಿದರು. ಈ ಸಂದರ್ಭದಲ್ಲಿ ನನ್ನ ಹೊಟ್ಟೆಯೊಳಗೆ ಫುಲ್ ಸೈಜ್ ಸ್ಟೀಲ್ ಗ್ಲಾಸ್ ಇರುವುದು ಪತ್ತೆಯಾಗಿತ್ತು. ಸದ್ಯ ಆಪರೇಷನ್ ಮಾಡಿ ಹೊರತೆಗೆದಿದ್ದಾರೆ" ಎಂದು ಅವರು ಸಮರ್‌ನಾಥ್‌ ಹೇಳಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News