Shocking CCTV Footage: ಬಾಲಕಿಯ ಕೈಹಿಡಿದು ಲಿಫ್ಟ್ ಒಳಗೆ ಎಳೆದುಕೊಂಡ 16ರ ಯುವಕ!

ಲಿಫ್ಟ್ ನೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧಿರಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Written by - Puttaraj K Alur | Last Updated : Jun 5, 2022, 12:25 PM IST
  • ಗುಜರಾತ್‍ನ ಸೂರತ್‍ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ
  • ಲಿಫ್ಟ್ ನೊಳಗೆ ಬಾಲಕಿಯ ಮೇಲೆ ಲೈಂಗಿಕ ಯುವಕನೊಬ್ಬ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Shocking CCTV Footage: ಬಾಲಕಿಯ ಕೈಹಿಡಿದು ಲಿಫ್ಟ್ ಒಳಗೆ ಎಳೆದುಕೊಂಡ 16ರ ಯುವಕ! title=
ಆಘಾತಕಾರಿ ವಿಡಿಯೋ ವೈರಲ್ ಆಗಿದೆ

ಸೂರತ್​: ಗುಜರಾತ್‍ನ ಸೂರತ್‍ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹದಿಹರೆಯದ ಯುವಕನೊಬ್ಬ ಲಿಫ್ಟ್ ನೊಳಗೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಆಗಿದ್ದೇನು..?

ಸೂರತ್​ನ ದಿಂಡೋಲಿ ಪೆವಲಿಯನ್​ ಪ್ಲಾಜಾದಲ್ಲಿನ ಲಿಫ್ಟ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಪ್ಲಾಜಾದ ನೆಲಮಾಳಿಗೆಯಲ್ಲಿ ಟೀ ಮಾರಾಟ ಮಾಡುವವನ 12 ವರ್ಷದ ಪುತ್ರಿ ಲಿಫ್ಟ್ ಪ್ರವೇಶಿಸಿರುತ್ತಾಳೆ. ಪ್ಲಾಜಾದ 3ನೇ ಮಹಡಿಯಲ್ಲಿರುವ ಕಾಳಿಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದ ಆಕೆಯ ಮೇಲೆ 16 ವರ್ಷದ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾನೆ.

ಇದನ್ನೂ ಓದಿ: ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್‌ ರಥ: ಚಿನ್ನದ ತೇರಿನ ವಿಶೇಷತೆ ಏನ್‌ ಗೊತ್ತಾ!

ಯುವತಿ ಒಬ್ಬಳೇ ಹೋಗುತ್ತಿದ್ದಾಗ ನಡುವಿನಲ್ಲಿ ಲಿಫ್ಟ್ ಪ್ರವೇಶಿಸುವ ಯುವಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಲಿಫ್ಟ್ ನಿಂದ ಹೊರ ಹೋಗುವಾಗ ಆಕೆಯ ಕೈಹಿಡಿದು ಒಳಗೆ ಎಳೆದುಕೊಳ್ಳುತ್ತಾನೆ. ಬಾಲಕಿ ಕೊಸರಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಆತ ಮಾತ್ರ ಹೀನಕೃತ್ಯವೆಸಗಲು ಪ್ರಯತ್ನಿಸಿದ್ದಾನೆ. ಲಿಫ್ಟ್ ಬಾಗಿಲು ತೆರೆಯಲು ಬಿಡದೆ ಆಕೆಯನ್ನು ತಬ್ಬಿಕೊಂಡು ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ.

ಈ ವೇಳೆ ಬಾಲಕಿ ಆತನಿಂದ ತಪ್ಪಿಸಿಕೊಳ್ಳಲು ಸರ್ವಪ್ರಯತ್ನ ಮಾಡುತ್ತಾಳೆ. ಆತ ಮಾತ್ರ ಆಕೆಯ ಮೈ-ಕೈ ಮುಟ್ಟಿ ಎಳೆದಾಡಿ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಿಸಿದ್ದಾನೆ. ಕೊನೆಗೆ ಲಿಫ್ಟ್​ ಬಾಗಿಲು ತೆರೆದಾಗ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಘಟನೆ ಬಳಿಕ ಮನನೊಂದ ಬಾಲಕಿ ಅಳುತ್ತಾ ಮನೆಗೆ ತೆರಳಿ ಪಾಲಕರಿಗೆ ವಿಷಯ ತಿಳಿಸಿದ್ದಾಳೆ.

ಇದನ್ನೂ ಓದಿ: ನಿಗೂಢ ಅರಣ್ಯ ರಹಸ್ಯ: ಈ ವಿಸ್ಮಯಕಾರಿ ಕಾಡಿಗೆ ಹೋದವರು ಯಾರೂ ತಿರುಗಿ ಬಂದಿಲ್ಲ

ಈ ಬಗ್ಗೆ ಬಾಲಕಿಯ ಪೋಷಕರು ಠಾಣೆಯ ಮೆಟ್ಟಿಲೇರಿ ಯುವಕನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಿಂಡೋಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಲಿಫ್ಟ್ ನೊಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಆಧಿರಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಮುಕ ಯುವಕನಿಗೆ ಕಠಿಣ ಶಿಕ್ಷೆ ವಿಧಿಸುವಂತೆ ನೆಟಿಜನ್‍ಗಳು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News