ಬೈಕ್‌ ಸವಾರನ ಮೇಲೆ ಕೋಪ: ಸ್ಕಾರ್ಪಿಯೋ ಕಾರು ಚಾಲಕ ಮಾಡಿದ ಕೆಲಸ ನೋಡಿದ್ರೆ ದಂಗಾಗ್ತೀರಾ!

ಬೈಕ್ ಸವಾರರ ಗುಂಪಿನಲ್ಲಿ ಒಬ್ಬರು ತಮ್ಮ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಅಲ್ಲಿ ಕಾರು ಚಾಲಕ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ತಿರುಗಿಸಿ ಬದಿಯಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಕಾರು ಅತಿವೇಗದಲ್ಲಿ ಸಾಗುತ್ತಿರುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

Written by - Bhavishya Shetty | Last Updated : Jun 6, 2022, 05:37 PM IST
  • ದೆಹಲಿಯಲ್ಲಿ ಹಿಟ್ ಆಂಡ್ ರನ್ ಪ್ರಕರಣ
  • ಬೈಕ್‌ ಸವಾರನ ಮೇಲೆ ಸ್ಕಾರ್ಪಿಯೋ ಹರಿಸಿದ ಚಾಲಕ
  • ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
ಬೈಕ್‌ ಸವಾರನ ಮೇಲೆ ಕೋಪ: ಸ್ಕಾರ್ಪಿಯೋ ಕಾರು ಚಾಲಕ ಮಾಡಿದ ಕೆಲಸ ನೋಡಿದ್ರೆ ದಂಗಾಗ್ತೀರಾ! title=
Accident Video

ದೆಹಲಿಯಲ್ಲಿ ನಡೆದ ಹಿಟ್ ಆಂಡ್ ರನ್ ಪ್ರಕರಣ ಸಂಬಂಧಿಸಿದಂತೆ ಆಘಾತಕಾರಿ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿಯ ರಸ್ತೆಯಲ್ಲಿ ಬೈಕ್ ಸವಾರರ ಗುಂಪೊಂದು ಸ್ಕಾರ್ಪಿಯೋ ಕಾರಿನ ಚಾಲಕನೊಂದಿಗೆ ವಾಗ್ವಾದಕ್ಕಿಳಿದ ಬಳಿಕ ಆತ ಸೇಡಿನಂತೆ ಬೈಕ್‌ ತನ್ನ ಕಾರನ್ನು ಡಿಕ್ಕಿ ಹೊಡೆದಿರುವುದಾಗಿ ಕಂಡುಬರುತ್ತದೆ.

ಇದನ್ನು ಓದಿ: Bride Groom Video: ಮದುವೆ ರಾತ್ರಿ ಹೇಗಿತ್ತು- ವಿಡಿಯೋ ಹಂಚಿಕೊಂಡ ವಧು-ವರ!

ಬೈಕ್ ಸವಾರರ ಗುಂಪಿನಲ್ಲಿ ಒಬ್ಬರು ತಮ್ಮ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಾರೆ. ಅಲ್ಲಿ ಕಾರು ಚಾಲಕ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ತಿರುಗಿಸಿ ಬದಿಯಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಕಾರು ಅತಿವೇಗದಲ್ಲಿ ಸಾಗುತ್ತಿರುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.

ದೆಹಲಿಯ ಅರ್ಜನ್ ಗಢ್ ಮೆಟ್ರೋ ನಿಲ್ದಾಣದ ಕೆಳಗೆ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ.  ಗಾಯಗೊಂಡ ಬೈಕ್ ಸವಾರನನ್ನು ಸುಮಾರು 20 ವರ್ಷದ ಶ್ರೇಯಾಂಶ್ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸಿ ದೆಹಲಿಗೆ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪೊಲೀಸರು ಘಟನೆಯನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ. 

 

 

ಸಾಮಾಜಿಕ ಮಾಧ್ಯಮ ಬಳಕೆದಾರರಾದ ಅನುರಾಗ್ ಆರ್ ಅಯ್ಯರ್ ಅವರು ಟ್ವಿಟರ್‌ನಲ್ಲಿ ಪ್ರಧಾನಿ ಕಚೇರಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿಯ ಡೆಪ್ಯುಟಿ ಕಮಿಷನರ್ ಅವರನ್ನು ಟ್ಯಾಗ್ ಮಾಡಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕಾರು ಚಾಲಕ ಬೈಕ್ ಸವಾರನನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: National Herald Case ; ನೆಹರು ಸ್ಮಾರಕಕ್ಕೆ ಇಡಿ ಸಮನ್ಸ್ ಅಂಟಿಸಿದರೆ ಆಶ್ಚರ್ಯವಿಲ್ಲ- ಸಂಜಯ್

@anuragiyer ಹೆಸರಿನ ಟ್ವಿಟರ್‌ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 'ದಯವಿಟ್ಟು ನಮಗೆ ಸಹಾಯ ಮಾಡಿ, ಸ್ಕಾರ್ಪಿಯೋ ಕಾರು ಚಾಲಕ ನಮ್ಮ ಸವಾರನನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಕಾರಿನ ಕೆಳಗೆ ಹಾಕಿ ನಮ್ಮನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆʼ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News