Viral Video : ಜಸ್ಟ್‌ ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ..

Viral Video :ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಬೈಕ್ ಸವಾರರು ಹುಲಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಾಡಿಗೆ ಹೋಗುತ್ತಿದ್ದ ಬೈಕ್ ಸವಾರರ ವೇಗಕ್ಕೆ ಅವರನ್ನು ಬದುಕುಳಿಸಿದೆ. 5 ಸೆಕೆಂಡ್ ಕೂಡ ತಡವಾಗಿದ್ದರೆ ಹುಲಿಯ ಬಾಯಿಗೆ ಸಿಲುಕಬೇಕಿತ್ತು. 

Written by - Chetana Devarmani | Last Updated : Dec 23, 2022, 10:26 AM IST
  • ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ?
  • ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಡೆದ ಘಟನೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Viral Video : ಜಸ್ಟ್‌  ಮಿಸ್‌! ಹುಲಿ ಬಾಯಿಗೆ ಸಿಕ್ಕವರು ಬಚಾವ್‌ ಆಗಿದ್ದು ಹೇಗೆ ನೋಡಿ.. title=

Viral Video : ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಬೈಕ್ ಸವಾರರು ಹುಲಿ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಾಡಿಗೆ ಹೋಗುತ್ತಿದ್ದ ಬೈಕ್ ಸವಾರರ ವೇಗಕ್ಕೆ ಅವರನ್ನು ಬದುಕುಳಿಸಿದೆ. 5 ಸೆಕೆಂಡ್ ಕೂಡ ತಡವಾಗಿದ್ದರೆ ಹುಲಿಯ ಬಾಯಿಗೆ ಸಿಲುಕಬೇಕಿತ್ತು. ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ವ್ಯಕ್ತಿ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 

ಇದನ್ನೂ ಓದಿ : CCTV Video : ಈ ಚಾಲಾಕಿ ಕಳ್ಳ ಮೊಬೈಲ್‌ ಎಗರಿಸಿದ ರೀತಿ ಕಂಡ್ರೆ ಶಾಕ್‌ ಆಗ್ತೀರಾ!

ವಾಸ್ತವವಾಗಿ, ಪಿಲಿಭಿತ್ ಹುಲಿ ಸಂರಕ್ಷಿತ ಅರಣ್ಯದಿಂದ ಅನೇಕ ಮಾರ್ಗಗಳಿವೆ. ಈ ಕಾಡಿನಲ್ಲಿ ರಸ್ತೆಯಲ್ಲಿ ಬರುವ ಪ್ರಾಣಿಗಳು ರಸ್ತೆ ದಾಟುವ ಕಾರಣ ಕಾಡಿನ ದಾರಿಯಲ್ಲಿ ವಾಹನಗಳನ್ನು ನಿಧಾನಗತಿಯಲ್ಲಿ ಓಡಿಸಬೇಕೆಂಬ ನಿಯಮವಿದೆ. ಒಮ್ಮೆ ಹುಲಿಯೊಂದು ರಸ್ತೆಯಲ್ಲಿ ಓಡಾಡುತ್ತಿತ್ತು. ಕಾರು ಸವಾರ ತನ್ನ ಕಾರನ್ನು ನಿಲ್ಲಿಸಿ ತನ್ನ ಮೊಬೈಲ್ ತೆಗೆದು ಕ್ಯಾಮರಾದಲ್ಲಿ ರೆಕಾರ್ಡ್ ಮಾಡತೊಡಗಿದ. ಅಷ್ಟರಲ್ಲಿ ಹಿಂದಿನಿಂದ ಬೈಕ್ ಸವಾರನೊಬ್ಬ ವೇಗವಾಗಿ ಬಂದಿದ್ದು, ಆತನ ಹಿಂದೆ ಮತ್ತೊಬ್ಬ ಕುಳಿತಿದ್ದ. ಇಬ್ಬರೂ ಬೇಗನೆ ಹುಲಿಯ ಹತ್ತಿರ ಬಂದರು. ಅದೃಷ್ಟವಶಾತ್ ಹುಲಿಗೆ ಇದು ಗೊತ್ತಾಗಲಿಲ್ಲ, ಇಲ್ಲದಿದ್ದರೆ ದಾಳಿ ಮಾಡುತ್ತಿತ್ತೋ ಏನೋ? ಅದೃಷ್ಟವಶಾತ್‌ ಹುಲಿ ಬಾಯಿಗೆ ಸಿಗದೆ ಇಬ್ಬರೂ ಪಾರಾಗಿದ್ದಾರೆ.

 

 

ಸಾವಿನ ದವಡೆಯಿಂದ ಪಾರಾದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾರ ಮೇಲೂ ದಾಳಿ ಮಾಡದೆ ನಿಧಾನವಾಗಿ ಹುಲಿ ಕಾಡಿನತ್ತ ಹೋಯಿತು. ಎಂದಿಗೂ ಅನಗತ್ಯವಾಗಿ ಯಾರ ಮೇಲೂ ದಾಳಿ ಮಾಡುವುದಿಲ್ಲ ಎಂಬ ಹುಲಿಯ ಸ್ವಭಾವವನ್ನು ತೋರಿಸಿದೆ. ಅಪಾಯವನ್ನು ಗ್ರಹಿಸಿದ ನಂತರವೇ ಹುಲಿ ಜನರ ಮೇಲೆ ದಾಳಿ ಮಾಡುತ್ತದೆ. ರಸ್ತೆಗೆ ಹುಲಿ ಬಂದಿದ್ದರಿಂದ ಸಂಚಾರಕ್ಕೂ ತೊಂದರೆ ಉಂಟಾಯಿತು. ಆದರೆ ಅದು ನಿರ್ಗಮಿಸಿದ ನಂತರ ಸಂಚಾರ ಸುಗಮವಾಗಿ ಆರಂಭವಾಯಿತು.

ಇದನ್ನೂ ಓದಿ : Shani Dev: ಶನಿವಾರದಂದು ಈ ಮಾಂತ್ರಿಕ ತಂತ್ರ ಮಾಡಿ, ಶನಿದೇವನ ಕೃಪೆಗೆ ಪಾತ್ರರಾಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News