Google ನಲ್ಲಿ 'ಜವಾನ್' ಅಂತಾ ಟೈಪ್ ಮಾಡಿ ಹುಡುಕಾಟ ನಡೆಸಿದರೆ ಏನ್ ಬರುತ್ತಿದೆ ನೀವೇ ನೋಡಿ!

Search Jawan In Google: ಶಾರುಖ್ ಅಭಿನಯದ 'ಜವಾನ್' ಚಿತ್ರಕ್ಕೆ ಸಂಬಂಧಿಸಿದಂತೆ ಗೂಗಲ್ ಶಾರುಕ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಹೀಗಿರುವಾಗ ಗೂಗಲ್ ಸರ್ಚ್ ನಲ್ಲಿ ನೀವು Jawan ಬರೆದು ಹುಡುಕಾಟ ನಡೆಸಿದರೆ, ಅದರ ಕೆಳಭಾಗದಲ್ಲಿ ನಿಮಗೆ ವಾಕಿ ಟಾಕಿ ಬರೆದಿರುವುದು ಕಂಡುಬರುತ್ತಿದೆ. ಅದನ್ನು ಕ್ಲಿಕ್ಕಿಸಿದಾಗ ನೀವು ಕೂಡ ರೋಮಾಂಚನಗೊಳ್ಳುವಿರಿ. 

Written by - Nitin Tabib | Last Updated : Sep 8, 2023, 07:39 PM IST
  • ಒಂದೆಡೆ ಶಾರುಕ್ ಅಭಿಮಾನಿಗಳು ಈಗಾಗಲೇ ಈ ಚಿತ್ರದ ಕುರಿತು ತುಂಬಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ.
  • ಇನ್ನೊಂದೆಡೆ ಗೂಗಲ್ ನೀಡಿದ ಈ ಕೊಡುಗೆಯ ಬಳಿಕ ಗೂಗಲ್ ನಲ್ಲಿ ಜವಾನ್ ಹುಡುಕಾಟಕ್ಕೆ ಜನರು ಭಾರಿ ಪ್ರಮಾಣದಲ್ಲಿ ಮುಗಿಬಿದ್ದಿರುವುದು ನಿಮಗೆ ಕಂಡುಬರಲಿದೆ.
  • ಈ ದೃಶ್ಯ ನಿಮಗೆ ಚಿತ್ರದ ರೋಮಾಂಚನ ಹಾಗೂ ಆಕ್ಷನ್ ನಿಂದ ಕೂಡಿದ ಸಿನೆಮ್ಯಾಟಿಕ್ ಅನುಭವವನ್ನು ನೀಡುತ್ತದೆ.
Google ನಲ್ಲಿ 'ಜವಾನ್' ಅಂತಾ ಟೈಪ್ ಮಾಡಿ ಹುಡುಕಾಟ ನಡೆಸಿದರೆ ಏನ್ ಬರುತ್ತಿದೆ ನೀವೇ ನೋಡಿ! title=

ಬೆಂಗಳೂರು: ಗೂಗಲ್ ಕಾಲಕಾಲಕ್ಕೆ ತನ್ನ ಅಭಿಮಾನಿಗಳಿಗೆ ಆಶ್ಚರ್ಯಚಕಿತರನ್ನಾಗಿಸುತ್ತದೆ. ಹೀಗಿರುವಾಗ ಈ ಬಾರಿ ಗೂಗಲ್ ಸಿನಿಪ್ರಿಯರಿಗೆ ಒಂದು ಸರ್ಪ್ರೈಸ್ ನೀಡಿದೆ. ಸೆಪ್ಟೆಂಬರ್ 7 ರಂದು ಬೆಳ್ಳಿ ಪರದೆಗೆ ಅಪ್ಪಳಿಸಿದ ಮತ್ತು ಶಾರುಕ್ ಅಭಿನಯದ 'ಜವಾನ್' ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ಗೂಗಲ್ ತೊಡಗಿರುವಂತೆ ಕಂಡುಬರುತ್ತಿದೆ. ಇದಕ್ಕಾಗಿ ನೀವು ಗೂಗಲ್ ನ ಮುಖಪುಟದಲ್ಲಿರುವ ಸರ್ಚ್ ಬಾರ್ ನಲ್ಲಿ ಕ್ಲಿಕ್ಕಿಸಬೇಕು. ಬಳಿಕ ಅಲ್ಲಿ ಚಿತ್ರದ ಹೆಸರು ಅಂದರೆ Jawan ಅಂತಾ ಟೈಪ್ ಮಾಡಬೇಕು ಮತ್ತು ಹುಡುಕಾಟ ನಡೆಸಬೇಕು. ಬಳಿಕ ನಮಗೆ ಕಾಣಿಸುವ ದೃಶ್ಯ ನಿಮ್ಮನ್ನು ಆಶ್ಚರ್ಯಕ್ಕೀಡುಮಾಡಲಿದೆ. 

ಇದನ್ನೂ ಓದಿ-ಜಾತಕದಲ್ಲಿ ಶನಿ ಶುಭನಾಗಿದ್ದಾನೋ ಅಥವಾ ಅಶುಭನಾಗಿದ್ದಾನೋ ತಿಳಿದುಕೊಳ್ಳುವುದು ಹೇಗೆ?

ಶಾರುಕ್  ಅಭಿನಯದ 'ಜವಾನ್' ಚಿತ್ರದ ಕುರಿತು ಒಂದೊಮ್ಮೆ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ, ಕೆಳಭಾಗದಲ್ಲಿ ನಿಮಗೆ ಒಂದು ವಾಕಿ ಟಾಕಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ಕಿಸಿದಾಗ ಸ್ಕ್ರೀನ್ ಮೇಲೆ ಚಿತ್ರದಲ್ಲಿನ ಆಕ್ಷನ್ ಪ್ರದರ್ಶಿಸುವ ಒಂದು ಸಂಕೇತ ಕಾಣಿಸುತ್ತದೆ. ಒಂದು ವೇಳೆ ನೀವು ಜವಾನ್ ಚಿತ್ರದ ಪ್ರೋಮೊ ಅನ್ನು ವಿಕ್ಷೀಸಿದ್ದರೆ, ಸ್ಕ್ರೀನ್ ತುಂಬಾ ಕಾಣಿಸಿಕೊಳ್ಳುವ ಪಟ್ಟಿ-ಪಟ್ಟಿ ವಿನ್ಯಾಸಗಳು ಯಾವುದರ ಕಡೆಗೆ ಸಂಕೇತಿಸುತ್ತಿವೆ ಎಂಬುದು ನಿಮಗೆ ಗೊತ್ತಾಗಲಿದೆ. 

ಇದನ್ನೂ ಓದಿ-General Knowledge: ಆರ್ ಓನಿಂದ ಹೊರಬರುವ ನೀರಿನಿಂದ ಸ್ನಾನ ಮಾಡಬಹುದೇ?

ಗೂಗಲ್ ನಲ್ಲಿ ಜವಾನ್ ಟೈಪ್ ಮಾಡಿದರೆ, ಸಿಗುತ್ತೆ ವಾಕಿ ಟಾಕಿ
ಒಂದೆಡೆ ಶಾರುಕ್ ಅಭಿಮಾನಿಗಳು ಈಗಾಗಲೇ ಈ ಚಿತ್ರದ ಕುರಿತು ತುಂಬಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ. ಇನ್ನೊಂದೆಡೆ ಗೂಗಲ್ ನೀಡಿದ ಈ ಕೊಡುಗೆಯ ಬಳಿಕ ಗೂಗಲ್ ನಲ್ಲಿ ಜವಾನ್ ಹುಡುಕಾಟಕ್ಕೆ ಜನರು ಭಾರಿ ಪ್ರಮಾಣದಲ್ಲಿ ಮುಗಿಬಿದ್ದಿರುವುದು ನಿಮಗೆ ಕಂಡುಬರಲಿದೆ. ಈ ದೃಶ್ಯ ನಿಮಗೆ ಚಿತ್ರದ ರೋಮಾಂಚನ ಹಾಗೂ ಆಕ್ಷನ್ ನಿಂದ ಕೂಡಿದ ಸಿನೆಮ್ಯಾಟಿಕ್ ಅನುಭವವನ್ನು ನೀಡುತ್ತದೆ. ವಾಕಿ ಟಾಕಿಯ ಈ ಇಂಟರ್ ಆಕ್ಟಿವ್ ವೈಶಿಷ್ಟ್ಯ ಜವಾನ್ ಪ್ರೇಕ್ಷಕರು ಹಾಗೂ ಶಾರುಕ್ ಅಭಿಮಾನಿಗಳನ್ನು ಮತ್ತಷ್ಟು ಹುರಿದುಂಬಿಸುವಂತಿದೆ. ಗೂಗಲ್ ನ ಈ ಅದ್ಭುತ ವೈಶಿಷ್ಟ್ಯದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮಾಡಿಕೊಳ್ಳುವ ಮೂಲಕ ಹಂಚಿಕೊಳ್ಳಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News