ಪೊಲೀಸ್‌ ಕಾರಿನ ಮೇಲೆ ಮಹಿಳೆಯ ರೀಲ್ಸ್: ಕಾರು ಕೊಟ್ಟ ಅಧಿಕಾರಿ ಗತಿ ಏನಾಯ್ತು ಗೊತ್ತಾ?

Reel on Police car: ಎಲ್ಲ ಕಡೆಗಳಲ್ಲಿಯೂ ರೀಲ್ಸಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವರ ಚೇಷ್ಟೆಗಳಿಗೆ ಮಿತಿಯೇ ಇಲ್ಲದಂತಾಗಿದೆ. ಇದೀಗ ಓರ್ವ ಮಹಿಳೆ ಪೊಲೀಸ್‌ ಕಾರಿನ ಮೇಲೆಯೇ ಕುಳಿತು ರೀಲ್ಸ್‌ ಮಾಡಿ ಅಧಿಕಾರಿಗೆ ಆಪತ್ತು ತಂದಿಟ್ಟಿದ್ದಾಳೆ.   

Written by - Savita M B | Last Updated : Oct 1, 2023, 09:05 AM IST
  • ಪಂಜಾಬ್‌ನಲ್ಲಿ ರೀಲ್ಸ್‌ ಮಾಡುವ ಯುವತಿಯೊಬ್ಬಳು
  • ಪೊಲೀಸ್‌ ಕಾರ್‌ ಮೇಲೆ ಕುಳಿತು ರೀಲ್ಸ್‌ ಮಾಡಿದ್ದಾಳೆ
  • ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
ಪೊಲೀಸ್‌ ಕಾರಿನ ಮೇಲೆ ಮಹಿಳೆಯ ರೀಲ್ಸ್: ಕಾರು ಕೊಟ್ಟ ಅಧಿಕಾರಿ ಗತಿ ಏನಾಯ್ತು ಗೊತ್ತಾ? title=

Viral reel on Police car: ಸೋಷಿಯಲ್‌ ಮಿಡಿಯಾ ಎಲ್ಲರನ್ನು ಹುಚ್ಚರನ್ನಾಗುವಂತೆ ಮಾಡಿದೆ. ಯುವ ಜನರು ಎಷ್ಟು ಎಡೀಕ್ಟ್‌ ಆಗಿದ್ದಾರೆ ಎಂದರೇ ಒಂದು ನಿಮಿಷವೂ ಬಿಟ್ಟು ಇರಲಾಗದಷ್ಟು. ಕೆಲವರಂತೂ ಲೈಕ್‌ ಕಾಮೆಂಟ್‌ಗಳ ಸಲುವಾಗಿ ಬಟ್ಟೆ ಬಿಚ್ಚಿ ಕುಣಿಯುತ್ತಿದ್ದಾರೆ. ಇವರೆಲ್ಲರ ಹುಚ್ಚಾಟಕ್ಕೆ ಎಣೆಯೇ ಇಲ್ಲದಂತಾಗಿದೆ. 

ಹಾಗೆಯೇ ಪಂಜಾಬ್‌ನಲ್ಲಿ ರೀಲ್ಸ್‌ ಮಾಡುವ ಯುವತಿಯೊಬ್ಬಳು ಪೊಲೀಸ್‌ ಕಾರ್‌ ಮೇಲೆ ಕುಳಿತು ರೀಲ್ಸ್‌ ಮಾಡಿದ್ದಾಳೆ. ಹೌದು ಪಾಯಲ್‌ ಪರಮ್‌ ಎಂಬ ಮಹಿಳೆ ರೀಲ್ಸ್‌ಗಾಗಿ ಪೊಲೀಸ್‌ ಅಧಿಕಾರಿಯ ವಾಹನವನ್ನೇ ಬಳಸಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ-Watch: ಈಶ್ಯಾನ್ಯ ರಾಜ್ಯದ ಮಹಿಳೆಯ ಮೇಲೆ ಸ್ಪಾ ಸೆಂಟರ್ ಮಾಲೀಕನ ಹಲ್ಲೆ 

ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ  ಪೊಲೀಸ್‌ ವಾಹವನ್ನು ರೀಲ್ಸ್‌ ಮಾಡಲು ನೀಡಿದ್ದ ಜಲಂಧರ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನು ಅಮಾನತುಮಾಡಲಾಗಿದೆ ಎಂದು ವರದಿ ಮಾಡಲಾಗಿದೆ. 

ವೈರಲ್‌ ವಿಡಿಯೋದಲ್ಲಿ ಪೊಲೀಸ್‌ ವಾಹನವನ್ನು ಬಳಸಿಕೊಂಡ ಮಹಿಳೆ ಅದರ ಮುಂಬಾಗದ ಮೇಲೆ ಕುಳಿತುಕೊಂಡು ಭರ್ಜರಿ ಡ್ಯಾನ್ಸ್‌ ಮಾಡಿದ್ದಾಳೆ. ಅದೇ ವೇಳೆ ಆಕ್ಷೇಪಾರ್ಹ ಕೈಸನ್ನೆ ಮಾಡಿದ್ದಾಳೆ. ಇದಲ್ಲದೇ ಕೊನೆಯಲ್ಲಿ ಒಬ್ಬ ಪೊಲೀಸ್‌ ಅಧಿಕಾರಿಯೂ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ-MS Swaminathan: ಭಾರತದ ‘ಹಸಿರು ಕ್ರಾಂತಿ’ಯ ಪಿತಾಮಹ ಎಂ.ಎಸ್.ಸ್ವಾಮಿನಾಥನ್ ವಿಧಿವಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News