Peacocks Pradakshine To Goddess Saraswati Video: ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಒಂದಿಲ್ಲೊಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ನಾಟ್ಯ ಮಯೂರಿ ಖ್ಯಾತಿಯ ನವಿಲುಗಳು ವಿದ್ಯಾ ದೇವತೆಗೆ ಸರಸ್ವತಿಗೆ ಪ್ರದಕ್ಷಿಣೆ ಹಾಕುವ ವಿಡಿಯೋವೊಂದು ಸಖತ್ ಸದ್ದು ಮಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ನವಿಲುಗಳ ವಿಡಿಯೋವೊಂದು ವೈರಲ್ (Peacocks Viral Video) ಆಗುತ್ತಿದ್ದು, ಇದರಲ್ಲಿ ಮೂರು ನವಿಲುಗಳು ಒಂದರ ಹಿಂದೆ ಒಂದರಂತೆ ತಾಯಿ ಸರಸ್ವತಿಯ ಮೂರ್ತಿಗೆ ಪ್ರದಕ್ಷಿಣೆ ಹಾಕುತ್ತಿವೆ.
ಇದನ್ನೂ ಓದಿ- ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ
ವಾಸ್ತವವಾಗಿ, ನವಿಲುಗಳ ನೃತ್ಯವನ್ನು (Peacock Dance) ನೋಡುವುದೇ ಒಂದು ಆನಂದ. ಹಾಗಾಗಿ, ನವಿಲುಗಳಿಗೆ "ನಾಟ್ಯ ಮಯೂರಿ" ಎಂತಲೇ ಕರೆಯಲಾಗುತ್ತದೆ. ಮಕ್ಕಳು ಓದುವಾಗ ತಾಯಿ ಸರಸ್ವತಿಗೆ ನಮಸ್ಕರಿಸಿ ಓದಲು ಕೂರುವಂತೆ ಹಿರಿಯರು ಹೇಳುತ್ತಾರೆ. ಇದರಿಂದ ವಿದ್ಯೆ ಚೆನ್ನಾಗಿ ತಲೆಗೆ ಹತ್ತುತ್ತದೆ ಎಂಬ ನಂಬಿಕೆಯಿದೆ. ಬಹುಶಃ ಈ ನವಿಲುಗಳು ನೃತ್ಯಾಭ್ಯಾಸಕ್ಕೆ ತೆರಳುವ ಮೊದಲು ಸರಸ್ವತಿಗೆ ನಮಸ್ಕರಿಸುತ್ತಿರಬಹುದು ಎಂದು ನಿಮಗೂ ಅನಿಸಬಹುದು.
ಇದನ್ನೂ ಓದಿ- Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!
ಸನಾತನದ ಶಕ್ತಿ! ಸುಂದರವಾದ ಮತ್ತು ಮೋಡಿ ಮಾಡುವ ನೋಟ ಎಂಬ ಶೀರ್ಷಿಕೆಯಡಿ ಮೂರು ವರ್ಷಗಳ ಹಿಂದೆ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
Such a beautiful and enchanting View .The power of Sanatana.
Peacock doing Parikrama of Mata Saraswati. pic.twitter.com/BzvqYrtAsY
— Itishree (@Itishree001) January 4, 2021
ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಕೆಲವು ಸಾಮಾಜಿಕ ಬಳಕೆದಾರರು ಇದನ್ನು ಜರ್ಮನಿಯ ಶ್ರೀ ಪೀಠ ನಿಲಯ ಆಶ್ರಮದ ವಿಡಿಯೋ ಎಂದು ಊಹಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.