MP Election 2023: ಮತದಾನ ಮಾಡಿದವರಿಗೆ ಈ ರಾಜ್ಯದಲ್ಲಿ ಸಿಗಲಿದೆ ಉಚಿತ ಅವಲಕ್ಕಿ, ಜಿಲೇಬಿ!

MP Election 2023: ಪ್ರಸ್ತುತ ವಿಧಾನಸಭಾ ಚುನಾವಣೆಯ ಕುರಿತು ಮಾತನಾಡುವುದಾದರೆ, ನಗರದ ಈ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 15.55 ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಲು ಮತದಾನದ ದಿನಾಂಕಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Written by - Puttaraj K Alur | Last Updated : Oct 14, 2023, 05:17 PM IST
  • ದೇಶದ ಅತ್ಯಂತ ಸ್ವಚ್ಛ ನಗರವಾದ ಇಂದೋರ್‌ನ ಪ್ರಸಿದ್ಧ ಚಾಟ್-ಚೌಪಾಟಿ '56 ಶಾಪ್'ನಿಂದ ವಿಶೇಷ ಆಫರ್
  • ನ.17ರಂದು ಮತದಾನ ಮಾಡುವ ಜನರಿಗೆ ಉಚಿತ ಉಪಹಾರವಾಗಿ ಅವಲಕ್ಕಿ-ಜಿಲೇಬಿ
  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಉತ್ತೇಜಿಸಲು ವಿಶೇಷ ಆಫರ್ ಘೋಷಣೆ
MP Election 2023: ಮತದಾನ ಮಾಡಿದವರಿಗೆ ಈ ರಾಜ್ಯದಲ್ಲಿ ಸಿಗಲಿದೆ ಉಚಿತ ಅವಲಕ್ಕಿ, ಜಿಲೇಬಿ! title=
MP Election 2023

ಮಧ್ಯಪ್ರದೇಶ: ದೇಶದ ಅತ್ಯಂತ ಸ್ವಚ್ಛ ನಗರವಾದ ಇಂದೋರ್‌ನ ಪ್ರಸಿದ್ಧ ಚಾಟ್-ಚೌಪಾಟಿ '56 ಶಾಪ್'ನ ಅಂಗಡಿಯ ಮಾಲೀಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನವನ್ನು ಉತ್ತೇಜಿಸಲು ವಿಶೇಷ ಆಫರ್ ಘೋಷಿಸಿದ್ದಾರೆ. ಮತದಾನದ ದಿನದಂದು ಅಂದರೆ ನ.17ರಂದು ಮತದಾನ ಮಾಡುವ ಪ್ರತಿಯೊಬ್ಬರಿಗೂ ಈ ಚಾಟ್-ಚೌಪಾಟಿಯಲ್ಲಿ ಉಚಿತ ಅವಲಕ್ಕಿ-ಜಿಲೇಬಿಯ ಉಚಿತ ಉಪಹಾರ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಮತದಾನದ ವೇಳೆ ಬೆರಳಿಗೆ ಹಚ್ಚುವ ಶಾಯಿಯನ್ನು ತೋರಿಸುವ ಜನರು ಈ ಲಾಭ ಪಡೆದುಕೊಳ್ಳಬಹುದು.

‘56 ಶಾಪ್ ಟ್ರೇಡರ್ಸ್ ಅಸೋಸಿಯೇಷನ್’ನಿಂದ ವಿಶೇಷ ಕ್ರಮ: '56 ಶಾಪ್ ಟ್ರೇಡರ್ಸ್ ಅಸೋಸಿಯೇಷನ್' ಅಧ್ಯಕ್ಷ ಗುಂಜನ್ ಶರ್ಮಾ ಮಾತನಾಡಿ, ‘ಶುಚಿತ್ವದ ವಿಷಯದಲ್ಲಿ ಇಂದೋರ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮತದಾನದ ವಿಷಯದಲ್ಲಿಯೂ ನಮ್ಮ ನಗರವು ಅಗ್ರಸ್ಥಾನದಲ್ಲಿ ಉಳಿಯಬೇಕೆಂದು ನಾವು ಬಯಸುತ್ತೇವೆ. ಇದಕ್ಕಾಗಿ ಮತದಾನ ಮಾಡಲು ಬರುವ ಮತದಾರರಿಗೆ ಉಚಿತವಾಗಿ ಅವಲಕ್ಕಿ-ಜಿಲೇಬಿ ನೀಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂದುವರಿದ ಇಸ್ರೇಲ್ - ಹಮಾಸ್ ಯುದ್ಧ: ಏಳನೇ ದಿನದ ಬೆಳವಣಿಗೆಗಳು

ಶೇ.10ರಷ್ಟು ವಿಶೇಷ ರಿಯಾಯಿತಿ: '56 ಶಾಪ್' ಚಾಟ್-ಚೌಪಾಟಿಯಲ್ಲಿ ಮತದಾರರಿಗೆ ಉಚಿತ ಅವಲಕ್ಕಿ-ಜಿಲೇಬಿ ಕೊಡುಗೆ ನವೆಂಬರ್ 17ರಂದು ಬೆಳಗ್ಗೆ 9ರವರೆಗೆ ಇರುತ್ತದೆ. ಇದರ ನಂತರ ಪ್ರತಿ ಮತದಾರರಿಗೆ ಅವಲಕ್ಕಿ ಮತ್ತು ಜಿಲೇಬಿ ಬೆಲೆಯಲ್ಲಿ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಶರ್ಮಾ ಹೇಳಿದ್ದಾರೆ. ಭಾರತದ ಆಹಾರ ಸುರಕ್ಷತಾ ನಿಯಂತ್ರಕ (FSSAI) ಸಂಬಂಧಿತ ನಿಯಮಗಳನ್ನು ಪಾಲಿಸಿದ ಕಾರಣ '56 ಶಾಪ್' ಗೆ 'ಕ್ಲೀನ್ ಸ್ಟ್ರೀಟ್ ಫುಡ್ ಹಬ್' ಸ್ಥಾನಮಾನ ನೀಡಿದೆ. ಈ ಚಾಟ್-ಚೌಪಾಟಿಯಲ್ಲಿ ಯಾವಾಗಲೂ ರುಚಿ ಪ್ರಿಯರ ಕೂಟವಿರುತ್ತದೆ ಮತ್ತು ವಾರಾಂತ್ಯದಲ್ಲಿ ಇಲ್ಲಿ ಭಾರೀ ಜನಸಂದಣಿ ಇರುತ್ತದೆ.

ಸಿಹಿ-ಖಾರಾ ಜೊತೆಗೆ ಚುನಾವಣಾ ವಿಷಯಗಳ ಚರ್ಚೆ: ವಿಧಾನಸಭಾ ಚುನಾವಣೆಯ ಸಂಭ್ರಮ ದಿನದಿಂದ ದಿನಕ್ಕೆ ರಂಗೇರುತ್ತಿರುವ ಈ ದಿನಗಳಲ್ಲಿ ರುಚಿಕರ ತಿನಿಸುಗಳ ಜೊತೆಗೆ ಚುನಾವಣಾ ವಿಷಯಗಳ ಚರ್ಚೆಯೂ "56 ಶಾಪ್"ನಲ್ಲಿ ನಡೆಯುತ್ತಿದೆ. ‘56 ಶಾಪ್’ ತಲುಪಿದ ಬಹುತೇಕ ಸ್ಥಳೀಯ ಮತದಾರರು ನಗರದ ಕಳಪೆ ಸಂಚಾರ ವ್ಯವಸ್ಥೆಯನ್ನು ವರ್ಷಗಳಿಂದ ಸುಧಾರಿಸುವುದು ಬಹಳ ಮುಖ್ಯ. ರಾಜ್ಯದ ಮುಂದಿನ ಸರ್ಕಾರ ಇದಕ್ಕಾಗಿ ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮುಂದಿನ 2 ದಿನ ಈ ಭಾಗಗಳಲ್ಲಿ ಕುಂಭದ್ರೋಣ ಮಳೆ! ಗುಡುಗು-ಮಿಂಚು ಜೊತೆ ಸುಳಿಗಾಳಿ ಬೀಸುವ ಮುನ್ಸೂಚನೆ

ಇಂದೋರ್ ಜನರ ಬೇಡಿಕೆ: ಯುವ ಮತದಾರ ಅಂಕಿತ್ ಯಾದವ್ ಮಾತನಾಡಿ, 'ಇಂದೋರ್‍ನಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಬೇಕು. ಅನೇಕ ಜನರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಾರೆ, ವಿಶೇಷವಾಗಿ ಛೇದಕಗಳಲ್ಲಿ. ಇದರಿಂದಾಗಿ ಮಾರಣಾಂತಿಕ ಅಪಘಾತಗಳ ಅಪಾಯವಿದೆ. 2018ರಲ್ಲಿ ನಡೆದ ಕೊನೆಯ ವಿಧಾನಸಭಾ ಚುನಾವಣೆಯಲ್ಲಿ ಇಂದೋರ್‌ನ ನಗರ ಪ್ರದೇಶದ 5 ಸ್ಥಾನಗಳಲ್ಲಿ ಒಟ್ಟು 14.72 ಲಕ್ಷ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು ಮತ್ತು ಸರಾಸರಿ ಶೇ.67ರಷ್ಟು ಮತದಾನವಾಗಿತ್ತು. ಪ್ರಸ್ತುತ ವಿಧಾನಸಭಾ ಚುನಾವಣೆ ಕುರಿತು ಮಾತನಾಡುವುದಾದರೆ, ನಗರದ ಈ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 15.55 ಲಕ್ಷ ಜನರು ತಮ್ಮ ಹಕ್ಕು ಚಲಾಯಿಸಲು ಮತದಾನದ ದಿನಾಂಕಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News