Most Expensive Sheep : ಈ ಕುರಿಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ! ಬರೋಬ್ಬರಿ ₹2 ಕೋಟಿ

ಇದನ್ನ ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್‌ನ ನಾಲ್ಕು ಸೇರಿ ಈ ಕುರಿಯನ್ನ 2 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. ಹಾಗಿದ್ರೆ, ಈ ಕುರಿಯ ವಿಶೇಷತೆ ಏನು? ಇದಕ್ಕೆ ಯಾಕೆ ಎಷ್ಟು ಬೆಲೆ? ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Oct 4, 2022, 10:29 AM IST
  • ಈ ಒಂದು ಕುರಿಯ ಬೆಲೆ 2 ಕೋಟಿ ರೂ.
  • ಆಸ್ಟ್ರೇಲಿಯಾದಲ್ಲಿ ನಡೆದಿರುವ ಪ್ರಕರಣ
  • ಈ ಕುರಿಯ ತಳಿ ತುಂಬಾ ವಿಶೇಷ ತಳಿಯಾಗಿದೆ
Most Expensive Sheep : ಈ ಕುರಿಯ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತಿರಾ! ಬರೋಬ್ಬರಿ ₹2 ಕೋಟಿ title=

Most Expensive Sheep in World : ಪ್ರಾಣಿಗಳ ಖರೀದಿ ಮತ್ತು ಮಾರಾಟದ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು, ಆದರೆ ಇಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದು ಒಂದು ಕುರಿಯ ಬೆಲೆಯ ಬಗ್ಗೆ, ನೀವು ನಂಬಿದರು ಅಷ್ಟೆ, ಬಿಟ್ಟರು ಅಷ್ಟೆ. ಈ ಒಂದು ಕುರಿಯ ಬೆಲೆ  2 ಕೋಟಿ ರೂ. ಆಸ್ಟ್ರೇಲಿಯಾದಲ್ಲಿ ನಡೆದಿರುವ ಪ್ರಕರಣವಾಗಿದೆ. ಇದನ್ನ ಎಲೈಟ್ ಆಸ್ಟ್ರೇಲಿಯನ್ ವೈಟ್ ಸಿಂಡಿಕೇಟ್‌ನ ನಾಲ್ಕು ಸೇರಿ ಈ ಕುರಿಯನ್ನ 2 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ. ಹಾಗಿದ್ರೆ, ಈ ಕುರಿಯ ವಿಶೇಷತೆ ಏನು? ಇದಕ್ಕೆ ಯಾಕೆ ಎಷ್ಟು ಬೆಲೆ? ಇಲ್ಲಿದೆ ನೋಡಿ..

ಈ ಕುರಿಯ ವಿಶೇಷತೆ ಏನು?

ಆಸ್ಟ್ರೇಲಿಯನ್ ವೈಟ್ ಶೀಪ್ ಕುರಿಯ ತಳಿ ತುಂಬಾ ವಿಶೇಷ ತಳಿಯಾಗಿದೆ , ಇದಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಏಕೆಂದರೆ ಅದರಲ್ಲಿ ದಪ್ಪ ತುಪ್ಪಳವು(ಉಣ್ಣೆ) ಕಡಿಮೆ ಪ್ರಮಾಣದಲ್ಲಿ ಕಂಡುಬರುತ್ತದೆ. ಕಳೆದ ಕೆಲ  ವರ್ಷಗಳಿಂದ, ಕುರಿಗಳಿಂದ ಉಣ್ಣೆ ತೆಗೆಯುವ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಉಣ್ಣೆ ತೆಗೆಯುವ ಪ್ರಕ್ರಿಯೆಯು ತುಂಬಾ ದುಬಾರಿಯಾಗಿದೆ. ಈ ನಿರ್ದಿಷ್ಟ ತಳಿಯ ಕುರಿಗಳನ್ನು ಮಾಂಸಕ್ಕಾಗಿ ಬಳಸಲಾಗುತ್ತದೆ.

ಇದನ್ನೂ ಓದಿ : ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನಿಂದ ಪ್ರೇಮ ನಿವೇದನೆ: ಆದ್ರೆ ಹುಡುಗಿ ಮಾಡಿದ್ದೇನು ಗೊತ್ತಾ? ಶಾಕ್ ಆಗ್ತೀರ

ಈ ಹಿಂದಿನ ವಿಶ್ವ ದಾಖಲೆ ಮುರಿದ ಕುರಿ

ಆಸ್ಟ್ರೇಲಿಯಾದ ಸೆಂಟ್ರಲ್ ನ್ಯೂ ಸೌತ್ ಸೇಲ್ ನಲ್ಲಿ ಮಾರಾಟವಾದ ಈ ಕುರಿ ಕಳೆದ ವರ್ಷದ ದಾಖಲೆಯನ್ನು ಮುರಿದಿದೆ. 2021ರಲ್ಲಿ ಒಂದು ಕುರಿಯನ್ನು ಸುಮಾರು 1.35 ಕೋಟಿ ರೂ.ಗೆ ಮಾರಾಟ ಮಾಡಿರುವುದು ಗಮನಾರ್ಹ. ಈ ಅಂಕಿಅಂಶಗಳನ್ನು ನೋಡುವುದಾದರೆ, ಆಸ್ಟ್ರೇಲಿಯಾದಲ್ಲಿ ಕುರಿ ಸಾಕಾಣಿಕೆ ವ್ಯವಹಾರವು ಯಾವ ಎತ್ತರದಲ್ಲಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಸಿಂಡಿಕೇಟ್ ಸದಸ್ಯರೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ತಮ್ಮ ದೇಹದಲ್ಲಿ ಕಡಿಮೆ ಉಣ್ಣೆ/ಕೂದಲು ಹೊಂದಿರುವ ಕುರಿಗಳಿಗೆ ಆಸ್ಟ್ರೇಲಿಯಾದಲ್ಲಿ ಭಾರಿ ಬೇಡಿಕೆ ಇದೆ. 

ಈ ಬಗ್ಗೆ ಸಿಂಡಿಕೇಟ್ ಸದಸ್ಯರೊಬ್ಬರು ಮಾತನಾಡಿ, ಈ ಕುರಿಗಳ ನಿರ್ವಹಣೆ ತುಂಬಾ ಸುಲಭವಾಗಿದ್ದು, ಇತರೆ ಕುರಿಗಳಿಗಿಂತ ಇವುಗಳ ಬೆಳವಣಿಗೆ ಉತ್ತಮವಾಗಿದೆ. ಗಿಲ್ಮೋರ್‌ನ ಈ ಕುರಿಯ ತಳಿಶಾಸ್ತ್ರವನ್ನು ಬಳಸುವುದರಿಂದ ಇತರ ಕುರಿ ತಳಿಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Ian Hurricane Update: ಅಮೆರಿಕಾದಲ್ಲಿ 'ಇಯಾನ್ ಚಂಡಮಾರುತದ' ರೌದ್ರ ನರ್ತನ, ಇದುವೆರೆಗೆ 70ಕ್ಕೂ ಅಧಿಕ ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News