Video : ಎನ್ ಕೌಂಟರ್ ಮುನ್ನ ಸೇನಾಧಿಕಾರಿಯಿಂದ ಉಗ್ರನಿಗೆ ವಿಡಿಯೋ ಕಾಲ್!

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಹ್ವಾಟೂ ಗ್ರಾಮದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. 

Written by - Channabasava A Kashinakunti | Last Updated : Oct 1, 2022, 04:30 PM IST
  • ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆ
  • ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌
  • ಸೇನಾ ಅಧಿಕಾರಿಯೊಬ್ಬರು ವಿಡಿಯೋ ಕಾಲ್ ಸಖತ್ ವೈರಲ್
Video : ಎನ್ ಕೌಂಟರ್ ಮುನ್ನ ಸೇನಾಧಿಕಾರಿಯಿಂದ ಉಗ್ರನಿಗೆ ವಿಡಿಯೋ ಕಾಲ್! title=

Kulgam Encounter : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಹ್ವಾಟೂ ಗ್ರಾಮದಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. 

ಆದ್ರೆ, ಈ ಎನ್‌ಕೌಂಟರ್‌ಗೆ ಕೆಲವೇ ಕ್ಷಣಗಳ ಮೊದಲು ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಸದಸ್ಯ ಮೊಹಮ್ಮದ್ ಶಫಿ ಗನೈ ಜೊತೆ ಭಾರತೀಯ ಸೇನಾ ಅಧಿಕಾರಿಯೊಬ್ಬರು ಇವನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ : Shashi Tharoor : ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ತರೂರ್ ಮನವೊಲಿಸಿದವರು ಯಾರು? ರಹಸ್ಯ ಬಿಚ್ಚಿಟ್ಟ ಶಶಿ

ಕುಲ್ಗಾಮ್‌ನ ಅಹ್ವಾಟೂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿದ್ದವು. ಕಾರ್ಯಾಚರಣೆಯ ಸಮಯದಲ್ಲಿ, ಭಾರತೀಯ ಸೇನೆಯ ಅಧಿಕಾರಿಯೊಬ್ಬರು ಗನೈಗೆ ಶರಣಾಗುವಂತೆ ಕೇಳಲು ವೀಡಿಯೊ ಕಾಲ್ ಮಾಡಿದರು, ಆದರೆ ಜೈಶ್ ಭಯೋತ್ಪಾದಕ ನಿರಾಕರಿಸಿದ. 

ವಿಡಿಯೋ ಕಾಲ್ ನಲ್ಲಿ  ಜೆಎಂ ಭಯೋತ್ಪಾದಕ "ನಾನು ಪ್ರಮಾಣ ಮಾಡುತ್ತೇನೆ, ಸೇನೆಯು ಕಾಶ್ಮೀರವನ್ನು ಹೇಗೆ ಬೆಂಬಲಿಸುತ್ತದೆ, ಕಾಶ್ಮೀರವೂ ಸೈನ್ಯವನ್ನು ಬೆಂಬಲಿಸುತ್ತದೆ" ಎಂದು ಗೊತ್ತು. 

ನಂತರ ಮಾತನಾಡಿದ ಭಾರತೀಯ ಸೇನಾ ಅಧಿಕಾರಿ "ಖಂಡಿತ. ನಾನು ಸೈನ್ಯದಿಂದ ಬಂದವನು, ಸ್ನೇಹಿತ. ನಾನು ನಿಮ್ಮನ್ನು ಶರಣಾಗಲು ಕೇಳುತ್ತಿದ್ದೇನೆ," ಎನ್ನುತ್ತಾರೆ, ಅದಕ್ಕೆ ಭಯೋತ್ಪಾದಕ, "ಸರ್, ನಾನು ಈಗಾಗಲೇ ಸಾವಿನ ಸಮೀಪದಲ್ಲಿದ್ದೇನೆ. ನೀವು ನನ್ನನ್ನು ಮೂರು ಬಾರಿ ಶೂಟ್ ಮಾಡುತ್ತೀರಿ. ನೀವು ಬಹುಶಃ ಒಂದು ರೋಲ್ ಖಾಲಿ ಮಾಡುತ್ತೀರಿ."

ಇದಕ್ಕೆ ಸೇನಾ ಅಧಿಕಾರಿ, "ಇಲ್ಲ, ಸ್ನೇಹಿತ, ನಾವು ಹಾಗೆ ಮಾಡುವುದಿಲ್ಲ". ಸಂಭಾಷಣೆ ಕೊನೆಗೊಳ್ಳುತ್ತದೆ. ನಂತರ, ಇಬ್ಬರು ಭಯೋತ್ಪಾದಕರು - ಕುಲ್ಗಾಮ್‌ನ ಬಟ್‌ಪೋರಾದ ಮೊಹಮ್ಮದ್ ಶಫಿ ಗನೈ ಮತ್ತು ಕುಲ್ಗಾಮ್‌ನ ಟಾಕಿಯಾದ ಮೊಹಮ್ಮದ್ ಆಸಿಫ್ ವಾನಿ, ಭದ್ರತೆಯೊಂದಿಗೆ ಎನ್‌ಕೌಂಟರ್‌ನಲ್ಲಿ ಮೃತರಾಗುತ್ತಾರೆ.

ಇದನ್ನೂ ಓದಿ : Congress President Election: ಖರ್ಗೆ-ತರೂರ್ ಮಧ್ಯೆ ನೇರ ಹಣಾಹಣಿ, ತ್ರಿಪಾಠಿ ನಾಮಪತ್ರ ರದ್ದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News