Viral Video: ಡೇ ಕೇರ್‌ನಲ್ಲಿ ಮಗು ಮೇಲೆ ಮತ್ತೊಂದು ಮಗುನಿಂದ ಹಲ್ಲೆ! ಪೋಷಕರೇ ಈ ವಿಡಿಯೋ ನೋಡಿ

Viral Video In Bengaluru: ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಈ ‘ಅಮಾನವೀಯ’ ಕೃತ್ಯ ನಡೆದಿದೆ ಎಂದು ನೆಟಿಜನ್‌ಗಳಿಂದ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

Written by - Puttaraj K Alur | Last Updated : Jun 23, 2023, 04:05 PM IST
  • ಬೆಂಗಳೂರಿನ ಡೇ ಕೇರ್‍ನಲ್ಲಿ ಹೆಣ್ಣು ಮಗುವಿನ ಮೇಲೆ ಮತ್ತೊಂದು ಮಗುವಿನಿಂದ ಹಲ್ಲೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
  • ಡೇ ಕೇರ್ ಸೆಂಟರ್‍ ಆಡಳಿತ ಮಂಡಳಿ ವಿರುದ್ಧ ನೆಟಿಜನ್‍ಗಳ ಆಕ್ರೋಶ
Viral Video: ಡೇ ಕೇರ್‌ನಲ್ಲಿ ಮಗು ಮೇಲೆ ಮತ್ತೊಂದು ಮಗುನಿಂದ ಹಲ್ಲೆ! ಪೋಷಕರೇ ಈ ವಿಡಿಯೋ ನೋಡಿ title=
ಮಗುವಿನ ಮೇಲೆ ಮತ್ತೊಂದು ಮಗುವಿನಿಂದ ಹಲ್ಲೆ!

ಬೆಂಗಳೂರು: ಬೆಂಗಳೂರಿನ ಮಾಂಟೆಸ್ಸರಿ ಶಾಲೆಯೊಂದರಲ್ಲಿ 2 ವರ್ಷದ ಹೆಣ್ಣು ಮಗುವಿನ ಮೇಲೆ 3 ವರ್ಷದ ಮಗುವೊಂದು ಹಲ್ಲೆ ನಡೆಸಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೂನ್ 21ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಾಗ ಅಟೆಂಡೆಂಟ್ ಇತರ ಮಕ್ಕಳೊಂದಿಗೆ ಕೊಠಡಿಯಿಂದ ಹೊರಹೋಗುತ್ತಿದ್ದಂತೆಯೇ ಹೆಣ್ಣು ಮಗುವಿನ ಮೇಲೆ ಮತ್ತೊಂದು ಮಗು ಹಲ್ಲೆ ನಡೆಸಿದೆ. ಇದು ಅಲ್ಲಿನ ಸಿಸಿಟಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರಿನ ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದಲ್ಲಿರುವ ಟೆಂಡರ್ ಫೂಟ್ ಎಂಬ ಡೇ ಕೇರ್ ಸೆಂಟರ್‍ನಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆ ಬೆನ್ನಲ್ಲೇ ವಿಡಿಯೋ ವೈರಲ್ ಆಗಿದ್ದು, ಡೇ ಕೇರ್ ಸೆಂಟರ್‍ಗಳ ನಿರ್ಲಕ್ಷ್ಯದ ವಿರುದ್ಧ ಸೋಷಿಯಲ್ ಮೀಡಿಯಾ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಹೆಲ್ತ್ ಕಾರ್ಡ್’ಗೆ ಹೊಸ ರೂಪ ನೀಡಲು ಆರೋಗ್ಯ ಇಲಾಖೆ ಸಜ್ಜು

ಇಬ್ಬರು ಮಕ್ಕಳ ಕಿತ್ತಾಟ!

ವೈರಲ್ ಆಗಿರುವ ವಿಡಿಯೋದಲ್ಲಿ ಡೇ ಕೇರ್ ಸೆಂಟರ್‍ನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದು ಕೆಳಗೆ ಬಿಳಿಸಿದೆ. ಸುಮಾರು 4-5 ನಿಮಿಷ ಹೊಡೆದರೂ ಮಕ್ಕಳನ್ನು ನೋಡಿಕೊಳ್ಳಲು ಅಲ್ಲಿಗೆ ಯಾರು ಬಂದಿಲ್ಲ. ಕೆಲ ಸಮಯದವರೆಗೆ ಮಕ್ಕಳಷ್ಟೇ ಇದ್ದರೂ, ಅವರನ್ನು ನೋಡಿಕೊಳ್ಳುವ ಆಯಾ ಆಗಲಿ, ಡೇ ಕೇರ್‍ಗೆ ಸಂಬಂಧಿಸಿ ಯಾರೂ ಅಲ್ಲಿರಲಿಲ್ಲವೆಂದು ತಿಳಿದುಬಂದಿದೆ.

ಡೇ ಕೇರ್‍ನಲ್ಲಿ ಬರೀ ಮಕ್ಕಳನ್ನಷ್ಟೇ ಬಿಟ್ಟುಹೋದರೆ ಏನೂ ಬೇಕಾದರೂ ಆಗಬಹುದು. ಮಕ್ಕಳು ಜಗಳವಾಡಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಈ ಹಿನ್ನೆಲೆ ಡೇ ಕೇರ್ ಸೆಂಟರ್ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ಸಹ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಸುಬ್ರಹ್ಮಣ್ಯಪುರ ಠಾಣೆಗೆ ನಗರ ಪೊಲೀಸರು ಸೂಚಿಸಿದ್ದಾರೆ.

ಇದನ್ನೂ ಓದಿ: ಇನ್ನೊಂದು ವಾರದಲ್ಲಿ 3,500 ಪೊಲೀಸ್ ಕಾನ್‌ಸ್ಟೇಬಲ್‌ ನೇಮಕ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಶಾಲೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಈ ‘ಅಮಾನವೀಯ’ ಕೃತ್ಯ ನಡೆದಿದೆ ಎಂದು ನೆಟಿಜನ್‌ಗಳಿಂದ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ಕ್ಲಿಪ್ ವೈರಲ್ ಆಗುತ್ತಿದ್ದಂತೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಮಾಂಟೆಸ್ಸರಿ ಶಾಲೆಗೆ ಆಗಮಿಸಿ ತನಿಖೆ ನಡೆಸಿದೆ. ಈ ಬಗ್ಗೆ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲವೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News