Viral video : ಇನ್ನೇನು ಸಿಕ್ಕಿಯೇ ಬಿದ್ದ ಎನ್ನುವಷ್ಟರಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಕಿಲಾಡಿ

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಲು ಹೋದ ಪೊಲೀಸರಿಗೆ ವ್ಯಕ್ತಿ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಇನ್ನೇನು ಪೊಲೀಸರು ಹಿಡಿದೇ ಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡು ಬಿಟ್ಟಿದ್ದಾನೆ.   

Written by - Ranjitha R K | Last Updated : Jun 7, 2022, 04:05 PM IST
  • ಪೋಲೀಸರ ಕೈ ಜಾರಿದ ಯುವಕ
  • ಕೊನೆ ಕ್ಷಣದಲ್ಲಿ ತಪ್ಪಿಸಿಕೊಂಡ ವ್ಯಕ್ತಿ
  • ವೈರಲ್ ಆಯಿತು ವಿಡಿಯೋ
 Viral video : ಇನ್ನೇನು ಸಿಕ್ಕಿಯೇ ಬಿದ್ದ ಎನ್ನುವಷ್ಟರಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ ಕಿಲಾಡಿ  title=
viral news (photo instagram)

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ತರಹದ ವಿಡಿಯೋ ಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ಭಾವನಾತ್ಮಕವಾಗಿರುತ್ತವೆ. ಇನ್ನು ಕೆಲವು ವಿಡಿಯೋಗಳು ಮನ ಕಲಕುವಂತಿರುತ್ತವೆ. ಇನ್ನು ಕೆಲವು ವಿಡಿಯೋಗಳನ್ನು ನೋಡಿದರೆ ನಗು ನಿಲ್ಲುವುದೇ ಇಲ್ಲ. ಇದೀಗ ವಿಡಿಯೋವೊಂದು ವೈರಲ್ ಆಗಿದೆ, ಈ ವಿಡಿಯೋದಲ್ಲಿ ಹೆಲ್ಮೆಟ್ ಹಾಕದೆ, ಅಗತ್ಯ ದಾಖಲಾತಿ ಪತ್ರಗಳಿಲ್ಲದೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಪೋಲೀಸರಿಂದ ಯಾವ ರೀತಿ ತಪ್ಪಿಸಿಕೊಂಡ ಎನ್ನುವುದನ್ನು ಕಾಣಾಬಹುದು.

ಹೆಲ್ಮಟ್ ಇಲ್ಲದೆ ಬೈಕ್ ಓಡಿಸುತ್ತಿದ್ದ ವ್ಯಕ್ತಿಯ ಹಿಂದೆ ಪೊಲೀಸರು ಬಿದ್ದಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಹಿಡಿಯುವ ಸಲುವಾಗಿ ಹಿಂಬಾಲಿಸಿಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇನ್ನೇನು ಆ ವ್ಯಕ್ತಿ ಪೋಲಿಸರ ಕೈಗೆ ಸಿಕ್ಕಿಯೇ ಬಿದ್ದ ಎನ್ನುವ ಕ್ಷಣ ಕೂಡಾ ಬರುತ್ತದೆ. 

ಇದನ್ನೂ ಓದಿ : Viral Video: ಗನ್‌ ತೋರಿಸಿ ದರೋಡೆ ಮಾಡಿದ ಬಾಲಕ, ಭಯಾನಕ ದೃಶ್ಯ ವೈರಲ್‌

ವಾಸ್ತವವಾಗಿ ಈ ವ್ಯಕ್ತಿಯಿಂದ ದಂಡ ವಸೂಲಿ ಮಾಡುವ ಸಲುವಾಗಿ ಪೊಲೀಸರು ಈತನನ್ನು ನಿಲ್ಲುವಂತೆ ಸೂಚಿಸುತ್ತಾರೆ. ಆದರೆ ಆ ವ್ಯಕ್ತಿ ಬೈಕ್ ನೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಬಿಡಬೇಕಲ್ಲ,  ಹಿಂಬಾಲಿಸಿಕೊಂಡು ಬಂದಿದ್ದಾರೆ. ಇನ್ನೇನು ಪೋಲೀಸರ ಕೈಗೆ ಸಿಕ್ಕಿಯೇ ಬಿದ್ದ ಎಂದು ಕೊಳ್ಳಬೇಕು, ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿಯೋ ಏನೋ ಮತ್ತೆ ತಪ್ಪಿಸಿಕೊಳ್ಳುತ್ತಾನೆ.

 
 
 
 

 
 
 
 
 
 
 
 
 
 
 

A post shared by memes | comedy (@ghantaa)

 

 ವೈರಲ್ ವಿಡಿಯೋದಲ್ಲಿ ಜನರು ನೋಡುತ್ತಿರುವ ರೀತಿಯ ನೋಟವು ಸಾಕಷ್ಟು ಆಶ್ಚರ್ಯಕರವಾಗಿದೆ. ಘಂಟಾ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ : Viral video : ಚಿಟ್ಟೆಯನ್ನು ಕಂಡು ಮಕ್ಕಳಂತೆ ಕುಣಿದು ಕುಣಿದು ಹಿಂಬಾಲಿಸುತ್ತಿರುವ ಪೆಂಗ್ವಿನ್ ಗುಂಪು

 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Trending News