Shocking: ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿದ ವ್ಯಕ್ತಿ ಸಾವು..!

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಕುಟುಂಬಸ್ಥರು ಧರ್ಮೇಂದ್ರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

Written by - Puttaraj K Alur | Last Updated : Nov 12, 2022, 08:18 AM IST
  • ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ
  • ಕೈಗೆ ಆಗಿದ್ದ ನೋವು ಗುಣಪಡಿಸಲು ಯೂಟ್ಯೂಬ್‍ನಲ್ಲಿ ಹೆಲ್ತ್ ಟಿಪ್ಸ್ ಪಡೆದಿದ್ದ ಯುವಕ
  • ಸೋರೆಕಾಯಿ ಜ್ಯೂಸ್ ತಯಾರಿಸಿ ಸೇವಿಸಿದ ಯುವಕ ಸಾವನ್ನಪ್ಪಿದ್ದಾನೆ
Shocking: ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿದ ವ್ಯಕ್ತಿ ಸಾವು..! title=
ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ

ಇಂಧೋರ್‌: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಕೈಗೆ ಆಗಿದ್ದ ನೋವು ಗುಣಪಡಿಸಲು ಯುವಕನೊಬ್ಬ ಯೂಟ್ಯೂಬ್ ವಿಡಿಯೋ ನೋಡಿ ಜ್ಯೂಸ್ ಮಾಡಿ ಸೇವಿಸಿ ಸಾವನ್ನಪ್ಪಿದ್ದಾನೆ.

ಧರ್ಮೇಂದ್ರ ಎಂಬಾತನೇ ಸಾವನ್ನಪ್ಪಿದ ಯುವಕ. ಈತ ಯೂಟ್ಯೂಬ್‍ನಲ್ಲಿ ಸೋರೆಕಾಯಿ ರಸ ತಯಾರಿಸುವ ವಿಧಾನವನ್ನು ಕಲಿತು ಜ್ಯೂಸ್ ಮಾಡಿ ಕುಡಿದು ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಶೋ ರದ್ದು, ವೀರ್ ದಾಸ್ ಗೆ ಆಹ್ವಾನ ನೀಡಿದ ಟಿಎಂಸಿ

ತನಗಾಗಿದ್ದ ಕೈ ನೋವನ್ನು ಗುಣಪಡಿಸಲು ಧರ್ಮೇಂದ್ರ ಯೂಟ್ಯೂಬ್ ವಿಡಿಯೋವೊಂದರಲ್ಲಿ ಹೇಳಿದ್ದ ಸಲಹೆ ಮೇರೆಗೆ ಸೋರೆಕಾಯಿ ರಸವನ್ನು ತಯಾರಿಸಿದ್ದನಂತೆ. ಹೀಗೆ ತಯಾರಿಸಿದ್ದ ಸೋರೆಕಾಯಿ ರಸವನ್ನು ಕುಡಿದ ಸ್ವಲ್ಪ ಸಮಯದ ನಂತರ ಧರ್ಮೇಂದ್ರನ ಆರೋಗ್ಯವು ಇದ್ದಕ್ಕಿದ್ದಂತೆಯೇ ಹದಗೆಟ್ಟಿದೆ.  

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಕುಟುಂಬಸ್ಥರು ಧರ್ಮೇಂದ್ರನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆಂದು ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ - ಪವನ್‌ ಕಲ್ಯಾಣ ಭೇಟಿ : ಆಂಧ್ರದಲ್ಲಿ ಹುಟ್ಟುತ್ತಾ ಮೈತ್ರಿ ಸರ್ಕಾರ..!

ಧರ್ಮೇಂದ್ರನ ಕುಟುಂಬಸ್ಥರು ಪೊಲೀಸರಿಗೆ ನಡೆದಿರುವ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮೃತ ಧರ್ಮೇಂದ್ರನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಆತನ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೋಲಿಸರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News