ಜಿಂಕೆ ಮರಿಯನ್ನು ತನ್ನ ತೋಳಿನಲ್ಲಿರಿಸಿ ತಾಯಿ ಜಿಂಕೆಯನ್ನು ಸತಾಯಿಸುತ್ತಿರುವ ಲಂಗೂರ್ ವಿಡಿಯೋ ನೋಡಿ

ಈ  ಲಂಗೂರ್ ಕೋತಿ ಜಾತಿಗೆ ಸೇರಿದ ಈ ಪ್ರಾಣಿ. ಇದರ ಮುಖವೆಲ್ಲಾ ಕಪ್ಪಾಗಿದ್ದು, ಕಣ್ಣು ಮತ್ತು ಬಾಯಿ ಮಾತ್ರ ಬಿಳುಪಾಗಿರುತ್ತದೆ. ಇದರ ಚೇಷ್ಟೆ ಕೂಡಾ ಕೋತಿ ತರಾನೇ. ಆದರೆ ಕೆಲವೊಮ್ಮೆ ಇದು ಭಾಯಾನಕವಾಗಿಯೂ ವರ್ತಿಸಿ ಬಿಡುತ್ತದೆ.  

Written by - Ranjitha R K | Last Updated : Sep 26, 2023, 05:20 PM IST
  • ಲಂಗೂರ್ ಗೆ ಚೆಲ್ಲಾಟವಾದರೆ ಜಿಂಕೆಗೆ ಪ್ರಾಣ ಸಂಕಟ.
  • ತಾಯಿಯಿಂದ ದೂರವಾಗುತ್ತಿರುವ ಬಗ್ಗೆ ಸಂಕಟ
  • ವೈರಲ್ ಆಗುತ್ತಿದೆ ವಿಡಿಯೋ
ಜಿಂಕೆ ಮರಿಯನ್ನು ತನ್ನ ತೋಳಿನಲ್ಲಿರಿಸಿ ತಾಯಿ ಜಿಂಕೆಯನ್ನು ಸತಾಯಿಸುತ್ತಿರುವ ಲಂಗೂರ್  ವಿಡಿಯೋ ನೋಡಿ   title=

ಬೆಂಗಳೂರು : ಕೋತಿ, ಲಂಗೂರ್, ಚಿಂಪಾಂಜಿ, ಗೊರಿಲ್ಲಾ ಇವೆಲ್ಲಾ ತಮಗೆ ಬೇಕು ಅನ್ನಿಸುವುದನ್ನು ಪಡೆದುಕೊಂಡೇ ತೀರುತ್ತದೆ. ಅದು ವಸ್ತುವಾದರೂ ಸರಿ, ಜೀವಿಗಳಾದರೂ ಸರಿ. ಕೆಲವು ಪ್ರಾಣಿಗಳ ಮರಿಗಳನ್ನು, ಮಕ್ಕಳನ್ನು ಎದೆಗಪ್ಪಿಕೊಂದು ಕುಳಿತಿರುವ ಗೊರಿಲ್ಲಾದ ಅದೆಷ್ಟೋ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಹಾಗಂತ ಅವುಗಳು ಹಾನಿ ಮಾಡುತ್ತವೆ ಎಂದಲ್ಲ. ಸುಮ್ಮನೆ ಸತಾಯಿಸಿ ಬಿಡುತ್ತವೆ. ಇದೀಗ ವೈರಲ್ ಆಗುತ್ತಿರುವ ವಿಡಿಯೋ ಕೂಡಾ ಅಂಥದ್ದೇ.  ಇಲ್ಲಿ ಲಂಗೂರ್ ವೊಂದು ಜಿಂಕೆ ಮರಿಯನ್ನು ತನ್ನ ತೋಳಿನಲ್ಲಿ ಇರಿಸಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಈ  ಲಂಗೂರ್ ಕೋತಿ ಜಾತಿಗೆ ಸೇರಿದ ಈ ಪ್ರಾಣಿ. ಇದರ ಮುಖವೆಲ್ಲಾ ಕಪ್ಪಾಗಿದ್ದು, ಕಣ್ಣು ಮತ್ತು ಬಾಯಿ ಮಾತ್ರ ಬಿಳುಪಾಗಿರುತ್ತದೆ. ಇದರ ಚೇಷ್ಟೆ ಕೂಡಾ ಕೋತಿ ತರಾನೇ. ಆದರೆ ಕೆಲವೊಮ್ಮೆ ಇದು ಭಯಾನಕವಾಗಿಯೂ ವರ್ತಿಸಿ ಬಿಡುತ್ತದೆ. ಇದನ್ನು ಕೆಲವು ಕಡೆ ಮುಸಿಯ ಎಂದು ಕೂಡಾ ಕರೆಯುತ್ತಾರೆ. 

ಇದನ್ನೂ ಓದಿ :  Viral Video: ದೆಹಲಿ ಮೆಟ್ರೊದಲ್ಲಿ ಬೀಡಿ ಹೊತ್ತಿಸಿದ ಕಾಕಾ... ವಿಡಿಯೋ ನೋಡಿ!

 ಈ ಲಂಗೂರ್ ತನ್ನ ಮಡಿಲಲ್ಲಿ ಜಿಂಕೆ ಮರಿಯೊಂದಿಗೆ ಇಟ್ಟುಕೊಂಡು ಮಸ್ತಿಯಲ್ಲಿ ತೊಡಗಿದೆ. ಇಲ್ಲಿ ಜಿಂಕೆ ತನ್ನ ಮರಿಯೊಂದಿಗೆ ತನ್ನ ಪಾಡಿಗೆ ನಿಂತಿರುತ್ತದೆ. ಅಷ್ಟರಲ್ಲಿ ಅದೆಲ್ಲಿಂದ ಬಂತೂ ಈ ಲಂಗೂರ್ ಜಿಂಕೆ ಮರಿಯನ್ನು ತಾಯಿ ಜಿಂಕೆಯಿಂದ ಕಸಿದುಕೊಂಡು ಬಿಡುತ್ತದೆ.  ಪಾಪ ತಾಯಿ ಜಿಂಕೆಯು ಲಂಗೂರ್ ಬಳಿ ಪದೇ ಪದೇ ಹೋಗಿ ತನ್ನ ಮಗುವನ್ನು ಹಿಂದಿರುಗಿಸುವಂತೆ ಮನವಿ ಮಾಡುವುದನ್ನು ಕೂಡಾ ಕಾಣಬಹುದು. ಆದರೆ ಲಂಗೂರ್ ಮಾತ್ರ ಜಿಂಕೆಯನ್ನು ಚೆನ್ನಾಗಿಯೇ ಆಟ ಆಡಿಸುತ್ತದೆ. 

ಪಾಪ ಲಂಗೂರ್ ಮುಷ್ಟಿಯಲ್ಲಿರುವ ಜಿಂಕೆ ಮರಿ ಮತ್ತೆ ಮತ್ತೆ ಕಿರುಚುತ್ತಿರುವುದನ್ನು ಕೇಳಬಹುದು. ಆದರೆ ಈ ಲಂಗೂರ್ ಮಾತ್ರ ಮರಿ ಜಿಂಕೆಯನ್ನು ತಾಯಿಯಿಂದ ದೂರ ತೆಗೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಇಲ್ಲಿ ಲಂಗೂರ್ ಗೆ ಚೆಲ್ಲಾಟವಾದರೆ ಜಿಂಕೆಗೆ ಪ್ರಾಣ ಸಂಕಟ.

 

 
 
 
 

 
 
 
 
 
 
 
 
 
 
 

A post shared by Wildmanature (@wildmanature)

ಇದನ್ನೂ ಓದಿ : ದೆಹಲಿ ಮೆಟ್ರೊನಲ್ಲಿ ಮತ್ತೊಂದು ಜೋಡಿಯ ಲಿಪ್ ಲಾಕ್ ವಿಡಿಯೋ ವೈರಲ್!

 

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ : 
ತನ್ನ ಮರಿಯನ್ನು ಆದಷ್ಟು ಬೇಗ ಈ ಲಂಗೂರ್ ಮುಷ್ಟಿಯಿಂದ ಬಿಡಿಸಬೇಕು ಎಂದು ಈ ಜಿಂಕೆ ಕೂಡಾ ಚಡಪಡಿಸುತ್ತಿದೆ. ಈ ವಿಡಿಯೋವನ್ನು ಅನೇಕ ಮಂದಿ ವೀಕ್ಷಿಸಿದ್ದಾರೆ. ವೈಲ್ಡ್‌ಮ್ಯಾನೇಚರ್ ಹೆಸರಿನ ಖಾತೆಯಿಂದ ಈ ವೀಡಿಯೊವನ್ನು Instagram ನಲ್ಲಿ ಹಂಚಿಕೊಳ್ಳಲಾಗಿದೆ. ನೂರಾರು ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News