‘ಕಾಲಾ ಚಶ್ಮಾ’ ಹಿಂದಿ ಹಾಡಿಗೆ ಜಪಾನ್ ಬಾಲೆಯರ ಭರ್ಜರಿ ಸ್ಟೆಪ್: ವಿಡಿಯೋ ನೋಡಿದ್ರೆ ನೀವು ಕುಣಿಯೋದು ಗ್ಯಾರಂಟಿ

ಸದ್ಯ ಇನ್ಸ್ಟಾಗ್ರಾಂ ಕೆಲವೊಂದು ಆಧುನಿಕ ವಿಚಾರಗಳನ್ನು ಪರಿಚಯಿಸಿದ್ದು, ಆ ಮೂಲಕ ದೇಶ ವಿದೇಶಗಳಲ್ಲಿ ಟ್ರೆಂಡಿಂಗ್ ಎಂಬ ಅಂಶ ಬಹಳಷ್ಟು ಚಾಲ್ತಿಗೆ ಬಂದಿದೆ.

Written by - Bhavishya Shetty | Last Updated : Oct 7, 2022, 12:48 AM IST
    • ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕತ್ರಿನಾ ಕೈಫ್ ಅಭಿನಯದ ಕಾಲಾ ಚಶ್ಮಾ ಸಾಂಗ್
    • ಈ ಹಾಡಿಗೆ ಜಪಾನ್ ಬಾಲೆಯರು ಕುಣಿದಾಡಿದ್ದಾರೆ
    • ಈ ವಿಡಿಯೋವನ್ನು 2,88,134 ಮಂದಿ ಇಷ್ಟಪಟ್ಟು ಲೈಕ್ ಮಾಡಿದ್ದಾರೆ
‘ಕಾಲಾ ಚಶ್ಮಾ’ ಹಿಂದಿ ಹಾಡಿಗೆ ಜಪಾನ್ ಬಾಲೆಯರ ಭರ್ಜರಿ ಸ್ಟೆಪ್: ವಿಡಿಯೋ ನೋಡಿದ್ರೆ ನೀವು ಕುಣಿಯೋದು ಗ್ಯಾರಂಟಿ title=
Japan Girls Dance

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಸಖತ್ ವೈರಲ್ ಆಗುತ್ತವೆ. ಅದರಲ್ಲೂ ಬಾಲಿವುಡ್ ನ ಕೆಲವೊಂದು ಹಾಡಿಗೆ ಟ್ರೆಂಡಿಂಗ್ ಟ್ಯಾಗ್ ಹಾಕಿ ಭರ್ಜರಿಯಾಗಿ ಸ್ಟೆಪ್ ಹಾಕುತ್ತಾರೆ. ಇನ್ನು ಸೋಶಿಯಲ್ ಮೀಡಿಯಾ ಅಭಿವೃದ್ದಿ ಹೊಂದಿದಂತೆ ಜನರು ಅವುಗಳ ಕಡೆಗೆ ಹೆಚ್ಚು ಗಮನ ಕೊಡಲು ಆರಂಭಿಸಿದ್ದಾರೆ. 

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ

ಸದ್ಯ ಇನ್ಸ್ಟಾಗ್ರಾಂ ಕೆಲವೊಂದು ಆಧುನಿಕ ವಿಚಾರಗಳನ್ನು ಪರಿಚಯಿಸಿದ್ದು, ಆ ಮೂಲಕ ದೇಶ ವಿದೇಶಗಳಲ್ಲಿ ಟ್ರೆಂಡಿಂಗ್ ಎಂಬ ಅಂಶ ಬಹಳಷ್ಟು ಚಾಲ್ತಿಗೆ ಬಂದಿದೆ. ಇನ್ನು ಇದರಲ್ಲಿರುವ ರೀಲ್ಸ್ ಬಾಲಿವುಡ್ ನ ಹಾಡುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತವೆ. ಅದರಲ್ಲಿ ಒಂದು ಕಾಲಾ ಚಶ್ಮಾ ಸಾಂಗ್.

 
 
 
 

 
 
 
 
 
 
 
 
 
 
 

A post shared by Quick Style (@thequickstyle)

 

 

ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕತ್ರಿನಾ ಕೈಫ್ ಅಭಿನಯದ ಈ ಹಾಡು ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ. ಇದೀಗ ಈ ಹಾಡಿಗೆ ಜಪಾನ್ ಬಾಲೆಯರು ಕುಣಿದಾಡಿದ್ದು, ಭರ್ಜರಿ ವೀಕ್ಷಣೆ ಪಡೆದಿದೆ. ಯೂನಿಫಾರ್ಮ್ ರೀತಿ ಕಾಣುವ ಬಟ್ಟೆ ಧರಿಸಿರುವ ಈ ಯುವತಿಯರು ಕಾಲಾ ಛಶ್ಮಾ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಈ ವಿಡಿಯೋವನ್ನು ‘ದಿ ಕ್ವಿಕ್ ಸ್ಟೈಲ್’ ಎಂಬ ಸೋಶಿಯಲ್ ಮೀಡಿಯಾ ಪೇಜ್ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 2,88,134 ಮಂದಿ ಇಷ್ಟಪಟ್ಟು ಲೈಕ್ ಮಾಡಿದ್ದಾರೆ. ಜೊತೆಗೆ ಈ ವಿಡಿಯೋಗೆ ಶೀರ್ಷಿಕೆಯನ್ನೂ ನೀಡಿದ್ದು, ‘ಟ್ರೆಂಡ್ ಯಾವತ್ತೂ ಕೊನೆಯಾಗಲು ಬಯಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ: ಆಜಾನ್ ಕೇಳುತ್ತಿದ್ದಂತೆ ಭಾಷಣ ನಿಲ್ಲಿಸಿದ ಅಮಿತ್ ಶಾ: ಕಾಶ್ಮೀರದಲ್ಲಿ ಸೌಹಾರ್ದತೆ ಮೆರೆದ ಗೃಹ ಸಚಿವರಿಗೆ ಜನಮೆಚ್ಚುಗೆ

ದೇಶೀಯ ಹಾಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಸಂತಸದ ಸಂಗತಿ ಎನ್ನಬಹುದು. ಇವಿಷ್ಟೇ ಅಲ್ಲದೆ, ಅನೇಕ ಹಾಡುಗಳು, ನೃತ್ಯಗಳು ದೇಶವಲ್ಲದೆ, ವಿದೇಶಗಳಲ್ಲೂ ಖ್ಯಾತಿ ಗಳಿಸಲು ಸೋಶಿಯಲ್ ಮೀಡಿಯಾ ಕೂಡ ಬಹು ಮುಖ್ಯ ಕೊಡುಗೆ ನೀಡಿದೆ ಎನ್ನಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News