ಬಾಯ್ ಫ್ರೆಂಡ್ ಮೋಸ ಮಾಡಿದ್ದಕ್ಕೆ ಆತನ ತಂದೆಯನ್ನೇ ಮದುವೆಯಾಗಿ ಸೇಡು ತೀರಿಸಿಕೊಂಡ ಯುವತಿ

ಅಮೆರಿಕಾದ ಆಗಸ್ಟಾ ಹಬಲ್ 21 ವರ್ಷದವಳಿದ್ದಾಗ 30 ವರ್ಷದ ಹುಡುಗನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆರಂಭದಲ್ಲಿ ಇವರಿಬ್ಬರ ಸಂಬಂಧ ಬಹಳ ಸುಂದರವಾಗಿಯೇ ಇತ್ತು.

Written by - Ranjitha R K | Last Updated : Jul 26, 2022, 03:40 PM IST
  • ಯುವತಿಗೆ ಮೋಸ ಮಾಡಿದ ಪ್ರಿಯಕರ
  • ಎರಡನೇ ಅವಕಾಶದಲ್ಲಿಯೂ ಬುದ್ದಿ ಕಲಿಯದ ಭೂಪ
  • ಯುವಕನ ತಂದೆಯನ್ನೇ ವರಿಸಿದ ಯುವತಿ
ಬಾಯ್ ಫ್ರೆಂಡ್ ಮೋಸ ಮಾಡಿದ್ದಕ್ಕೆ ಆತನ ತಂದೆಯನ್ನೇ ಮದುವೆಯಾಗಿ ಸೇಡು ತೀರಿಸಿಕೊಂಡ ಯುವತಿ  title=
viral news (file photo)

Viral news : ದಿನ ಬೆಳಗಾದರೆ ಒಂದಲ್ಲ ಒಂದು ಲವ್ ಸ್ಟೋರಿಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೆ ಇಲ್ಲೊಂದು ಪ್ರೇಮ ಕತೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಲ್ಲಿ ಯುವತಿಯೊಬ್ಬಳು ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಹುಡುಗ ಹುಡುಗಿಗೆ ಮೋಸ ಮಾಡುತ್ತಿದ್ದಾನೆ ಎನ್ನುವುದು ಆಕೆಗೆ ಗೊತ್ತಾಗಿದೆ. 

ಅಮೆರಿಕಾದ ಆಗಸ್ಟಾ ಹಬಲ್ 21 ವರ್ಷದವಳಿದ್ದಾಗ 30 ವರ್ಷದ ಹುಡುಗನನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆರಂಭದಲ್ಲಿ ಇವರಿಬ್ಬರ ಸಂಬಂಧ ಬಹಳ ಸುಂದರವಾಗಿಯೇ ಇತ್ತು. ಆಗಸ್ಟಾ ಪ್ರಕಾರ, ಹುಡುಗ ಹೂವುಗಳನ್ನು ತರುತ್ತಿದ್ದ, ಉಡುಗೊರೆಗಳನ್ನು ನೀಡುತ್ತಿದ್ದ, ಮಾತ್ರವಲ್ಲ ಮದುವೆಯ ಪ್ರಸ್ತಾಪವನ್ನು ಕೂಡಾ ಮಾಡುತ್ತಿದ್ದ.  

ಇದನ್ನೂ ಓದಿ : Viral Video: ಬಿಯರ್ ಕುಡಿದ ಹುಂಜ, ನಶೆಯಲ್ಲಿ ಮಾಡಿದ್ದೇನು ನೋಡಿ..

ತನ್ನ ಕತೆಯನ್ನು ಹೇಳಿಕೊಂಡ ಯುವತಿ : 
ಈ ಇಬ್ಬರ ಸಂಬಂಧ 2 ವರ್ಷಗಳ ಕಾಲ ಇತ್ತು. ಆದರೆ ಎಂದು ಹುಡುಗಿ ಹೇಳಿದ್ದಾಳೆ. ಆದರೆ  ಆಗಸ್ಟಾ  ಜೊತೆ ಪ್ರೀತಿಯಲ್ಲಿದ್ದುಕೊಂಡೆ ಬೇರೊಬ್ಬರ ಜೊತೆ ಸಂಬಂಧ ಬೆಳೆಸಿದ್ದ. ಯುವತಿಯ ಸ್ನೇಹಿತೆಯ ಜೊತೆ ಸೇರಿಕೊಂಡು ಮೋಸ ಮಾಡುತ್ತಿದ್ದ. ಈ ವಿಷಯ ಗೊತ್ತಾದ ಮೇಲೆ  ಆಗಸ್ಟಾ ಯುವಕನಿಗೆ ಎರಡನೇ ಅವಕಾಶ ಕೂಡಾ ನೀಡಿದ್ದಾಳೆ. ಆದರೆ ಹುಡುಗ ಮಾತ್ರ ತನ್ನ ಬುದ್ದಿ ಬಿಡಲಿಲ್ಲ. 

ಎರಡು ಬಾರಿ ಮೋಸ ಮಾಡಿದ ನಂತರ, ಯುವತಿ ಯುವಕನೊಂದಿಗಿನ ಸಂಬಂಧ ಮುರಿದುಕೊಂಡಿದ್ದಾಳೆ. ಇಷ್ಟೇ ಆದರೆ ಇದರಲ್ಲಿ ಏನೂ ವಿಶೇಷ ಇಲ್ಲ ಎನ್ನಬಹುದಿತ್ತು. ಆದರೆ ಇದಾದ ನಂತರ ಯುವತಿ ಯುವಕನ ತಂದೆಯನ್ನೇ ವರಿಸಿದ್ದಾಳೆ. ಅಲ್ಲದೆ ತನ್ನ ಮದುವೆಯ ವಾರ್ಷಿಕೋತ್ಸವದ ದಿನ  ವೀಡಿಯೊದಲ್ಲಿ, ಈ ಎಲ್ಲಾ ಕತೆಯನು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ : Viral: ಮಗು ರಕ್ಷಿಸಲು ಹಾವಿನೊಂದಿಗೆ ಇಲಿಯ ಕಾದಾಟ.. ಗೆದ್ದವರು ಯಾರು ನೋಡಿ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News