Viral Video: ರೀಲ್ಸ್ ಮಾಡಲು ಬಾಲ್ಕನಿ ಹತ್ತಿದಾಗ ‘ಏನೋ’ ಕಂಡು ಎದ್ದು-ಬಿದ್ದು ಓಡಿ ಸೊಂಟ ಮುರಿದುಕೊಂಡ ಯುವತಿ!

ಅದೇ ರೀತಿ ಇದೀಗ ಮಳೆಯಲ್ಲಿ ರೀಲ್ಸ್ ಮಾಡುವುದು ಟ್ರೆಂಡಿಂಗ್ ಎಂದು ತೋರುತ್ತದೆ. ಅಂತೆಯೇ ಇಲ್ಲೊಬ್ಬ ಯುವತಿ ಮಳೆಯಲ್ಲಿ ರೀಲ್ಸ್ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾಳೆ.

Written by - Bhavishya Shetty | Last Updated : Nov 5, 2022, 02:36 PM IST
    • ಡ್ಯಾನ್ಸ್ ವೀಡಿಯೊಗಳು Instagram ನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತವೆ
    • ಇತ್ತೀಚಿನ ನೃತ್ಯ ಪ್ರವೃತ್ತಿಗಳು ಮತ್ತು ಸವಾಲುಗಳನ್ನು ಕಾಪಿ ಮಾಡಿ ರೀಲ್ಸ್ ಮಾಡುತ್ತಾರೆ
    • ಇದೀಗ ಮಳೆಯಲ್ಲಿ ರೀಲ್ಸ್ ಮಾಡುವುದು ಟ್ರೆಂಡಿಂಗ್ ಎಂದು ತೋರುತ್ತದೆ
Viral Video: ರೀಲ್ಸ್ ಮಾಡಲು ಬಾಲ್ಕನಿ ಹತ್ತಿದಾಗ ‘ಏನೋ’ ಕಂಡು ಎದ್ದು-ಬಿದ್ದು ಓಡಿ ಸೊಂಟ ಮುರಿದುಕೊಂಡ ಯುವತಿ! title=
Dance Video

Today Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ಪ್ರತೀ ದಿನ ಹರಿದಾಡುತ್ತವೆ. ಯುವಕರಯ==ರು ಟಿಕ್‌ಟಾಕ್ಸ್, ಇನ್‌ಸ್ಟಾಗ್ರಾಮ್ ರೀಲ್‌ಗಳು ಅಥವಾ ಯೂಟ್ಯೂಬ್ ಶಾರ್ಟ್‌ಗಳನ್ನು ರೆಕಾರ್ಡ್ ಮಾಡುವುದನ್ನು ನೋಡುವುದು ಅಸಾಮಾನ್ಯವೇನಲ್ಲ. ಡ್ಯಾನ್ಸ್ ವೀಡಿಯೊಗಳು Instagram ನಲ್ಲಿ ಹೆಚ್ಚಿನ ವೀಕ್ಷಣೆಗಳನ್ನು ಗಳಿಸುತ್ತವೆ, ಅದಕ್ಕಾಗಿಯೇ ಜನರು ಇತ್ತೀಚಿನ ನೃತ್ಯ ಪ್ರವೃತ್ತಿಗಳು ಮತ್ತು ಸವಾಲುಗಳನ್ನು ಕಾಪಿ ಮಾಡಿ ರೀಲ್ಸ್ ಮಾಡುತ್ತಾರೆ.

ಇದನ್ನೂ ಓದಿ: Refrigerator Blast: ಫ್ರಿಡ್ಜ್ ಸ್ಫೋಟಗೊಂಡು ಒಡಹುಟ್ಟಿದ ಮೂವರ ದಾರುಣ ಅಂತ್ಯ

ಅದೇ ರೀತಿ ಇದೀಗ ಮಳೆಯಲ್ಲಿ ರೀಲ್ಸ್ ಮಾಡುವುದು ಟ್ರೆಂಡಿಂಗ್ ಎಂದು ತೋರುತ್ತದೆ. ಅಂತೆಯೇ ಇಲ್ಲೊಬ್ಬ ಯುವತಿ ಮಳೆಯಲ್ಲಿ ರೀಲ್ಸ್ ಮಾಡಲು ಹೋಗಿ ಫಜೀತಿಗೆ ಸಿಲುಕಿದ್ದಾಳೆ.

ಬರ್ ಸೋ ರೇ, ಚಮ್ ಚಮ್ ಚಮ್, ಮತ್ತು ಟಿಪ್ ಟಿಪ್ ಬರ್ಸಾ ಪಾನಿಯಂತಹ ಜನಪ್ರಿಯ ಬಾಲಿವುಡ್ ಹಾಡುಗಳಿಗೆ ದೇಸಿ ಹುಡುಗಿಯರು ಸಾಮಾನ್ಯವಾಗಿ ವೀಡಿಯೊಗಳಲ್ಲಿ ಮಳೆಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು. ಅದೇ ರೀತಿ ಈ ಹುಡುಗಿ ತನ್ನ ಮನೆಯ ಟೆರೇಸ್‌ನಲ್ಲಿ ರೀಲ್ ಅನ್ನು ಚಿತ್ರಿಸಲು ಹೋಗುತ್ತಾಳೆ. ಆದರೆ ಅಲ್ಲಿ ನಿಜವಾಗಿಯೂ ತಮಾಷೆಯ ಘಟನೆ ನಡೆದಿದ್ದು, ಅದು ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ.

 

 

ಅವಳು ಮಳೆಯಲ್ಲಿ ನೃತ್ಯ ಮಾಡುತ್ತಿದ್ದಾಗ, ಗುಡುಗು ನಿಜವಾಗಿಯೂ ಜೋರಾಗಿ ಹೊಡೆಯುತ್ತದೆ. ಇದರಿಂದ ಹುಡುಗಿ ಒಂದು ಬಾರಿ ಬೆಚ್ಚಿಬಿದ್ದು. ಅಲ್ಲಿಂದ ಓಡಲು ಪ್ರಯತ್ನಿಸುತ್ತಾಳೆ. ಆದರೆ ನೆಲ ಒದ್ದೆಯಾಗಿದ್ದ ಪರಿಣಾಮ ಜಾರಿ ಕೆಳಗೆ ಬೀಳುತ್ತಾಳೆ. ನೋಡಲು ಫನ್ನಿ ಅನಿಸಿದರೂ ಸಹ ಆ ಯುವತಿಗೆ ಗಾಯವಾದಂತೆ ಗೋಚರಿಸುತ್ತದೆ.

ಇದನ್ನೂ ಓದಿ: 130 ಜನರ ಸಾವಿಗೆ ಕಾರಣ ‘ಒರೆವಾ’ ಭ್ರಷ್ಟಾಚಾರ! 2 ಕೋಟಿಯಲ್ಲಿ ಖರ್ಚು ಮಾಡಿದ್ದು ಕೇವಲ 12 ಲಕ್ಷ..?

ಇನ್ನು ಈ ವೀಡಿಯೊ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ. ನೆಟಿಜನ್‌ಗಳು ಈ ಕ್ಲಿಪ್ ಅನ್ನು ಕಂಡು ನಕ್ಕು ನಕ್ಕು ಸುಸ್ತಾಗಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಚಿತ್ರ ವಿಚಿತ್ರ ಪ್ರತಿಕ್ರಿಯೆಗಳು ಕಂಡುಬಂದಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News