ಬರೀ ಮಳೆಯಲ್ಲ ಇದು ಮತ್ಸ್ಯ ಮಳೆ ! ಮಳೆಯೊಂದಿಗೆ ಆಗಸದಿಂದ ಬಿತ್ತು ರಾಶಿ ರಾಶಿ ಮೀನುಗಳು ! ಇಲ್ಲಿದೆ ನೋಡಿ ವಿಡಿಯೋ !

Fish rain Video : ಮಳೆಯ ಜೊತೆ ಆಗಸದಿಂದ ಮೀನುಗಳು ಉದುರುವುದನ್ನು ಎಂದಾದರೂ ಕೇಳಿದ್ದೀರಾ? ಹೌದು ಇಲ್ಲಿ ಮಳೆ ಬೀಳುವಾಗ ಬರೀ ನೀರಲ್ಲ ಅದರ ಜೊತೆ ಸಾವಿರಾರು ಮೀನುಗಳು ಕೂಡಾ ಬಿದ್ದಿವೆ.

Written by - Ranjitha R K | Last Updated : May 8, 2024, 10:30 AM IST
  • ಮಳೆಗಾಗಿ ಪ್ರತಿಯೊಬ್ಬರೂ ಕಾದು ಕುಳಿತಿದ್ದಾರೆ.
  • ರಾಜ್ಯದ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ
  • ಇಲ್ಲಿ ಮೀನಿನ ಮಳೆಯಾಗಿದೆ
ಬರೀ ಮಳೆಯಲ್ಲ ಇದು ಮತ್ಸ್ಯ  ಮಳೆ ! ಮಳೆಯೊಂದಿಗೆ ಆಗಸದಿಂದ ಬಿತ್ತು ರಾಶಿ ರಾಶಿ ಮೀನುಗಳು ! ಇಲ್ಲಿದೆ ನೋಡಿ ವಿಡಿಯೋ ! title=

Fish rain Video : ಮಳೆಗಾಗಿ ಪ್ರತಿಯೊಬ್ಬರೂ ಕಾದು ಕುಳಿತಿದ್ದಾರೆ. ರಾಜ್ಯದ ಕೆಲವೆಡೆ ಧಾರಾಕಾರ ಮಳೆ ಸುರಿದಿದೆ. ಇನ್ನು ಕೆಲವು ಕಡೆ ಇನ್ನೂ ಬಿಸಿಲ ಧಗೆ ನಿಂತಿಲ್ಲ. ಸಾಮಾನ್ಯ ಭಾಷೆಯಲ್ಲಿ ಮಳೆ ಎಂದರೆ ಆಗಸದಿಂದ ನೀರು ಸುರಿಯುವುದು.ಇನ್ನು ಕೆಲವೊಮ್ಮೆ ಆಲಿಕಲ್ಲು ಮಳೆಯಾಗುವುದು ಉಂಟು. ಆದರೆ ಮಳೆಯ ಜೊತೆ ಆಗಸದಿಂದ ಮೀನುಗಳು ಉದುರುವುದನ್ನು ಎಂದಾದರೂ ಕೇಳಿದ್ದೀರಾ? ಹೌದು, ಇಲ್ಲಿ ಮಳೆ ಬೀಳುವಾಗ ಬರೀ ನೀರಲ್ಲ ಅದರ ಜೊತೆ ಸಾವಿರಾರು ಮೀನುಗಳು ಕೂಡಾ ಬಿದ್ದಿವೆ.ಈ ರೀತಿ ಮೀನಿನ ಮಳೆ ಕಂಡು ಜನ ಬೆರಗಾಗಿದ್ದಾರೆ. 

 ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೀಡಿಯೊವೊಂದನ್ನು ಹಂಚಿಕೊಳ್ಳಲಾಗಿದೆ.ಇದರಲ್ಲಿ ಮಳೆ ಬೀಳುವಾಗ ಜೊತೆಯಲ್ಲಿ ಮೀನುಗಳು ಕೂಡಾ ಮೇಲಿನಿಂದ ಬೀಳುವುದು ಸ್ಪಷ್ಟವಾಗಿ ಕಾಣಿಸುತ್ತದೆ.ಅದು ಕೂಡಾ ಜೀವಂತ ಮೀನುಗಳೇ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು  ವಿಡಿಯೋ ಮಾಡಿದ್ದಾರೆ. 

ಇದನ್ನೂ ಓದಿ : Viral News: ಆಸ್ಪತ್ರೆಯ ಬಿಲ್​​ ಪಾವತಿಸಲಾಗದೆ ಪತ್ನಿಯನ್ನೇ ಕೊಂದ ಪತಿ!

nstablog9ja ಹೆಸರಿನ X ಖಾತೆಯಿಂದ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.  ಇದನ್ನು ಇಲ್ಲಿಯವರೆಗೆ ಸುಮಾರು 9 ಸಾವಿರಕ್ಕೂ ಅಧಿಕ ಬಾರಿ ಈ ವಿಡಿಯೋವನ್ನು  ವೀಕ್ಷಿಸಲಾಗಿದೆ. ಅನೇಕ ಜನರು ಈ ವೀಡಿಯೊವನ್ನು ಲೈಕ್ ಮಾಡಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಕೂಡಾ ಮಾಡುತ್ತಿದ್ದಾರೆ. 

 

ಇದನ್ನೂ ಓದಿ : Viral Video: ಕ್ರಿಕೆಟ್‌ ಆಡುವಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು 11 ವರ್ಷದ ಬಾಲಕ ಸಾವು!

ಮೀನಿನ ಮಳೆಗೆ ಕಾರಣ ಏನು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲಿ ಮೂಡಿಯೇ ಮೂಡುತ್ತದೆ.ಇದಕ್ಕೆ ಕಾರಣವಿದೆ. ಸುಂಟರ ಗಾಳಿ ತನ್ನೊಂದಿಗೆ ಕೆಲವೊಂದು ವಸ್ತುಗಳನ್ನು ಹೊತ್ತೊಯ್ಯುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗ ಇದೇ ಸುಂಟರಗಾಳಿ ಸಮುದ್ರ ಅಥವಾ ಇತರ ಜಲಮೂಲಗಳನ್ನು ದಾಟಿದಾಗ ನೀರಿನಲ್ಲಿದ್ದ ಮೀನು,ಕಪ್ಪೆಗಳು, ಆಮೆಗಳು ಮತ್ತು ಏಡಿಗಳನ್ನು ತನ್ನೊಂದಿಗೆ ಹೊತ್ತು ಸಾಗುತ್ತದೆ. ಗಾಳಿಯ ತೀವ್ರತೆ ಕಡಿಮೆಯಾದಾಗ ಈ ಮೀನುಗಳು ಆಗಸದಿಂದ ಕೆಳಗೆ ಬೀಳುತ್ತವೆ. ಇದು ನಮಗೆ ಮೀನಿನ ಮಳೆಯಂತೆ ಕಾಣುತ್ತದೆ. 

ಈ ರೀತಿ ಮೀನಿನ ಮಳೆಯಾಗುತ್ತಿರುವುದು ಇದೇ ಮೊದಲಲ್ಲ. ಇಂಥಹ ಘಟನೆ ಹಿಂದೆಯೂ ಕೂಡಾ ಆಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಇರಾನಿನಲ್ಲಿ. ಇಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇರಾನಿನ ಮತ್ಸ್ಯ ಮಳೆಯದ್ದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News