Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!!

father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Written by - Savita M B | Last Updated : Sep 12, 2024, 10:53 AM IST
  • ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಇತ್ತೀಚೆಗೆ ಹೆಚ್ಚುತ್ತಿದೆ.
  • ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral: ಗಂಡ್ಮಕ್ಕಳೇ ಹುಷಾರ್‌.. ಇನ್ಮುಂದೆ ಸಿಕ್ಕಸಿಕ್ಕ ಹುಡುಗಿರಿಗೆ ಲೈನ್‌ ಹೊಡೆಯೋದು ಅಷ್ಟು Easy ಅಲ್ಲ..! ಈ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತೆ!! title=

Viral Video: ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಇತ್ತೀಚೆಗೆ ಹೆಚ್ಚುತ್ತಿದೆ. ಕಿಡಿಗೇಡಿಗಳು ವಯಸ್ಸಿನ ಬೇಧವಿಲ್ಲದೆ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಲೇ ಇದ್ದಾರೆ. ಆದರೆ ಇದೀಗ ಮಗಳ ರಕ್ಷಣೆಗೆ ತಂದೆಯೊಬ್ಬ ವಿಚಿತ್ರ ನಿರ್ಧಾರ ಕೈಗೊಂಡಿದ್ದಾನೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಲೆ ಮೇಲೆ ಸಿಸಿ ಕ್ಯಾಮರಾ!
ಒಬ್ಬ ತಂದೆ ತನ್ನ ಮಗಳನ್ನು ರಕ್ಷಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಂಡಿದ್ದು, ತಮ್ಮ ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂಓದಿ-RRR ನಲ್ಲಿ ಲೋಕಿ ಪಾತ್ರದಲ್ಲಿ ಮಿಂಚಿದ ಈ ಬೆಡಗಿಯ ರಿಯಲ್‌ ಲೈಫ್‌ ಹೇಗಿದೆ ಗೊತ್ತಾ? ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!

ಪಾಕಿಸ್ತಾನದಲ್ಲಿ ನಡೆದ ಘಟನೆ:
ಪಾಕಿಸ್ತಾನದ ವಲೀದ್ ಸಾಹಬ್ ಎಂಬ ವ್ಯಕ್ತಿ ತನ್ನ ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದಾನೆ. ಈ ಸೆಕ್ಯುರಿಟಿ ಕ್ಯಾಮೆರಾವನ್ನು ತಲೆಯ ಮೇಲೆ ಇಟ್ಟುಕೊಂಡು ತಿರುಗಾಡುತ್ತಿದ್ದ ಯುವತಿಯೂ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾಳೆ. 

ಯುವತಿ ಹೇಳಿದ್ದೇನು?:
ಅಪ್ಪನ ನಿರ್ಧಾರಕ್ಕೆ ವಿರೋಧವಿದೆಯೇ? ಎಂದು ಕೇಳಿದಾಗ, ತಂದೆ ತನಗಾಗಿ ಯಾವ ನಿರ್ಧಾರ ತೆಗೆದುಕೊಂಡರೂ ಒಪ್ಪಿಕೊಳ್ಳುತ್ತೇನೆ ಎಂದು ಯುವತಿ ಹೇಳಿದ್ದಾಳೆ.. ಈ ಕ್ಯಾಮೆರಾಗಳನ್ನು ಅಳವಡಿಸಿ ದಿನದ 24 ಗಂಟೆಯೂ ತನ್ನ ತಂದೆ ತನ್ನ ಮೇಲೆ ನಿಗಾ ಇಡುತ್ತಿದ್ದಾರೆ.. ಇದೆಲ್ಲವೂ ತನ್ನ ಸುರಕ್ಷತೆಗಾಗಿ.. ತನ್ನ ತಂದೆಯ ನಿರ್ಧಾರದ ಹಿಂದಿನ ಕಾರಣವೆಂದರೇ ಇತ್ತೀಚೆಗೆ ಕರಾಚಿಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಿಂದಾಗಿ ತನ್ನ ತಂದೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ.

ಮಗಳ ರಕ್ಷಣೆಗಾಗಿ ತಂದೆ ಮಾಡಿರುವ ಈ ವಿನೂತನ ಪ್ರಯತ್ನಕ್ಕೆ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರೆ, ಕೆಲವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. 

ಇದನ್ನೂಓದಿ-ಈ ಫೋಟೋದಲ್ಲಿರುವ ಪುಟ್ಟ ಬಾಲಕ ಈಗ ಪ್ಯಾನ್‌ ಇಂಡಿಯಾ ಹೀರೋ! ಯಾರು ಗೊತ್ತಾಯ್ತ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Facebook Link - https://bit.ly/3Hhqmcj 
Youtube Link - https://www.youtube.com/watch?v=kr-YIH866cM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News