Viral Video: ಮಗ ಡ್ರೀಮ್‌ ಬೈಕ್‌ ಗಿಫ್ಟ್‌ ಕೊಟ್ಟಾಗ ತಂದೆಯ ಸಂತೋಷ ನೋಡಿ! ಹೃದಯಸ್ಪರ್ಶಿ ವಿಡಿಯೋ

Viral Video: ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಜ್ವಲ್ ಸಿದ್ನಾಗ್ ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಉಜ್ವಲ್ ಹೊಸ ಬೈಕ್‌ನ್ನು ಗಿಫ್ಟ್‌ ಕೊಡುವ ಮೂಲಕ ತಂದೆಗೆ ಅಚ್ಚರಿ ಮೂಡಿಸಿದ್ದಾರೆ. ಮಗ ಕೊಟ್ಟ ತನ್ನ ಡ್ರೀಮ್‌ ಬೈಕ್‌ ಕಂಡು ತಂದೆ ಮೂಕವಿಸ್ಮಿತರಾಗುತ್ತಾರೆ.

Written by - Chetana Devarmani | Last Updated : Dec 19, 2022, 05:22 PM IST
  • ತಂದೆಯ ಡ್ರೀಮ್‌ ಬೈಕ್‌ ಗಿಫ್ಟ್‌ ಕೊಟ್ಟ ಮಗ
  • ಎಲ್ಲೆ ಮೀರಿದ ತಂದೆಯ ಸಂತೋಷ
  • ವೈರಲ್‌ ಆಯ್ತು ಹೃದಯಸ್ಪರ್ಶಿ ವಿಡಿಯೋ
Viral Video: ಮಗ ಡ್ರೀಮ್‌ ಬೈಕ್‌ ಗಿಫ್ಟ್‌ ಕೊಟ್ಟಾಗ ತಂದೆಯ ಸಂತೋಷ ನೋಡಿ! ಹೃದಯಸ್ಪರ್ಶಿ ವಿಡಿಯೋ   title=
ಬೈಕ್‌ ಗಿಫ್ಟ್‌

Viral Video: ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಜ್ವಲ್ ಸಿದ್ನಾಗ್ ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಉಜ್ವಲ್ ಹೊಸ ಬೈಕ್‌ನ್ನು ಗಿಫ್ಟ್‌ ಕೊಡುವ ಮೂಲಕ ತಂದೆಗೆ ಅಚ್ಚರಿ ಮೂಡಿಸಿದ್ದಾರೆ. ಮಗ ಕೊಟ್ಟ ತನ್ನ ಡ್ರೀಮ್‌ ಬೈಕ್‌ ಕಂಡು ತಂದೆ ಮೂಕವಿಸ್ಮಿತರಾಗುತ್ತಾರೆ. ಅವರ ಕನಸಿನ ಬೈಕ್ ನೋಡಿದ ತಂದೆಯ ಪ್ರತಿಕ್ರಿಯೆ ನಿಮ್ಮ ಹೃದಯವನ್ನು ಕರಗಿಸುತ್ತದೆ. ಮಗನು ತನ್ನ ತಂದೆಗೆ ಬೈಕ್ ಉಡುಗೊರೆ ನೀಡುವ ಆಲೋಚನೆಯ ಹಿಂದಿನ ಮುದ್ದಾದ ಕಥೆಯನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದ್ದು, 2.8 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ : Funny Prank Video: ರಸ್ತೆಯಲ್ಲಿ ಪ್ರ್ಯಾಂಕ್‌ ಮಾಡಲು ಹೋಗಿ ಒದೆ ತಿಂದ ಯೂಟ್ಯೂಬರ್

"ನಿಮ್ಮನ್ನು ವರ್ಣಿಸಲು ಪದಗಳಿಲ್ಲ, ನೀವು ನನ್ನ ಸೂಪರ್‌ ಮ್ಯಾನ್, ಸೂಪರ್ ಗಾಡ್ ಎಲ್ಲವೂ. ನನ್ನ ಅಜ್ಜ ಸಬ್ ಇನ್ಸ್‌ಪೆಕ್ಟರ್ ಆಗಿದ್ದರಿಂದ ಇಲಾಖೆಗೆ ಹಿಂತಿರುಗಿಸಿದ ನನ್ನ ಅಜ್ಜನ ಬೈಕ್ ಅನ್ನು ನನ್ನ ತಂದೆ ಯಾವಾಗಲೂ ಪ್ರೀತಿಸುತ್ತಿದ್ದರು. ಕಳೆದ ವರ್ಷದ ತನಕ ನಾವು ಕೇವಲ ಬೆಲೆಯನ್ನು ಪರಿಶೀಲಿಸಲು ಶೋರೂಮ್‌ಗೆ ಭೇಟಿ ನೀಡಿದಾಗ ಅವರು ಈ ಬೈಕನ್ನು ಎಷ್ಟು ಪ್ರೀತಿಸುತ್ತಾರೆಂದು ನನಗೆ ತಿಳಿದಿರಲಿಲ್ಲ. ಆದರೆ ನನ್ನ ತಂದೆ, ಇದನ್ನು ನಾವು ಇದೀಗ ಖರೀದಿಸಲು ಸಾಧ್ಯವಿಲ್ಲ, ಇದು ತುಂಬಾ ದುಬಾರಿಯಾಗಿದೆ ಎಂದಿದ್ದರು. ಆದರೆ ಅಂದು ನಾನು ಅವರಿಗೆ ಆ ಬೈಕ್‌ ಮೇಲಿದ್ದ ಪ್ರೀತಿಯನ್ನು ನೋಡಿದೆ. ಆದ್ದರಿಂದ ಇದಕ್ಕಿಂತ ಹೆಚ್ಚಿನ ಉಡುಗೊರೆ ಇರಲಾರದು ಎಂದು ಭಾವಿಸಿದೆ. ಅದು ಅವರಿಗೆ ಸಂತೋಷವನ್ನು ನೀಡುತ್ತದೆ. ಅವರ ಕನಸು ನನಸಾಗಿಸಲು ನನಗೆ ಶಕ್ತಿ ನೀಡಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ನಾನು ಇಂದು ಏನಾಗಿದ್ದರೂ ಅದು ನಿಮ್ಮ ಬೆಂಬಲದಿಂದಾಗಿ. ನಾನು ನನ್ನ ಕೆಲಸವನ್ನು ತೊರೆದಾಗ ಮತ್ತು ಬಂದಾಗ ನಾನು ನನ್ನ ವ್ಯಾಪಾರವನ್ನು ಪ್ರಾರಂಭಿಸಲು ಬಯಸುತ್ತೇನೆ ಎಂದಾಗ ನೀವು ಹೇಳಿದ್ದು ನನಗೆ ಇನ್ನೂ ನೆನಪಿದೆ. ಸರಿ, ನಿನಗೆ ಸಂತೋಷವನ್ನು ನೀಡುವದನ್ನು ಮಾಡು, ನಾನು ಯಾವಾಗಲೂ ನಿನ್ನ ಜೊತೆಗಿದ್ದೇನೆ ಎಂದಿದ್ದೀರಿ. ಇದಕ್ಕಿಂತ ಹೆಚ್ಚಿಗೆ ನಾನು ಏನು ಕೇಳಲಿ, ಇದು ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ ಎಂದು ಉಜ್ವಲ್ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ಬರೆದಿದ್ದಾರೆ.

 

 

ಉಜ್ವಲ್ ತನ್ನ ಕೆಲಸವನ್ನು ತೊರೆದು ವ್ಯಾಪಾರ ಮಾಡುವ ಕನಸುಗಳನ್ನು ಮುಂದುವರಿಸಲು ನಿರ್ಧರಿಸಿದಾಗ ತನ್ನ ತಂದೆ ತನ್ನ ನಿರ್ಧಾರವನ್ನು ಹೇಗೆ ಬೆಂಬಲಿಸಿದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ಅಲದೇ ತನ್ನ ಜೀವನದ ದೇವರಿಗೆ ಅವರ ಪ್ರಿಯವಾದ ಉಡುಗೊರೆಯನ್ನು ನೀಡಿ ಅವರು ಸಂತೋಷ ಪಡಿಸಿದ್ದಾರೆ. ಈ ಹೃದಯಸ್ಪರ್ಷಿ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. ನೆಟಿಜನ್‌ಗಳು ಕಾಮೆಂಟ್ ವಿಭಾಗದಲ್ಲಿ ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋ ಎಲ್ಲರನ್ನೂ ಭಾವುಕರನ್ನಾಗಿಸಿದೆ. 

 ಇದನ್ನೂ ಓದಿ : Watch: ಬ್ರಾಲೆಸ್ ಡ್ರೆಸ್ ಧರಿಸಿ ಮುಜುಗರ ಅನುಭವಿಸಿದ ಪ್ರಿಯಾಂಕಾ ಚೋಪ್ರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News