Snake Video: ಎರಡು ಹಾವುಗಳ ಮಿಲನದ ಮಧ್ಯೆ ಮತ್ತೊಂದು ಉರಗದ ಎಂಟ್ರಿ! ಏನಾಯ್ತು ಗೊತ್ತಾ..?

Snake Viral Video: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವಿಡಿಯೋಗಳು ವೈರಲ್ ಆಗುತ್ತಿವೆ. ಹೆಚ್ಚಿನ ವಿಡಿಯೋಗಳು ಹಾವುಗಳಿಗೆ ಸಂಬಂಧಿಸಿವೆ. ಆದ್ರೆ ಈ ಹಾವಿನ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..

Written by - Chetana Devarmani | Last Updated : Oct 31, 2022, 02:06 PM IST
  • ಎರಡು ಹಾವುಗಳ ಮಿಲನದ ಮಧ್ಯೆ ಮತ್ತೊಂದು ಉರಗದ ಎಂಟ್ರಿ
  • ಈ ಹಾವಿನ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ವಿಡಿಯೋ
Snake Video: ಎರಡು ಹಾವುಗಳ ಮಿಲನದ ಮಧ್ಯೆ ಮತ್ತೊಂದು ಉರಗದ ಎಂಟ್ರಿ! ಏನಾಯ್ತು ಗೊತ್ತಾ..? title=
ವಿಡಿಯೋ ವೈರಲ್‌

Snake Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ವಿಡಿಯೋಗಳು ವೈರಲ್‌ ಆಗುತ್ತವೆ. ನೆಟಿಜನ್‌ಗಳು ಎಲ್ಲಾ ರೀತಿಯ ವಿಷಯಗಳನ್ನು ತಮ್ಮ ಬೆರಳ ತುದಿಯಲ್ಲಿಯೇ ತಿಳಿದುಕೊಳ್ಳಲು ಸಮರ್ಥರಾಗಿದ್ದಾರೆ. ಮೇಲಾಗಿ ನೀವು ಎಂದೂ ನೋಡಿರದ ಅನೇಕ ದೃಶ್ಯಗಳನ್ನು ಇದರಲ್ಲಿ ನೋಡಬಹುದು. ಆದರೆ ಸದ್ಯ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ದೃಶ್ಯಗಳು ಕೆಲವರಿಗೆ ಆಘಾತಕಾರಿ ಮತ್ತು ಇತರರಿಗೆ ಭಯಾನಕ ಎಂದೆನಿಸಬಹುದು. ಆದರೆ ಇವುಗಳಲ್ಲಿ ಹೆಚ್ಚಿನ ವಿಡಿಯೋಗಳು ಹಾವುಗಳಿಗೆ ಸಂಬಂಧಿಸಿವೆ. ನೆಟಿಜನ್‌ಗಳು ಹಾವು ಮತ್ತು ಅತ್ಯಂತ ಅಪಾಯಕಾರಿ ಹೆಬ್ಬಾವುಗಳ ವಿಡಿಯೋಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. 

ಇದನ್ನೂ ಓದಿ : ವಿರಾಟ್‌ ಕೊಹ್ಲಿ ಬೆಡ್‌ ರೂಂ ವಿಡಿಯೋ ಲೀಕ್‌ ಬಗ್ಗೆ ಅನುಷ್ಕಾ ಅಸಮಾಧಾನ

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮನುಷ್ಯರಂತೆಯೇ ಎಲ್ಲಾ ಪ್ರಾಣಿಗಳಿಗೂ ಒಂದು ನಿರ್ದಿಷ್ಟ ಪ್ರಮಾಣದ ಪ್ರೀತಿ ಇರುತ್ತದೆ. ಆದರೆ ಈ ಹಾವಿಗೆ ಸಂಬಂಧಿಸಿದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ್ರೆ.. ಎರಡು ನಾಗರ ಹಾವುಗಳು ಪರಸ್ಪರ ಅಪ್ಪಿಕೊಂಡು ತುಂಬಾ ಪ್ರೀತಿಯಿಂದ ಒಂದಾದ ವೇಳೆಯಲ್ಲಿ ಮಧ್ಯೆ ಮತ್ತೊಂದು ಹಾವು ಬರುತ್ತದೆ. ಆದರೆ ಎರಡು ಹಾವುಗಳ ನಡುವೆ ಇದ್ದ ಹಾವು ತಲೆ ಎತ್ತಿ ಕುಣಿಯತೊಡಗುತ್ತದೆ. ಮೂರು ಹಾವುಗಳ ಮಿಲನದ ಈ ದೃಶ್ಯ ವೈರಲ್ ಆಗುತ್ತಿದೆ.

 

 

ಆದರೆ ಅನೇಕರಿಗೆ ಆಶ್ಚರ್ಯವಾಗಬಹುದು. ಹಾವುಗಳು ಕೂಡ ಪ್ರೀತಿಯಲ್ಲಿ ಬೀಳುತ್ತವೆ. ಹಾವುಗಳು ಮನುಷ್ಯರಂತೆ ಪ್ರೀತಿಸಬಲ್ಲವು ಎನ್ನುತ್ತಾರೆ ತಜ್ಞರು. ಈ ರೀತಿಯ ಅಪರೂಪದ ಘಟನೆಗಳು ಸಾಮಾನ್ಯವಾಗಿ ಜರುಗುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೆ ಈ ಹಾವುಗಳ ವಿಡಿಯೋ ಎಲ್ಲಿಂದ ಬಂತು ಎಂಬುದು ತಿಳಿದಿಲ್ಲ, ಆದರೆ  ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತಿದೆ. ಇದಲ್ಲದೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋಗೆ  ಇಷ್ಟಪಟ್ಟಿದ್ದಾರೆ. ಇನ್ನೂ 136 ಸಾವಿರ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಹಲವರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋವನ್ನು beautiful_new_pix ಎಂಬ Instagram ಪ್ರೊಫೈಲ್‌ನಿಂದ ಹಂಚಿಕೊಳ್ಳಲಾಗಿದೆ. 

ಇದನ್ನೂ ಓದಿ : ʼನಿಮ್ಮ ತ್ಯಾಗವನ್ನು ವ್ಯರ್ಥವಾಗಲು ನಾನು ಬಿಡುವುದಿಲ್ಲʼ : ರಾಹುಲ್‌ ಶಪಥ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News