ನಾಡಲ್ಲಿ ಚುನಾವಣಾ ಮತಯುದ್ಧ: ಬಂಡೀಪುರ ಕಾಡಲ್ಲಿ ಮದಗಜಗಳ ಕಾದಾಟ

Viral Video: ಕರುನಾಡ ಕುರುಕ್ಷೇತ್ರದ ನಡುವೆ ಮದಗಜಗಳ ಕಾದಾಟದ ಈ ವೈರಲ್ ವಿಡಿಯೋ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ರಾಮಾಪುರ ಕಳ್ಳಬೇಟೆ ತಡೆ ಶಿಬಿರ ಬಳಿ ಕಂಡು ಬಂದಿದೆ ಎಂದು ವರದಿಯಾಗಿದೆ. 

Written by - Yashaswini V | Last Updated : May 3, 2023, 01:42 PM IST
  • ಕರ್ನಾಟಕದ ಚುನಾವಣಾ ಕದನದ ನಡುವೆ ಬಂಡೀಪುರ ಅರಣ್ಯದಲ್ಲಿ ಆನೆಗಳ ಕಾದಾಟ
  • ಕರುನಾಡ ಕುರುಕ್ಷೇತ್ರದ ನಡುವೆ ಮದಗಜ ಕಾಳಗ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಈ ವೈರಲ್ ವಿಡಿಯೋ
ನಾಡಲ್ಲಿ ಚುನಾವಣಾ ಮತಯುದ್ಧ: ಬಂಡೀಪುರ ಕಾಡಲ್ಲಿ ಮದಗಜಗಳ ಕಾದಾಟ  title=
Elephants Fighting Viral Video

Elephants Fighting Viral Video: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. 10 ಮೇ 2023ರಂದು ನಡೆಯಲಿರುವ ಅಸೆಂಬ್ಲಿ ಎಲೆಕ್ಷನ್ ನಲ್ಲಿ ಹೇಗಾದರೂ ಸರಿಯೇ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಪಣ ತೊಟ್ಟಿರುವ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಎದುರಾಳಿ ಪಕ್ಷಗಳ ಮೇಲೆ ವಾಕ್ ಸಮರ ನಡೆಸುತ್ತಿವೆ. 

ಒಂದೆಡೆ ಕರುನಾಡಿನಲ್ಲಿ ಚುನಾವಣಾ ಯುದ್ಧ ದಿನೇ ದಿನೇ ತಾರಕಕ್ಕೇರುಟ್ಟಿದೆ. ಮತ್ತೊಂದೆಡೆ, ಕಾಡಲ್ಲಿ ಮದಗಜಗಳು ನೀನಾ-ನಾನಾ ಎಂಬಂತೆ ಕಾದಾಡಿರುವ ದೃಶ್ಯವೊಂದು ಬೆಳಕಿಗೆ ಬಂದಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಇದನ್ನೂ ಓದಿ- ಡ್ರೈವಿಂಗ್ ಮಾಡುವಾಗ ಪ್ರಜ್ಞೆ ತಪ್ಪಿದ ಚಾಲಕ: ತಕ್ಷಣ ದೇವರಂತೆ ಬಂದ 7ನೇ ತರಗತಿ ವಿದ್ಯಾರ್ಥಿ ಮಾಡಿದ್ದೇನು? ನೋಡಿ ವೈರಲ್ ವಿಡಿಯೋ

ಕರುನಾಡ ಕುರುಕ್ಷೇತ್ರದ ನಡುವೆ ಮದಗಜಗಳ ಕಾದಾಟದ ಈ ವೈರಲ್ ವಿಡಿಯೋ ದೃಶ್ಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ರಾಮಾಪುರ ಕಳ್ಳಬೇಟೆ ತಡೆ ಶಿಬಿರ ಬಳಿ ಕಂಡು ಬಂದಿದೆ ಎಂದು ವರದಿಯಾಗಿದೆ. 

ಆನೆಗಳ ಗುದ್ದಾಟದ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ: 

ಇದನ್ನೂ ಓದಿ- ತಾಯಿಯನ್ನು ಹಿಂಬಾಲಿಸಿದ ಮರಿ ಹುಲಿಗಳು..! ಕ್ಯೂಟ್‌ ವಿಡಿಯೋ... ತಪ್ಪದೇ ನೋಡಿ

ಈ ವೈರಲ್ ವಿಡಿಯೋದಲ್ಲಿ ಎರಡು ಮದಗಜಗಳು ಗುದ್ದಾಡಿಕೊಳ್ಳುವ ವೀಡಿಯೋವನ್ನು ಅರಣ್ಯ ಸಿಬ್ಬಂದಿ ಸೆರೆ ಹಿಡಿದಿದ್ದು ಸದ್ಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನೀಳದಂತದ ಎರಡು ಆನೆಗಳು ಭೂಮಿಯೇ ಕಂಪಿಸುವಂತೆ ಗುದ್ದಾಡಿಕೊಂಡಿದ್ದು ನೆಟ್ಟಿಗರನ್ನು ರೋಮಾಂಚನಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News