ಅಂಗಡಿಗೆ ಪಾನಿ ಪುರಿ ಸವಿಯಲು ಬಂದ ಗಜರಾಜ ; Video ವೈರಲ್ 

ಅಸ್ಸಾಂನ ಗುವಾಹಟಿಯ ಆನೆಯ ಪಾನಿ ಪುರಿ ತಿನ್ನುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ, ಆನೆಯು ಪಾನಿ ಪುರಿ ಅಥವಾ ಫುಚ್ಕಾ ಸ್ಟಾಲ್‌ನ ಬಳಿ ನಿಂತು ಪಾನಿ ಪುರಿ ಪಫ್‌ಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ವ್ಯಾಪಾರಿ ಆನೆಗೆ ಸಂತೋಷದಿಂದ ಬಡಿಸುತ್ತಿರುವುದನ್ನ ಕಾಣಬಹುದಾಗಿದೆ.

Written by - Channabasava A Kashinakunti | Last Updated : Oct 12, 2022, 07:28 PM IST
  • ದೇಶದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾದ ಪಾನಿ ಪುರಿ
  • ಪ್ರಾಣಿಗಳು ಕೂಡ ಪಾನಿ ಪುರಿಯನ್ನು ಇಷ್ಟಪಡುತ್ತವೆ
  • ಆನೆಯ ಪಾನಿ ಪುರಿ ತಿನ್ನುವ ವಿಡಿಯೋ ವೈರಲ್
ಅಂಗಡಿಗೆ ಪಾನಿ ಪುರಿ ಸವಿಯಲು ಬಂದ ಗಜರಾಜ ; Video ವೈರಲ್  title=

Elephant enjoys pani puri : ದೇಶದ ಅತ್ಯಂತ ಜನಪ್ರಿಯ ಮತ್ತು ನೆಚ್ಚಿನ ಬೀದಿ ಆಹಾರಗಳಲ್ಲಿ ಒಂದಾದ ಗೋಲ್ ಗಪ್ಪಾ ಅಥವಾ ಪಾನಿ ಪುರಿ, ಇದನ್ನು ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು, ಅಥವಾ ವಯಸ್ಸಾದವರು ಸಹ ಇಷ್ಟಪಡುತ್ತಾರೆ. ಆದ್ರೆ, ಪ್ರಾಣಿಗಳು ಕೂಡ ಪಾನಿ ಪುರಿಯನ್ನು ಇಷ್ಟಪಡುತ್ತವೆ ಎಂದರೆ ನಂಬುತ್ತೀರಾ? ಹೌದು.. ಇಂತಹ ಒಂದು ಅಪರೂಪದ ಘಟನೆ ಇಲ್ಲಿದೆ ನೋಡಿ..

ಅಸ್ಸಾಂನಲ್ಲಿ ಆನೆಯೊಂದು ಪಾನಿ ಪುರಿಯ ಬಿಗ್ ಫ್ಯಾನ್ ಅಂತೆ, ಈ ಆನೆಗೆ ಗೋಲ್ ಗಪ್ಪಾ ಅಂದ್ರೆ ಎಲ್ಲಿದ್ದರು ಬರುತ್ತಂತೆ. ಅಷ್ಟೊಂದು ಇಷ್ಟ ಇದಕ್ಕೆ.

ಇದನ್ನೂ ಓದಿ : Bride Groom Video: ವರನ ಮುಂದೆ ಅಳುತ್ತಾ ಮಾಜಿ ಲವರ್‌ಗೆ ಹಾಡು ಹೇಳಿದ ವಧು

ಅಸ್ಸಾಂನ ಗುವಾಹಟಿಯ ಆನೆಯ ಪಾನಿ ಪುರಿ ತಿನ್ನುವ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕ್ಲಿಪ್ ನಲ್ಲಿ, ಆನೆಯು ಪಾನಿ ಪುರಿ ಅಥವಾ ಫುಚ್ಕಾ ಸ್ಟಾಲ್‌ನ ಬಳಿ ನಿಂತು ಪಾನಿ ಪುರಿ ಪಫ್‌ಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ, ವ್ಯಾಪಾರಿ ಆನೆಗೆ ಸಂತೋಷದಿಂದ ಬಡಿಸುತ್ತಿರುವುದನ್ನ ಕಾಣಬಹುದಾಗಿದೆ.

 ಇಲ್ಲಿ ನೋಡಿ ವಿಡಿಯೋ :

ಇದು 30 ಸೆಕೆಂಡ್‌ಗಳ ವೀಡಿಯೊ ಆಗಿದೆ, ಆನೆಯು ಸವಾರಿಯಿಂದ ತನ್ನ ಮಾವುತನೊಂದಿಗೆ ಬರುವುದನ್ನು ನೋಡಬಹುದು, ನೇರವಾಗಿ ಸ್ಟಾಲ್‌ಗೆ ಬಂದು ಪಾನಿ ಪುರಿ ಕೊಡು ಅನ್ನುವ ಹಾಗೆ ನಿಲ್ಲುತ್ತದೆ. ವ್ಯಾಪಾರಿ ಆನೆಗೆ ಸಂತೋಷದಿಂದ ಒಂದೊಂದಾಗಿ ಪಫ್‌ಗಳನ್ನು ತಯಾರಿಸಿ ಅದರ ಸೊಂಡಿಲಲ್ಲಿ ಇಡುತ್ತಾನೆ. ಅದನ್ನ ಆನೆ ಬಾಯಿಯೊಳಗೆ ಹಾಕಿಕೊಳ್ಳುತ್ತದೆ. ಇದನ್ನೂ ನೋಡಿದ ಜನ ಸ್ಟಾಲ್ ಸುತ್ತಲೂ ಜಮಾಯಿಸಿದರು.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್ ಆಗಿದೆ, ಹಲವರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರ "ಟಸ್ಕರ್ ಬ್ಯೂಟಿ!!" ಎಂದರೆ, ಮತ್ತೊಬ್ಬ "ಪಾನಿ ಪುರಿ ಎಲ್ಲರೂ ಇಷ್ಟ ವಾಟ್ ಎ ಕ್ಯೂಟಿ" ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : Viral News: ಮಗಳ ಮದುವೆಯಾಗಿದ್ದೇ ತಡ: ಅದೇ ಮಂಟಪದಲ್ಲಿ ಮತ್ತೊಂದು ವಿವಾಹವಾದ 11 ಮಕ್ಕಳ ತಂದೆ!

ಇನ್ನೊಬ್ಬ, “ಭಾರತವು ಎಲ್ಲಾ ಪ್ರಾಣಿಗಳು, ಇಲಿಯಿಂದ ಆನೆಯವರಿಗೆ ಪ್ರೀತಿಯಿಂದ ಪೂಜಿಸುವ ದೇಶವಾಗಿದೆ; ಹುಲಿ ಮನುಷ್ಯನೊಂದಿಗೆ ದೋಣಿಯಲ್ಲಿ ಪ್ರಯಾಣಿಸಬಹುದು, ಆನೆ ಮಾರುಕಟ್ಟೆಯಲ್ಲಿ ಗೋಲ್ಗಪ್ಪೆ ತಿನ್ನಬಹುದು ಮತ್ತು ಇಲಿಗಳು ದೇವಸ್ಥಾನದಲ್ಲಿ ಹಾಲು ಕುಡಿಯಬಹುದು. ಪ್ರಕೃತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ನೋಡಿದ್ದ ನೆಟ್ಟಿಗರು ತುಂಬಾ ಇಷ್ಟ ಪಟ್ಟು ಶೇರ್, ಕಾಮೆಂಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News