Viral Video : ತಾತ ಲವ್ ಫೇಲ್ಯೂರ್ ಅನ್ಸತ್ತೆ.. 90 ಹಾಕ್ಕೊಂಡು ಪುಲ್‌ ಫೀಲಿಂಗ್‌..! ವಿಡಿಯೋ ನೋಡಿ

ದೇಶದೆಲ್ಲೆಡೆ ಮದ್ಯಪಾನ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಮಾರ್ಗವಿಲ್ಲ. ಮಾದಕ ಮತ್ತಿನಲ್ಲಿ ಅದೇಷ್ಟೋ ಜನರು ಅಪರಾಧ ಕೃತ್ಯಗಳನ್ನು ಎಸಗಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಮದ್ಯಪ್ರಿಯರು ಕೆಲವೊಂದಿಷ್ಟು ಬಾರಿ ನಗುವಿಗೂ ಕಾರಣರಾಗುತ್ತಾರೆ. ಹೀಗೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಬಹುಷಃ ಲವ್‌ ಫೇಲ್ಯೂರ್‌ ಅನ್ಸುತ್ತೆ ತಾತನೊಬ್ಬ ಎಣ್ಣೆ ಹಾಕಿ ರೋಡ್‌ನಲ್ಲಿ ಸಕತ್‌ ಡಾನ್ಸ್‌ ಮಾಡಿದ್ದಾರೆ.

Written by - Krishna N K | Last Updated : Jan 9, 2023, 05:54 PM IST
  • ದೇಶದೆಲ್ಲೆಡೆ ಮದ್ಯಪಾನ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ.
  • ಕುಡುಕರೆಲ್ಲರೂ ಕೆಟ್ಟವರು ಅಂತಲ್ಲ. ಕುಡಿದು ಮಸ್ತಿ ಮಾಡುವವರು ಸಮಾಜದಲ್ಲಿದ್ದಾರೆ.
  • ಲವ್‌ ಫೇಲ್ಯೂರ್‌ ಅನ್ಸುತ್ತೆ ತಾತನೊಬ್ಬ ಎಣ್ಣೆ ಹಾಕಿ ರೋಡ್‌ನಲ್ಲಿ ಸಕತ್‌ ಡಾನ್ಸ್‌ ಮಾಡಿದ್ದಾರೆ.
Viral Video : ತಾತ ಲವ್ ಫೇಲ್ಯೂರ್ ಅನ್ಸತ್ತೆ.. 90 ಹಾಕ್ಕೊಂಡು ಪುಲ್‌ ಫೀಲಿಂಗ್‌..! ವಿಡಿಯೋ ನೋಡಿ title=

Drunken man dance viral video : ದೇಶದೆಲ್ಲೆಡೆ ಮದ್ಯಪಾನ, ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿ. ಇದನ್ನು ಸಂಪೂರ್ಣವಾಗಿ ನಿಲ್ಲಿಸಲು ಪರ್ಯಾಯ ಮಾರ್ಗವಿಲ್ಲ. ಮಾದಕ ಮತ್ತಿನಲ್ಲಿ ಅದೇಷ್ಟೋ ಜನರು ಅಪರಾಧ ಕೃತ್ಯಗಳನ್ನು ಎಸಗಿರುವ ಘಟನೆಗಳು ವರದಿಯಾಗಿವೆ. ಅಲ್ಲದೆ, ಮದ್ಯಪ್ರಿಯರು ಕೆಲವೊಂದಿಷ್ಟು ಬಾರಿ ನಗುವಿಗೂ ಕಾರಣರಾಗುತ್ತಾರೆ. ಹೀಗೊಂದು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಬಹುಷಃ ಲವ್‌ ಫೇಲ್ಯೂರ್‌ ಅನ್ಸುತ್ತೆ ತಾತನೊಬ್ಬ ಎಣ್ಣೆ ಹಾಕಿ ರೋಡ್‌ನಲ್ಲಿ ಸಕತ್‌ ಡಾನ್ಸ್‌ ಮಾಡಿದ್ದಾರೆ.

ಮದ್ಯ ಬಾಡಿ ಒಳಗೆ ಹೋದ್ರೆ ತಾವು ಎನ್‌ ಮಾಡ್ತಿದಾರೆ ಎಂಬುದನ್ನು ಮರೆತುಬಿಡುತ್ತಾರೆ. ಆ ಸಮಯದಲ್ಲಿ ಅವರು ಎಣ್ಣೆಗೆ ದಾಸರಾಗಿತ್ತಾರೆ. ಭಾವನೆಗಳು ಸಂಪೂರ್ಣ ಹಿಡಿತ ಕಳೆದುಕೊಂಡಿರುತ್ತವೆ. ಕೆಲವೊಂದು ಸರಿ ಆಕ್ರೋಶ ಭರಿತರಾಗಿ ದಾರಿಯಲ್ಲಿ ಸಿಕ್ಕ ಸಿಕ್ಕವರ ಮೇಲೆ ಎರಗುವುದುಂಟು. ಇನ್ನು ಕೆಲವರು ಕೊಲೆ ಮಾಡುವಷ್ಟು ವಿಕೋಪಕ್ಕೂ ಹೋಗುತ್ತಾರೆ. ಹಾಗಂತ ಕುಡುಕರೆಲ್ಲರೂ ಕೆಟ್ಟವರು ಅಂತಲ್ಲ. ಕುಡಿದು ಮಸ್ತಿ ಮಾಡುವವರು ಸಮಾಜದಲ್ಲಿದ್ದಾರೆ.

ಇದನ್ನೂ ಓದಿ: Viral Video : ವಧುವನ್ನು ಎತ್ತಿಕೊಂಡು ಕಿಸ್‌ ಕೊಡಲು ಹೋದ ವರ! ಆದ್ರೆ ಸಿಕ್ಕಿದ್ದು ಬಹುದೊಡ್ಡ ಶಾಕ್‌

ಕುಡುಕರ ಚೇಷ್ಟೆಗಳು ನೋಡುಗರಿಗೆ ಫುಲ್‌ ಎಂಟರ್ಟೈನಮೆಂಟ್ ಆಗಿರುತ್ತವೆ. ಅವರ ಮಾತುಗಳು ಸಂತೋಷಕ್ಕೂ ಕಾರಣವಾಗಿತ್ತವೆ. ಇದೀಗ ಇಂತಹದೊಂದು ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಾದಕ ವ್ಯಸನಿಯೊಬ್ಬ ತನ್ನಷ್ಟಕ್ಕೆ ತಾನೇ ರಸ್ತೆಯಲ್ಲಿ ಡಾನ್ಸ್‌ ಮಾಡಿದ್ದಾನೆ. ಮನಸ್ಸಿನಲ್ಲಿ ಯಾವ ಹಾಡನ್ನು ನೆನೆಪು ಮಾಡಿಕೊಂಡು ಕುಣಿಯುತ್ತಿದ್ದಾನೊ ಗೊತ್ತಿಲ್ಲ. ಆದರೆ, ಸೂಪರ್‌ ಆಗಿ ಹೆಜ್ಜೆ ಹಾಕುತ್ತಿದ್ದಾರೆ. ಇದನ್ನು ವಿಡಿಯೋ ಮಾಡಿರುವ ನೆಟ್ಟಿಗರು ಸಾಂಗ್‌ ಜೋಡಿಸಿ ಇಂಟರ್‌ನೆಟ್‌ನಲ್ಲಿ ಶೇರ್‌ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಕಷ್ಟು ಜನರ ಗಮನ ಸೆಳೆದಿದೆ.

ತಮಿಳು ಹಾಡನ್ನು ವಿಡಿಯೋಗೆ ಜೋಡಣೆ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಕುಡುಕನ ನೃತ್ಯಕ್ಕೆ ತಕ್ಕಂತೆ ಸಖತ್‌ ಆಗಿ ಎಡಿಟ್ ಮಾಡಿದ್ದಾರೆ. ಹಾಡು ಮತ್ತು ಅವರ ಮಧ್ಯಪ್ರೀಯನ ಡಾನ್ಸ್‌ ಚೆನ್ನಾಗಿ ಮ್ಯಾಚ್‌ ಆಗಿದೆ. ಇದುವರೆಗೆ 2 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ನೋಡಿ ಆನಂದಿಸಿದ್ದಾರೆ. ಈ ಬಗ್ಗೆ ಕಮೆಂಟ್ ಮಾಡಿರುವ ನೆಟಿಜನ್ ವೀಕೆಂಡ್ ಮಸ್ತಿ ಸೂಪರ್‌ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ತುಂಬಾ ಜನರು ಕಾಮೆಂಟ್‌ ಮೂಲಕ ಲೇವಡಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News