ಗೋಮಾತೆ - ನಾಗರಾಜನ ಆಟಕ್ಕೆ ಮನಸೋತ ನೆಟ್ಟಿಗರು, ವಿಡಿಯೋ ವೈರಲ್‌

Cow Snake Video : ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಕೆಲವು ಜನರ ಮನಗೆಲ್ಲುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಎಲ್ಲರ ಚಿತ್ತ ಸೆಳೆದಿದೆ. ಕಾಮಧೇನು ಮತ್ತು ನಾಗರಾಜನ ಸ್ನೇಹಕ್ಕೆ ನೆಟ್ಟಿಗರು ಮನಸೋತಿದ್ದಾರೆ.   

Written by - Chetana Devarmani | Last Updated : Aug 5, 2023, 01:22 PM IST
  • ಗೋವು - ಹಾವಿನ ಹೃದಯಸ್ಪರ್ಶಿ ವಿಡಿಯೋ
  • ಗೋಮಾತೆ - ನಾಗರಾಜನ ಆಟಕ್ಕೆ ಮನಸೋತ ಜನರು
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್
ಗೋಮಾತೆ - ನಾಗರಾಜನ ಆಟಕ್ಕೆ ಮನಸೋತ ನೆಟ್ಟಿಗರು, ವಿಡಿಯೋ ವೈರಲ್‌   title=

Snake Cow Video Viral: ಗೋಮಾತೆಯನ್ನು ಹಿಂದೂ ಧರ್ಮದಲ್ಲಿ ದೇವರ ಸಮಾನವಾಗಿ ಪೂಜಿಸುವುದು ವಾಡಿಕೆ. ಹಸುವನ್ನು ಕಾಮಧೇನು ಎಂದು ಕರೆಯುತ್ತಾರೆ. ಮುಕ್ಕೋಟಿ ದೇವರು ಹಸುವಿನ ಮೈಯಲ್ಲಿ ವಾಸಿಸುತ್ತಾರೆ ಎಂಬುದು ನಂಬಿಕೆ. ಅದರಲ್ಲೂ ಆಕಳಿನ ಬಾಲದ ಬಳಿ ಸಾಕ್ಷಾತ್‌ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಇಂತಹ ಗೋಮಾತೆಯ ಎದುರು ವಿಷಸರ್ಪ ಕೂಡ ತಲೆ ಬಾಗುತ್ತದೆ ಎಂಬುದಕ್ಕೆ ಈ ವೈರಲ್‌ ವಿಡಿಯೋ ಸಾಕ್ಷಿಯಾಗಿದೆ. 

ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಇದರಲ್ಲಿ ಕೆಲವು ಜನರ ಮನಗೆಲ್ಲುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ಎಲ್ಲರ ಚಿತ್ತ ಸೆಳೆದಿದೆ. ಕಾಮಧೇನು ಮತ್ತು ನಾಗರಾಜನ ಸ್ನೇಹಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಆಕಳು ಮತ್ತು ನಾಗರ ಹಾವಿನ ಈ ಸ್ನೇಹ ಹೃದಯಸ್ಪರ್ಶಿಯಾಗಿದೆ. ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: 300 ಕೆಜಿ ಹಸುವನ್ನು ನುಂಗಿದ ದೈತ್ಯ ಹೆಬ್ಬಾವು.. ದಂಗಾಗಿ ನೋಡುತ್ತ ನಿಂತ ಜನರು

ಬಯಲು ಪ್ರದೇಶದಲ್ಲಿ ಹಸು ನಿಂತಿದೆ. ಅದರೆದುರು ನಾಗರ ಹಾವು ಹೆಡೆ ಎತ್ತಿ ನಿಂತಿದೆ. ಆಕಳನ್ನು ನೋಡಿ ಏನೂ ಮಾಡದೇ ಹೆಡೆಯನ್ನು ಅತ್ತಿಂದಿತ್ತ ಅಲ್ಲಾಡಿಸುತ್ತದೆ. ಹೀಗೆ ಹಸು ಕೂಡ ನಾಗರಾಜನನ್ನು ನೋಡಿ ಅದರ ಬಳಿ ಹೋಗುತ್ತದೆ. ಆಕಳು ನಾಗರಾಜನ ಹೆಡೆಯನ್ನು ನೆಕ್ಕುತ್ತದೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

 

 

ಆಕಳು ಮತ್ತು ಹಾವಿನ ಈ ವಿಡಿಯೋವನ್ನು IFS ಅಧಿಕಾರಿ ಸುಶಾಂತ್‌ ನಂದಾ ಶೇರ್‌ ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಮನಗೆಲ್ಲುತ್ತಿದೆ. ಇದನ್ನು ಅನೇಕರು ಶೇರ್‌ ಮಾಡಿಕೊಂಡಿದ್ದಾರೆ. ಅಲ್ಲದೇ ಕಾಮಧೇನು ಮತ್ತು ನಾಗರಾಜನ ಆಟಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಷ ಸರ್ಪವೇ ಗೋಮಾತೆಯ ಎದುರು ತಲೆಬಾಗಿರುವುದು ನಿಜಕ್ಕೂ ಆಶ್ಚರ್ಯಚಕಿತವಾಗಿದೆ. 

ಇದನ್ನೂ ಓದಿ: OMG 2 Trailer: ವಿವಾದ ಸೃಷ್ಟಿಸುವುದಾ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸುವ ʻಒಎಂಜಿ 2’ ಸಿನಿಮಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News