Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ

Train viral video : ಯುವಕನೊಬ್ಬ ರೈಲು ಹಳಿಯ ಕೆಳಗೆ ಮಲಗಿಕೊಂಡು ಹುಚ್ಚಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಜೀವ ಭಯವಿಲ್ಲದೆ ಪ್ರಾಣದ ಜೊಲ್ಲೆ ಮಂಗಾಟ ಆಡಿದ ಯುವಕನಿಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

Written by - Krishna N K | Last Updated : Jul 7, 2023, 05:01 PM IST
  • ಯುವಕನೊಬ್ಬ ಹುಚ್ಚಾಟವಾಡಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ̤
  • ರೈಲು ಹಳಿಯ ಕೆಳಗೆ ಮಲಗಿಕೊಂಡು ಹುಚ್ಚಾಟವಾಡಿರುವ ಯುವಕ.
  • ಯುವಕನ ಹುಚ್ಚು ಸಾಹಸಕ್ಕೆ ನೆಟ್ಟಿಗರು ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.
Viral Video: ಮನ್ಯಾಗ ಹೇಳಿ ಬಂದಿ ಏನೋ ತಮ್ಮಾ..? ಯಮನ ಜೊತೆ ಜಲ್ಲಾಟ ಆಡಿದ ಯುವಕ title=

Viral Video : ಇತ್ತೀಚಿನ ದಿನಗಳಲ್ಲಿ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ನಾನಾ ಸಾಹಸಗಳನ್ನು ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೆಲವರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯುವಕನೊಬ್ಬ ರೈಲು ಹಳಿಯ ಕೆಳಗೆ ಮಲಗಿದ್ದ.. ಇದ್ದಕ್ಕಿದ್ದಂತೆ ರೈಲು ಹಳಿಯ ಮೇಲೆ ವೇಗವಾಗಿ ಹೋಗಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಸಹ ಯುವಕನ ಪ್ರಾಣ ಹಾರಿ ಹೋಗುತ್ತಿತ್ತು. ಈ ವಿಡಿಯೋವನ್ನು ಅಭಿಷೇಕ್ ನರೇಡಾ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನೆಟಿಜನ್‌ಗಳು ಕಮೆಂಟ್‌ಗಳ ಮೂಲಕ ಯುವಕನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಲ್ಲ ರಿಲೀಫ್

ಇನ್ನು ವೀಡಿಯೋ ಶೇರ್ ಮಾಡಿರುವ ಅಭಿಷೇಕ್ ನರೇದಾ, ಈ ವೈರಲ್ ವೀಡಿಯೋ ಎಲ್ಲಿಂದ ಬಂತು ಎಂದು ತಿಳಿದಿಲ್ಲ. ಆದರೆ ಯುವಕರು ಇಂತಹ ವಿಡಿಯೋ ಮಾಡುವುದು ಸಂಪೂರ್ಣ ತಪ್ಪು. ಇಂತಹವರ ವಿರುದ್ಧ ರೈಲ್ವೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೀರ್ಷಿಕೆ ಬರೆದು ಆಗ್ರಹಿಸಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ರೈಲ್ವೇ ಪೊಲೀಸ್ ಪಡೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೇಗೆ ಟ್ಯಾಗ್ ಮಾಡಲಾಗಿದೆ. 

ವೀಡಿಯೊದಲ್ಲಿ, ನೀಲಿ ಶರ್ಟ್ ಧರಿಸಿದ್ದ ಯುವಕನೊಬ್ಬ ಟ್ರ್ಯಾಕ್ ಮತ್ತು ನೆಲದ ನಡುವೆ ಮಲಗಿದ್ದಾನೆ. ಕೆಲವೇ ಕ್ಷಣಗಳಲ್ಲಿ ರೈಲು ಅದೇ ದಿಕ್ಕಿನಲ್ಲಿ ಅತಿವೇಗದಲ್ಲಿ ಹಳಿಯ ಮೇಲೆ ಚಲಿಸಿದೆ. ಅತಿವೇಗದಲ್ಲಿ ರೈಲು ಹಾದು ಹೋದಾಗ ಯುವಕ ಯಾವುದೇ ಭಯವಿಲ್ಲದೆ ಆರಾಮವಾಗಿ ಮಲಗಿರುವುದನ್ನು ವೈರಲ್‌ ವಿಡಿಯೋದಲ್ಲಿ ನೋಡಬಹದು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News