World's Dirtiest Man: ವಿಶ್ವದ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ..!

ದಶಕಗಳಿಂದ ಸ್ನಾನ ಮಾಡದೆ ಒಂಟಿಯಾಗಿ ವಾಸಿಸುತ್ತಿದ್ದ ಅಮೌ ಹಾಜಿ ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾದರು.

Written by - Puttaraj K Alur | Last Updated : Oct 25, 2022, 07:29 PM IST
  • ವಿಶ್ವದ ಅತ್ಯಂತ ಕೊಳಕು ಮನುಷ್ಯ ಖ್ಯಾತಿಯ ಇರಾನ್ ಮೂಲದ ಅಮೌ ಹಾಜಿ ನಿಧನ
  • ಸುಮಾರು 60 ವರ್ಷಗಳಿಂದ ಸ್ನಾನವನ್ನೇ ಮಾಡದೆ ಒಂಟಿಯಾಗಿ ವಾಸಿಸುತ್ತಿದ್ದ ಅಮೌ ಹಾಜಿ
  • ಅನಾರೋಗ್ಯಕ್ಕೆ ಒಳಗಾಗುತ್ತೇನೋ ಅನ್ನೋ ಭಯದಲ್ಲಿ ಹಾಜಿ ಸ್ನಾನವನ್ನೇ ಮಾಡುತ್ತಿರಲಿಲ್ಲವಂತೆ
World's Dirtiest Man: ವಿಶ್ವದ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ..! title=
ವಿಶ್ವದ ಅತ್ಯಂತ ಕೊಳಕು ಮನುಷ್ಯ ಇನ್ನಿಲ್ಲ!

ನವದೆಹಲಿ: ಸುಮಾರು 60 ವರ್ಷಗಳಿಂದ ಸ್ನಾನವನ್ನೇ ಮಾಡದೆ ‘ವಿಶ್ವದ ಅತ್ಯಂತ ಕೊಳಕು ಮನುಷ್ಯ’ ಎಂದು ಖ್ಯಾತಿ ಗಳಿಸಿದ್ದ ಇರಾನ್ ಮೂಲದ ಅಮೌ ಹಾಜಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.  

ದಶಕಗಳಿಂದ ಸ್ನಾನ ಮಾಡದೆ ಒಂಟಿಯಾಗಿ ವಾಸಿಸುತ್ತಿದ್ದ ಅಮೌ ಹಾಜಿ ದಕ್ಷಿಣ ಪ್ರಾಂತ್ಯದ ಫಾರ್ಸ್‌ನ ದೇಜ್ಗಾ ಗ್ರಾಮದಲ್ಲಿ ಭಾನುವಾರ ನಿಧನರಾದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: UK Prime Minister: ಇಂಗ್ಲೆಂಡ್‌ನ ನೂತನ ಪ್ರಧಾನಿಯಾಗಿ ರಿಷಿ ಸುನಕ್‌ ಆಯ್ಕೆ

ತಾನು ಎಲ್ಲಿ ಅನಾರೋಗ್ಯಕ್ಕೆ ಒಳಗಾಗುತ್ತೇನೋ ಅನ್ನೋ ಭಯದಲ್ಲಿ ಹಾಜಿ ಸ್ನಾನವನ್ನೇ ಮಾಡುತ್ತಿರಲಿಲ್ಲವಂತೆ. ಹೀಗಾಗಿ ದೀರ್ಘಕಾಲ ಸ್ನಾನ ಮಾಡದ ಕಾರಣ ಅವರನ್ನು ‘ವಿಶ್ವದ ಅತಿ ಕೊಳಕು ಮನುಷ್ಯ’ ಎಂದು ಕರೆಯಲಾಗುತ್ತಿತ್ತು.

ಕೆಲವು ತಿಂಗಳ ಹಿಂದಷ್ಟೇ ಮೊದಲ ಬಾರಿಗೆ ದೇಜ್ಗಾದ ಗ್ರಾಮಸ್ಥರು ಆತನನ್ನು ತೊಳೆಯಲು ಸ್ನಾನಗೃಹಕ್ಕೆ ಕರೆದೊಯ್ದಿದ್ದರಂತೆ. ಅಂದು ಕೂಡ ಆತ ತನಗೆ ಸ್ನಾನ ಬೇಡವೆಂದು ಹಠ ಮಾಡುತ್ತಿದ್ದನಂತೆ.

ಇದನ್ನೂ ಓದಿ: ಬ್ರಿಟಿಷ್ ಎಂಪೈರ್‌ಗೆ ಭಾರತೀಯ ದೊರೆ : ರಿಷಿ ಸುನಕ್‌ ಒಟ್ಟು ಆಸ್ತಿ ಎಷ್ಟು ಗೊತ್ತಾ..!

2013ರಲ್ಲಿ ಹಾಜಿ ಜೀವನದ ಬಗ್ಗೆ ಇರಾನ್ ಮಾಧ್ಯಮಗಳು ‘ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ’ ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News