ಪ್ರತಿ ತಿಂಗಳು ನಿಮ್ಮ ಖಾತೆ ಒಂದಿಷ್ಟು ಅಂತ ಹಣ ಬರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತೆ ಹೇಳಿ. ಅದಕ್ಕೆ ನೀವು ಹೂಡಿಕೆ ಮಾಡಬೇಕು.ಇದಕ್ಕೆ ವಿವಿಧ ಹೂಡಿಕೆ ಆಯ್ಕೆಗಳಿವೆ. ವುಗಳಿಗೆ ಸೇರಿದರೆ ಪ್ರತಿ ತಿಂಗಳು ಹಣ ಪಡೆಯಬಹುದು. ಈಗ ಯಾವ ಯೋಜನೆಗಳು ಪ್ರತಿ ತಿಂಗಳು ಹಣವನ್ನು ನೀಡುತ್ತವೆ ಎಂದು ತಿಳಿಯೋಣ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ - NPS ಸರ್ಕಾರದ ಯೋಜನೆಯಾಗಿದೆ. ಈ ನಿಧಿಯ ನಿರ್ವಹಣೆಯ ಜವಾಬ್ದಾರಿಯನ್ನು PFRDA ವಹಿಸಿಕೊಳ್ಳುತ್ತದೆ. ಇದಕ್ಕೆ ಸೇರುವ ಮೂಲಕ ನೀವು ಪ್ರತಿ ತಿಂಗಳು ಹಣವನ್ನು ಪಡೆಯಬಹುದು. 60 ವರ್ಷ ದಾಟಿದ ನಂತರವೇ ನೀವು ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.