ಇದನ್ನು ತಿನ್ನುವುದರಿಂದ ಆಗೋ ಪ್ರಯೋಜನಗಳೇನು ಗೊತ್ತಾ..?

  • Zee Media Bureau
  • May 5, 2023, 05:32 PM IST

ಬೇಸಿಗೆ ಆರಂಭವಾಗುತ್ತಿದ್ದಂತೆ ಮಾವಿನ ಸೀಸನ್ ಕೂಡಾ ಶುರುವಾಗುತ್ತದೆ. ಮಾವಿನ ಹಣ್ಣಿನಲ್ಲಿ ಹಲವು ವಿಧಗಳಿವೆ. ರಸಪುರಿ, ಅಲ್ಫಾನ್ಸೊ, ಮಲ್ಲಿಕಾ, ತೋತಾಪುರಿ, ಬೈಗನಪಲ್ಲಿ, ಪೈರಿ, ನೀಲಂ, ಮಲ್ಗೋವಾ ಹೀಗೆ ನೂರಾರು ತಳಿಗಳಿವೆ. ಈ ಹಣ್ಣಿನ ರುಚಿಯಿಂದಾಗಿ ಮಾವನ್ನು ಇಷ್ಟ ಪಡದವರು ಬಹಳ ಕಡಿಮೆ. ಮಾವಿನ ಹಣ್ಣು ಮಾತ್ರವಲ್ಲ ಮಾವಿನ ಕಾಯಿಯನ್ನು ಕೂಡಾ ಬಾಯಿ ಚಪ್ಪರಿಸಿಕೊಂಡು ತಿನ್ನುವವರಿದ್ದಾರೆ. ಮಾವಿನ ಕಾಯಿಗೆ ಉಪ್ಪು ಮೆಣಸು ಹಾಕಿಕೊಂಡು ತಿಂದರೆ ಆ ರುಚಿಗೆ ಸಾಟಿಯೇ ಇಲ್ಲ. ಇದೇ ಕಾರಣಕ್ಕೆ ಬೇಸಿಗೆ ಬಂತೆಂದರೆ ಬಹಳಷ್ಟು ಮಂದಿಗೆ ಮಾವಿನಕಾಯಿಗೆ  ಉಪ್ಪು, ಮೆಣಸು ಹಾಕಿ ತಿನ್ನುವ ಅಭ್ಯಾಸವಿರುತ್ತದೆ. 

Trending News