ಮೈಸೂರಿನ ಗುಂಡಿಗಳ ಸಮಸ್ಯೆ ಹಿನ್ನೆಲೆಯಲ್ಲಿ ಅಧಿಕಾರಿ, ಪಾಲಿಕೆ ಸದಸ್ಯರ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ಏರಿಯಾದಲ್ಲಿ ಏನಾದ್ರೂ ಸಮಸ್ಯೆ ಇದ್ರೆ ಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಕೂರಿ ಎಂದು ಜನರಿಗೆ ಕರೆ ನೀಡಿದ್ದಾರೆ. ನಗರಪಾಲಿಕೆ ಸದಸ್ಯರ ಕುತ್ತಿಗೆ ಪಟ್ಟಿ ಯಾವಾಗ ಹೀಡಿತೀರಾ ಆಗಷ್ಟೇ ನಿಮ್ಮ ಕೆಲಸ ಆಗುತ್ತೆ ಎಂದಿದ್ದಾರೆ.