ಹುಟ್ಟು ಹಬ್ಬಕ್ಕೆ ಭರ್ಜರಿ ಮಟನ್ ಬಾಡ್ ಊಟ

  • Zee Media Bureau
  • Jun 1, 2022, 09:20 PM IST

ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದ ಮಾಜಿ ಶಾಸಕ ವೈ.ಸಂಪಂಗಿ, ಅಭಿಮಾನಿಗಳಿಗೆ ಬಿಸಿ ರಾಗಿ ಮುದ್ದೆ ಮಟನ್ ಊಟ ಆಯೋಜನೆ ಮಾಡಿದ್ರು. ಚುನಾವಣೆಯ ಪೂರ್ವ ತಯಾರಿಯಲ್ಲಿ ಸಂಪಂಗಿ ಮಟನ್ ಊಟ ವ್ಯವಸ್ಥೆ ಮಾಡಿದ್ರು.  ಕೋಲಾರ ಜಿಲ್ಲೆಯ ಕೆಜಿಎಫ್ ನ ನಾಗಶೆಟ್ಟಿಹಳ್ಳಿಯಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿಗೆ ಮಾಂಸದೂಟ ಮತ್ತು ರಾಗಿ ಮುದ್ದೆ ಊಟ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಮನರಂಜನೆ ಕಾರ್ಯಕ್ರಮದಲ್ಲಿ ನೃತ್ಯ ತಂಡಗಳು ಭಾಗಿಯಾಗಿದ್ದವು. ಮಾಜಿ ಶಾಸಕ ವೈ.ಸಂಪಂಗಿಗೆ ಈಗ 51ರ ಸಂಭ್ರಮದಲ್ಲಿ ಸಚಿವ‌ ಮುನಿರತ್ನ ಸೇರಿದಂತೆ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ವರ್ತೂರು ಪ್ರಕಾಶ್, ಕೋಡಿಹಳ್ಳಿ ಮಂಜುನಾಥ್ ಭಾಗಿಯಾಗಿದ್ದರು. 

Trending News