ದೇಶದ ಭದ್ರತೆಯಲ್ಲಿ ಗೇಮ್ ಚೇಂಜರ್ ಎನಿಸಲಿರುವ ದೂರಗಾಮಿ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗದಲ್ಲಿ ಭಾರತ ಭಾನುವಾರ ಯಶಸ್ವಿಯಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದೆ. ಶಬ್ದದ ವೇಗಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಮುನ್ನುಗ್ಗುವ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗದ ಮೂಲಕ ಇಂಥ ಸಂಕೀರ್ಣ ಸೇನಾ ತಂತ್ರಜ್ಞಾನವುಳ್ಳ ಅಮೆರಿಕ, ರಷ್ಯಾ, ಚೀನಾದಂಥ ಎಲೈಟ್ ದೇಶಗಳ ಗ್ರೂಪ್ಗೆ ಭಾರತ ಸೇರ್ಪಡೆಯಾಗಿದೆ.