ಮಳೆಗಾಲದಲ್ಲಿ ಏಷ್ಟೇ ಎಚ್ಚರ ವಹಿಸಿದ್ರೂ ಒಂದು ಬಾರಿಯಾದ್ರೂ ಜ್ವರ, ಶೀತ, ನೆಗಡಿ ಕಾಣಿಸಿಕೊಳ್ಳುತ್ತೆ. ಈ ಬಾರಿಯ ಮಳೆಗಾಲ ಹೆಚ್ಚು ತೀವ್ರವಾಗಿದ್ದು, ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ರೋಗಗಳು ಸುಲಭದಲ್ಲಿ ದಾಳಿ ಮಾಡಿಬಿಡುತ್ತಿವೆ. ಈ ಮಾನ್ಸೂನ್ ರೋಗಗಳು ಬಾರದಂತೆ ತಡೆಗಟ್ಟಲು ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಹಲವು ಗೃಹ ಔಷಧಿಗಳ ಮೊರೆ ಹೋಗ್ತೀವಿ. ಅದ್ರಲ್ಲಿ ಬಿಸಿ ನೀರಿನ ಸೇವನೆ ಸರ್ವ ರೋಗಕ್ಕೂ ರಾಮಬಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ಮಳೆಗಾಲದಲ್ಲಿ ಬಿಸಿ ನೀರಿನ ಉಪಯೋಗ ಹೇಗಿರಬೇಕು, ಅದ್ರಿಂದ ಸಿಗುವ ಆರೋಗ್ಯ ಪ್ರಯೋಜನೆಗಳೇನು? ಹೇಳ್ತೀವಿ, ಈ ಸ್ಟೋರಿ ನೋಡಿ.